ದಕ್ಷಿಣ ಕನ್ನಡ

ರೈ, ನಾಯ್ಕ್ ಪ್ರಮಾಣ ಮಾಡಲಿ: ಲೋಲಾಕ್ಷ

Published On :

ಮಂಗಳೂರು: ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಚುನಾವಣೆಯನ್ನು ನ್ಯಾಯಸಮ್ಮತವಾಗಿ ಮಾಡುವ ಕುರಿತು ಪ್ರಮಾಣ ಮಾಡಿ ಹೇಳಲಿ ಎಂದು ಬಂಟ್ವಾಳ ಕ್ಷೇತ್ರದ ಭಾರತೀಯ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಲೋಲಾಕ್ಷ ಅವರು ಆಗ್ರಹಿಸಿದ್ದಾರೆ.
 ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಅವರಿಂದ ದಲಿತರಿಗೆ ಸೂಕ್ತ ಸ್ಥಾನಮಾನ ದೊರಕದ ಕಾರಣ, ದಲಿತರ ರಕ್ಷಣೆ, ಬಲಾಢ್ಯ, ಉದ್ದೀಪನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿಎಸ್ ಪಕ್ಷಗಳಿಂದ ರಾಜ್ಯಪರ ಸರ್ಕಾರ ರಚನೆ ಸಾಧ್ಯವಿಲ್ಲ. ಚುನಾವಣೆಗಾಗಿ ಪ್ರತಿ ಕ್ಷೇತ್ರದಲ್ಲಿಯೂ ಹತ್ತಾರು ಕೋಟಿ ಬಂಡವಾಳ ಹೂಡಿಕೆ ಮಾಡಬಲ್ಲ ವ್ಯಕ್ತಿಗಳನ್ನೇ ಆಯ್ಕೆ ಮಾಡಿ, ಗೆಲುವಿಗಾಗಿ ವ್ಯೂಹ ರಚಿಸುತ್ತಾರೆ. ಪಕ್ಷ ಗೆದ್ದ ಮೇಲೆ ತಾವು ಹೂಡಿರುವ ಬಂಡವಾಳವನ್ನು ವೃದ್ಧಿಸಿಕೊಳ್ಳುವಲ್ಲಿ ಚಿಂತಿಸಿ ಅದಕ್ಕನುಗುಣವಾಗಿ ಆಡಳಿತ ನಡೆಸುತ್ತಾರೆ  ಎಂದು ಹೇಳಿದರು.
--
ಲೋಬೋಗೆ ಬೆಂಬಲ: ಎಂ.ಡಿ.ಅಸ್ಲಂ ಘೋಷಣೆ
ಮಂಗಳೂರು: ಮಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ಬೆಂಬಲಿಸುವುದಾಗಿ ಜೆಡಿಎಸ್ ಉಚ್ಚಾಟಿತ ಮುಖಂಡ ಎಂ.ಡಿ. ಅಸ್ಲಂ ಹೇಳಿದ್ದಾರೆ.
 ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನನ್ನು ಜೆಡಿಎಸ್‌ನಿಂದ ಉಚ್ಚಾಟಿಸಿದ ಬಗ್ಗೆ ಯಾವುದೇ ಪತ್ರ ಬಂದಿಲ್ಲ, ತಾನು ಜಿಲ್ಲಾ ಅಲ್ಪಸಂಖ್ಯಾತ ಘಟಕಾಧ್ಯಕ್ಷತೆಗೆ ಹಾಗೂ ಪಕ್ಷಕ್ಕೆ ರಾಜಿನಾಮೆ ನೀಡಿರುವುದು ಅಂಗೀಕಾರವೂ ಆಗಿಲ್ಲ. ಮೇ 15ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ. ಅವರ ಬಗ್ಗೆ ತನಗೆ ಗೌರವವಿದೆ, ತಾನು ಅಲ್ಲಿವರೆಗೆ ಕಾದು ಮುಂದಿನ ನಡೆ ನಿರ್ಧರಿಸುತ್ತೇನೆ, ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳಿದರು.
 ತಾನು ಬೆಂಬಲಿಗರ ಜತೆ ಕಳೆದ 4 ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದೇನೆ. ತಾನು, ಬೆಂಬಲಿಗರು ಕಾಂಗ್ರೆಸ್ ನಾಯಕರಿಗೆ ನಿಂದಿಸಿದ ಸೀಡಿ ಬಿಡುಗಡೆ ಮಾಡುವುದಾಗಿ ಎಚ್‌ಡಿಕೆ ಯುವಸೇನೆ ಅಧ್ಯಕ್ಷರು ತಿಳಿಸಿದ್ದು, ತಾನು ಕೂಡ ಯುವಸೇನೆ ಅಧ್ಯಕ್ಷರ ಕುರಿತ ಸೀಡಿ ಬಿಡುಗಡೆ ಮಾಡುವುದಾಗಿ ಸವಾಲು ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.