ಸಿದ್ದರಾಮಯ್ಯ ತುಷ್ಟೀಕರಣ ರಾಜಕೀಯ: ರಾಧಾಕೃಷ್ಣ ಭಟ್
ಪುತ್ತೂರು: ಗೋಹತ್ಯೆ ನಿಷೇಧ ಮಸೂದೆಯನ್ನು ರದ್ದುಪಡಿಸುವುದಾಗಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಒಂದು ವರ್ಗದ ತುಷ್ಟೀಕರಣ ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಖಂಡನೀಯ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಬಿ. ರಾಧಾಕೃಷ್ಣ ಭಟ್ ಲೇವಡಿ ಮಾಡಿದರು. ಅವರು ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದವನ್ನು ಸೃಷ್ಟಿಸುವ ಕಾಂಗ್ರೆಸಿಗರು ಸಾಮರಸ್ಯ ಕಾಪಾಡುವ ಕೆಲಸ ಮಾಡದೆ ಒಂದು ವರ್ಗವನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಗೋಹತ್ಯಾ ನಿಷೇಧ ಮಸೂದೆಯನ್ನು ಹೇಗೆ ರದ್ದು ಪಡಿಸುತ್ತಾರೆ ಎಂಬುವುದನ್ನು ನಾವೂ ನೋಡುತ್ತೇವೆ ಎಂದು ಸವಾಲು ಹಾಕಿದರು. ಗೋ ಹತ್ಯೆ ನಿಷೇಧಕ್ಕೆ ಮುಸಲ್ಮಾನರೇ ವಿರೋಧ ವ್ಯಕ್ತಪಡಿಸುತ್ತಿಲ್ಲ. ರಾಜಕೀಯ ಪಕ್ಷಗಳು ಜಾತಿ ರಾಜಕೀಯವನ್ನು ಬಿಟ್ಟುಬಿಡುವಂತೆ ಆಗ್ರಹಿಸಿದರು. ಬಜರಂಗದಳದ ಜಿಲ್ಲಾ ಸಂಚಾಲಕ ದಿನೇಶ್ ಕುಮಾರ್ ಜೈನ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಡೀಕಯ್ಯ ಪೆರುವೋಡಿ, ಜಿಲ್ಲಾ ಗೋರಕ್ಷ ಪ್ರಮುಖ ಧನ್ಯಕುಮಾರ್, ಬಜರಂಗದಳ ತಾಲೂಕು ಸಹಸಂಚಾಲಕ ರಾಜೇಶ್ ಪರಿಗೇರಿ ಇದ್ದರು.
--
'ಕಾಲ ಮಿತಿ ಯಕ್ಷಗಾನ' ಚಿಂತನೆ ಅಗತ್ಯ: ಡಾ. ಹೆಗ್ಗಡೆ
ಮೂಡುಬಿದಿರೆ: ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ರಾತ್ರಿಯಿಡೀ ಆಟ ನೋಡುವವರ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕಾಲಮಿತಿ ಯಕ್ಷಗಾನವೂ ಸೇರಿದಂತೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ವಿಚಾರವಾಗಿ ಕರಾವಳಿಯ ಎಲ್ಲ ಯಕ್ಷಗಾನ ಮೇಳಗಳ ಯಜಮಾನರ ಸಭೆಯೊಂದನ್ನು ಕರೆಯುವ ಚಿಂತನೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ವಾಮಂಜೂರು ಶ್ರೀ ಅಮೃತೇಶ್ವರ ದೇವಳದ ಹೊರಾಂಗಣದಲ್ಲಿ ಜಾಣುಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ಜೆ. ಶೆಟ್ಟಿ- ಡಾ. ಸತ್ಯಾ ಎಸ್. ಶೆಟ್ಟಿ ಅವರು ಏರ್ಪಡಿಸುತ್ತ ಬಂದಿರುವ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟದ ಬೆಳ್ಳಿ ಹಬ್ಬದಲ್ಲಿ ಅವರು ಮಾತನಾಡಿದರು. ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಆಶೀರ್ವಚನವಿತ್ತರು.
ಸನ್ಮಾನ: ಮೇಳದ ಕಲಾವಿದರು ಹಾಗೂ ಸಿಬ್ಬಂದಿ (ಒಟ್ಟು 69) ಯನ್ನು ಪೇಜಾವರ ಶ್ರೀಪಾದರು ಹಾಗೂ ವೀರೇಂದ್ರ ಹೆಗ್ಗಡೆ ಅವರು ಅಭಿನಂದಿಸಿದರು. ವಾಮಂಜೂರು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ. ಚಂದ್ರಹಾಸ ರೈ, ಕೃಷ್ಣ ಡಿ. ಶೆಟ್ಟಿ, ಶೀಲಾ ಕೆ. ಶೆಟ್ಟಿ, ಶಿವರಾಮ .ಜೆ, ಶೆಟ್ಟಿ, ಜಯರಾಮ .ಜೆ ಶೆಟ್ಟಿ ಇದ್ದರು. ಸುಧಾಕರ ರಾವ್ ಪೇಜಾವರ, ಶರತ್ ಶೆಟ್ಟಿ ಪಡುಬಳ್ಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

