ದಕ್ಷಿಣ ಕನ್ನಡ

ಮತಗಟ್ಟೆ ಸುತ್ತ ಮೊಬೈಲ್ ಬಳಕೆ ನಿಷೇಧ

Published On :

ಮಂಗಳೂರು: ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹರ್ಷಗುಪ್ತ ಮನವಿ ಮಾಡಿದ್ದಾರೆ.
ಮತದಾನ ಕೇಂದ್ರದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾರೂ ಮೊಬೈಲ್ ಫೋನ್ ಬಳಸಲು ಅವಕಾಶವಿಲ್ಲ. ಚುನಾವಣಾ ಅಭ್ಯರ್ಥಿಯ ಪರ ಮತದಾನ ಕೇಂದ್ರದಲ್ಲಿ ಹಾಜರಿರುವ ಮತಗಟ್ಟೆ ಏಜೆಂಟ್ ಮತಗಟ್ಟೆಗೆ ಕಡ್ಡಾಯವಾಗಿ ಮೊಬೈಲ್ ಫೋನ್ ತರಬಾರದಾಗಿ ಸೂಚಿಸಿದೆ. ಮತದಾರರು ಸರತಿ ಸಾಲಿನಲ್ಲಿ ಬಂದು ಶಾಂತಿಯುತವಾಗಿ ಮತದಾನ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮತದಾರರು ಆಯೋಗ ಸೂಚಿಸಿದ ಯಾವುದಾದರೊಂದು ಗುರುತಿನ ಚೀಟಿಯಂದಿಗೆ ಮತಗಟ್ಟೆ ಅಧಿಕಾರಿಗೆ ಅದನ್ನು ತೋರಿಸಬೇಕು. ಮತದಾರರ ಪಟ್ಟಿಯಲ್ಲಿ ಮತದಾರನ ಕ್ರಮ ಸಂಖ್ಯೆ ಮೊದಲೇ ತಿಳಿದುಕೊಂಡಿದ್ದಲ್ಲಿ ಮತಗಟ್ಟೆ ಅಧಿಕಾರಿಗೆ ಸಹಾಯವಾಗುವುದು. ಆಯೋಗ ನೀಡಿದ ಮತದಾನ ಚೀಟಿಯಲ್ಲಿ ಈ ಮಾಹಿತಿ ಇರುತ್ತದೆ. ಈ ಚೀಟಿಯನ್ನು ಕೂಡ ಇತರೆ ಗುರುತಿನ ಚೀಟಿಯಂತೆ ಬಳಸಬಹುದು ಎಂದಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರು ಕಡ್ಡಾಯ: ಮತದಾನ ಚೀಟಿ ಕಳೆದುಹೋಗಿದ್ದಲ್ಲಿ ಅಥವಾ ಬಿಎಲ್ಒ ಅವರಿಂದ ಪಡೆಯದಿದ್ದರೆ ಮತಗಟ್ಟೆ ಹೊರಗೆ ಬಿಎಲ್ಒ ಅವರಿಂದ ಮತದಾನ ದಿನ ಚೀಟಿ ಪಡೆದುಕೊಳ್ಳಬಹುದು. ಈ ಚೀಟಿ ಪಡೆಯದೆಯೇ ಇತರ ಗುರುತಿನ ಚೀಟಿ ಮೂಲಕ ಮತದಾನ ಮಾಡಬಹುದು. ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕಾದ್ದು ಕಡ್ಡಾಯ. ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತದಾನಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಮತದಾನ ಹೇಗೆ?: ಮೊದಲು ಮತಗಟ್ಟೆ ಅಧಿಕಾರಿ ಮತದಾರರನ್ನು ಗುರುತಿಸಿದ ನಂತರ ಎರಡನೇ ಮತಗಟ್ಟೆ ಅಧಿಕಾರಿ ಬಳಿಗೆ ತೆರಳಬೇಕು. ಎಡಗೈ ಉಂಗುರ ಬೆರಳಿಗೆ ಗುರುತಿನ ಶಾಹಿ ಹಾಕಿಸಿಕೊಂಡು 17ಎ ರಿಜಿಸ್ಟರ್ನಲ್ಲಿ ಸಹಿ ಮಾಡಿ ಕ್ರಮಾಂಕ ಸಂಖ್ಯೆ ಚೀಟಿ ಪಡೆದುಕೊಳ್ಳಬೇಕು. ನಂತರ ಮೂರನೇ ಮತಗಟ್ಟೆ ಅಧಿಕಾರಿ ಬಳಿಗೆ ಹೋಗಿ ಕ್ರಮಾಂಕ ಸಂಖ್ಯೆ ಚೀಟಿಯನ್ನು ಅವರಿಗೆ ನೀಡಿ ಅವರು ಕಂಟ್ರೋಲ್ ಯುನಿಟ್ ಬಟನ್ ಒತ್ತಿದ ಬಳಿಕ ಗುಪ್ತ ಮತದಾನಕ್ಕೆ ವ್ಯವಸ್ಥೆ ಮಾಡಿರುವ ಕಂಪಾರ್ಟ್ಮೆಂಟ್ಗೆ ತೆರಳಬೇಕು. ಅಲ್ಲಿ ಯುನಿಟ್ನಲ್ಲಿ ತಮ್ಮ ಆಯ್ಕೆಯ ಬಟನ್ ಒತ್ತುವ ಮೂಲಕ ಮತ ಚಲಾಯಿಸಬಹುದು.  ಬಳಿಕ ಮತದಾನ ಕೇಂದ್ರದಿಂದ ನಿರ್ಗಮಿಸಿ ಶಾಂತಿಯುವ ಮತದಾನಕ್ಕೆ ಸಹಕರಿಸಬೇಕು ಎಂದು ಮತದಾರರಲ್ಲಿ ಚುನಾವಣಾಧಿಕಾರಿ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.