'ಮಹಾವೀರರ ತತ್ವ ಸಾರ್ವಕಾಲಿಕ ಸತ್ಯ'
ಬೆಳ್ತಂಗಡಿ: ಭಗವಾನ್ ಮಹಾವೀರರು ನಮ್ಮ ಜೀವನ, ಸಮಾಜಕ್ಕೆ ಪ್ರೇರಕರಾಗಿದ್ದಾರೆ. ಮಹಾವೀರರ ತತ್ವಗಳು ಸಾರ್ವಕಾಲಿಕ ಎಂದು ಹೊಂಬುಜ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.
ಇತ್ತೀಚೆಗೆ, ಇಲ್ಲಿನ ಶ್ರೀ ರತ್ನತ್ರಯ ಜೈನತೀರ್ಥ ಕ್ಷೇತ್ರದಲ್ಲಿ ಶ್ರೀ ಶಾಂತಿನಾಥ ಸ್ವಾಮಿ, ಅನಂತನಾಥ ಸ್ವಾಮಿ, ಚಂದ್ರನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಮಹೋತ್ಸವದ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಋಷಿಮಂಡಲ ಯಂತ್ರಾರಾಧನೆ ಮತ್ತು ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮಹಾವೀರರ ತತ್ವಗಳನ್ನು ಎಲ್ಲಾ ಧರ್ಮದವರೂ ಪಾಲಿಸುವಂತದ್ದು. ಎಲ್ಲರನ್ನೂ ಗೌರವಿಸುವಂತ ತತ್ವವನ್ನು ಮಹಾವೀರರು ಹೇಳಿಕೊಟ್ಟಿದ್ದಾರೆ. ಅವರ ಉಪದೇಶಗಳು ಮಾರ್ಗದರ್ಶಕವಾಗಿದೆ ಎಂದು ಸ್ವಾಮೀಜಿ ನುಡಿದರು.
ಜೈನ್ ಮಿಲನ್ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಮಾತನಾಡಿ, ಈ ದೇಶದಲ್ಲಿ ಸುಮಾರು 600 ವರ್ಷ ಕಾಲ ದಬ್ಬಾಳಿಕೆ ನಡೆದರೂ ಜೈನಧರ್ಮ ಮತ್ತು ಹಿಂದೂ ಧರ್ಮ ಯಾವುದೇ ತೊಂದರೆಯಿಲ್ಲದೆ ಉಳಿದಿದೆಯಾದರೆ ಅದಕ್ಕೆ ಕಾರಣ ನಮ್ಮ ಸಂಸ್ಕಾರ ಎಂದರು.
ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ವೃದ್ಧಾಶ್ರಮ, ಅತಿಥಿಗೃಹವನ್ನು ಸ್ವಾಮೀಜಿ ಸಮರ್ಪಿಸಿದರು. ನೂತನವಾಗಿ ನಿರ್ಮಿಸಲಾದ ಜೈನ ಚಿತಾಗಾರವನ್ನು ಸಮಿತಿಯಿಂದ ಕೆಲ್ಲಗುತ್ತು ಸಬರಬೈಲ್ ಕೆನ್ಯಮ್ಮ ಯಾನೆ ಗುಣವತಿಯಮ್ಮ ಸ್ಮಾರಕ ಟ್ರಸ್ಟ್ಗೆ ಹಸ್ತಾಂತರಿಸಲಾಯಿತು.
ಕ್ಷೇತ್ರದ ಮೇಲ್ವಿಚಾಕರ ಸುಬ್ರಾಯ ಡೋಂಗ್ರೆ, ರಘುಚಂದ್ರ ಚೌಟ ಅವರನ್ನು ಸ್ವಾಮೀಜಿ ಗೌರವಿಸಿದರು.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಕೆ.ಜಯವರ್ಮ ರಾಜ ಬಲ್ಲಾಳ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.
ಅನಂತರಾಜ ಜೈನ್ ಚಿತಾಗಾರ ನಿರ್ಮಾಣದ ಲೆಕ್ಕಪತ್ರ ಮಂಡಿಸಿದರು. ರಘುಚಂದ್ರ ಚೌಟ ವಂದಿಸಿದರು. ಶಿಕ್ಷಕ ಧರಣೇಂದ್ರ ಕೆ. ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

