ದಕ್ಷಿಣ ಕನ್ನಡ

ಕುಲ್ಕುಂದದಲ್ಲಿ ಶೇ. 89 ಹಕ್ಕು ಚಲಾವಣೆ

Published On :

ಸುಬ್ರಹ್ಮಣ್ಯ:   ನಕ್ಸಲ್ ಪೀಡಿತ ಪ್ರದೇಶವಾದ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ಭಾನುವಾರ, ಅತ್ಯಧಿಕ ಪ್ರಮಾಣದಲ್ಲಿ ಶೇ. 89 ಮತದಾನವಾಗಿದೆ.
ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಶಾಂತಿಯುತ ಮತದಾನ ನಡೆಯಲು ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಕಳೆದ ಎರಡು ದಿನಗಳ ಹಿಂದಿನಿಂದ ಎ.ಎನ್.ಎಫ್. ಕೂಡಾ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ, ಬೀಡುಬಿಟ್ಟಿತ್ತು.
ಅದೇ ರೀತಿ ಬಾಳುಗೋಡು ಮತಗಟ್ಟೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು, ಇಲ್ಲಿ ಕೂಡಾ ಅತ್ಯಧಿಕ 90 ಶೇ. ಮತದಾನವಾಗಿದೆ.
ಸುಬ್ರಹ್ಮಣ್ಯ ದಕ್ಷಿಣದಲ್ಲಿ ಶೇ.86, ಸುಬ್ರಹ್ಮಣ್ಯ ಉತ್ತರದಲ್ಲಿ ಶೇ.83, ಬಾನಡ್ಕದಲ್ಲಿ ಶೇ.90, ಏನೆಕಲ್‌ನಲ್ಲಿ ಶೇ.86,ದೇವರಹಳ್ಳಿ ಶೇ.84 ಮತದಾನ ನಡೆದಿದೆ.
ಗುತ್ತಿಗಾರಿನ ಎರಡನೇ ವಾರ್ಡ್‌ನಲ್ಲಿ ಶೇ.84, ಮೂರನೇ ವಾರ್ಡ್‌ನಲ್ಲಿ ಶೇ.75, ಐನೆಕಿದುನಲ್ಲಿ ಶೇ.92, ಹರಿಹರ ಶೇ.85, ಬಾಳುಗೋಡು ಶೇ.90, ಕೊಲ್ಲಮೊಗ್ರು ಪ್ರಥಮ ವಾರ್ಡ್ ಶೇ. 82, ಎರಡನೇ ವಾರ್ಡ್ ಶೇ.83, ದೇವಚಳ್ಳ ಪ್ರಥಮ ವಾರ್ಡ್ ಶೇ. 83, ಎರಡನೇ ವಾರ್ಡ್ ಶೇ. 85, ಕೇನ್ಯ ಶೇ.88, ಬಳ್ಪ ಪ್ರಥಮ ವಾರ್ಡ್ ಶೇ. 83, ದ್ವಿತೀಯ ವಾರ್ಡ್ ಶೇ. 84, ಬೀದಿಗುಡ್ಡೆ ಶೇ.81 ಮತದಾನ ದಾಖಲಾಗಿದೆ.
ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹರಿಹರ ಪಲ್ಲತ್ತಡ್ಕ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ೆಸರು ಇಲ್ಲದ ಕಾರಣ ಸೀತರಾಮ ಶೆಟ್ಟಿಯಡ್ಕ ಎಂಬವರಿಗೆ ಮತದಾನ ನಿರಾಕರಿಸಲಾಯಿತು.
ಬೆಳಗ್ಗಿನಿಂದಲೇ ಮತದಾರರು ಮತಗಟ್ಟಗೆ ತೆರಳಿ ಮತದಾನ ಮಾಡಿದರು. ಮಧ್ಯಾಹ್ನದ ತನಕ ನಿಧಾನಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ಬಳಿಕ ಬಿರುಸುಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.