ದಕ್ಷಿಣ ಕನ್ನಡ

ದ.ಕ: ಶೇ.72 ಮತದಾನ

Published On :

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಶಾಂತಿಯುತ ಚುನಾವಣೆ ನಡೆದಿದ್ದು, ಶೇ.72.38 ಮತ ಚಲಾವಣೆಯಾಗಿದೆ. ಪುತ್ತೂರಿನಲ್ಲಿ ಗರಿಷ್ಠ ಶೇ.80 ಹಾಗೂ ಮಂಗಳೂರು ದಕ್ಷಿಣದಲ್ಲಿ ಕನಿಷ್ಠ ಶೇ.64 ಮತದಾನ ದಾಖಲಾಗಿದೆ.
 ಬೆಳ್ತಂಗಡಿ-ಶೇ.74.50, ಮೂಡುಬಿದಿರೆ-ಶೇ.70, ಮಂಗಳೂರು ಉತ್ತರ-ಶೇ.67, ಮಂಗಳೂರು ದಕ್ಷಿಣ-ಶೇ.64, ಮಂಗಳೂರು-ಶೇ.73.6, ಬಂಟ್ವಾಳ-ಶೇ.78, ಪುತ್ತೂರು-ಶೇ.80, ಸುಳ್ಯ-ಶೇ.72 ಮತದಾನ ದಾಖಲಿಸಿದೆ.
4 ಕ್ಷೇತ್ರಗಳಲ್ಲಿ ಹಿಂದಿನಷ್ಟೇ: ಕಳೆದ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ.64.87 ಮತದಾನವಾಗಿದ್ದು, ಈ ಬಾರಿ ಶೇ.7ರಷ್ಟು ಮತದಾನ ಜಾಸ್ತಿಯಾಗಿದೆ. ಹಿಂದಿನ ಅವಧಿಯಲ್ಲಿ ಬೆಳ್ತಂಗಡಿಯಲ್ಲಿ ಶೇ.74.57, ಮೂಡುಬಿದಿರೆ ಶೇ.72.54, ಮಂಗಳೂರು ಉತ್ತರ ಶೇ.72.16, ಮಂಗಳೂರು ದಕ್ಷಿಣ ಶೇ.64.14, ಮಂಗಳೂರು ಶೇ.73.80, ಬಂಟ್ವಾಳ ಶೇ.78.24, ಪುತ್ತೂರು ಶೇ.76.56, ಸುಳ್ಯ ಶೇ.75.61 ಮತದಾನ ದಾಖಲಾಗಿತ್ತು.
ಈ ಪೈಕಿ 4 ಕ್ಷೇತ್ರಗಳಲ್ಲಿ ಹಿಂದಿನ ಅವಧಿಯಷ್ಟೇ ಮತದಾನ ದಾಖಲಾಗಿದೆ. ಬೆಳ್ತಂಗಡಿ, ಮಂಗಳೂರು ದಕ್ಷಿಣ, ಮಂಗಳೂರು, ಬಂಟ್ವಾಳಗಳಲ್ಲಿ ಕಳೆದ ಅವಧಿಯಷ್ಟೇ ಸರಾಸರಿ ಮತದಾನ ದಾಖಲಾಗಿದೆ. ಮೂಡುಬಿದಿರೆ, ಮಂಗಳೂರು ಉತ್ತರ, ಪುತ್ತೂರುಗಳಲ್ಲಿ ಈ ಬಾರಿ ಹೆಚ್ಚಿನ ಮತದಾನವಾಗಿದೆ. ಸುಳ್ಯದಲ್ಲಿ ಕಳೆದ ಸಲಕ್ಕಿಂತ ಕಡಿಮೆ ಮತದಾನ ದಾಖಲಾಗಿದೆ.
ಪುತ್ತೂರಿನಲ್ಲಿ ಶಾಂತಿಯುತ ಮತದಾನ
ಪುತ್ತೂರು: ತಾಲೂಕಿನಾದ್ಯಂತ ಮತದಾನ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತ ರೀತಿಯಲ್ಲಿ ನಡೆಯಿತು.
ಮಧ್ಯಾಹ್ನದ ತನಕ ಸುಮಾರು ಶೇ.35-40ರಷ್ಟು ಮತದಾನವಾಗಿದ್ದರೆ, ಕೆಲವೊಂದು ಕೇಂದ್ರದಲ್ಲಿ ಶೆ. 50ರಷ್ಟು ಮತದಾನವಾಗಿದೆ. ಬಹುತೇಕ ಕೇಂದ್ರದಲ್ಲಿ ನಿಧಾನಗತಿಯಲ್ಲಿ ಮತದಾನ ನಡೆದಿದೆ.
ಡೀವಿ ಮತದಾನ: ಪುತ್ತೂರು ನಗರದ ಹಾರಾಡಿ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಮ್ಮ ಪತ್ನಿ ಡಾಟಿ ಸದಾನಂದ ಮತ್ತು ಪುತ್ರ ಕಾರ್ತಿಕ್ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು. ಹಾರಾಡಿ ಮತದಾನ ಕೇಂದ್ರದಲ್ಲಿ ಡಿ.ವಿ. ಪೂರ್ವಾಹ್ನ ಪ್ರಥಮ ಮತದಾರರಾಗಿ ಮತ ಚಲಾಯಿಸಿದರು. ಬಳಿಕ ಡಾಟಿ ಸದಾನಂದ ಮತದಾನ ಮಾಡಿ ದ್ವಿತೀಯರಾದರು. ಪುತ್ರ ಕಾರ್ತಿಕ್ ಮತದಾನ ಮಾಡಿದರು.
ಶಾಸಕಿ ಮತದಾನ: ಬೊಳುವಾರು ಶಾಲೆಯಲ್ಲಿ ಶಾಸಕಿ ಮಲ್ಲಿಕಾ ಪ್ರಸಾದ್ ತನ್ನ ಪತಿ ಎಂ.ಕೆ. ಪ್ರಸಾದ್ ಮತ್ತು ಪುತ್ರಿಯೊಂದಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಪುತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿನೇಶ್ ಬಿ.ಎನ್. ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಶಾಲೆಯಲ್ಲಿ ಮತದಾನ ಮಾಡಿರುವುದಾಗಿ ತಿಳಿದು ಬಂದಿದೆ.
ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ಕುಂತೂರು ಶಾಲೆಯಲ್ಲಿ ಮತದಾನ ಮಾಡಿದರು. ಹಿರೇಬಂಡಾಡಿ ಶಾಲೆಯಲ್ಲಿ ಸಂಜೀವ ಮಠಂದೂರು ಪತ್ನಿ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.