ಸುಳ್ಯ ಕ್ಷೇತ್ರದಲ್ಲಿ ದಾಖಲೆ ಮತದಾನ
ಸುಳ್ಯ/ ಮಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಶೇ. 80.63 ಮತದಾನವಾಗಿದೆ.
ಒಟ್ಟು 1,79,918 ಮತದಾರರಲ್ಲಿ 1,45,074 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 74,086 ಪುರುಷರು, 70,988 ಮಹಿಳೆಯರು. ಇದು ಸುಳ್ಯ ಕ್ಷೇತ್ರದ ಚುನಾವಣಾ ಇತಿಹಾಸದಲ್ಲೇ ಇದು ದಾಖಲೆ ಮತದಾನ. ಕಳೆದ ಬಾರಿ ಶೇ.74 ಮತದಾನವಾಗಿತ್ತು.
ಸುಳ್ಯ ವಿಧಾನಸಭಾ ಕ್ಷೇತ್ರದ ಪುತ್ತಿಗೆ ಕೊಣಾಜೆ ಮತಗಟ್ಟೆಯಲ್ಲಿ ಅತಿ ಕಡಿಮೆ ಶೇ. 28.37 ಮತದಾನವಾಗಿದ್ದು, ಐನೆಕಿದು ಮತಗಟ್ಟೆಯಲ್ಲಿ ಅತಿ ಹೆಚ್ಚು ಶೇ.91 ಮತದಾನವಾಗಿದೆ.
ಪುತ್ತಿಗೆಯಲ್ಲಿ ಹಲವು ಮಂದಿ ಚುನಾವಣಾ ಬಹಿಷ್ಕಾರದಲ್ಲಿ ಭಾಗವಹಿಸಿದ್ದು, ಅಲ್ಲಿನ 564 ಮತದಾರರಲ್ಲಿ 160 ಮಂದಿ ಮತಚಲಾಯಿಸಿದ್ದಾರೆ. ಐನೆಕಿದು ಮತಗಟ್ಟೆಯ 746 ಮತದಾರರಲ್ಲಿ 638 ಮಂದಿ ಮತ ಚಲಾಯಿಸಿದ್ದು, ಶೇ.90.88 ಮತದಾನವಾಗಿದೆ.
ಸುಳ್ಯ ತಾಲೂಕಿನ ಮಟ್ಟಿಗೆ ಸುಳ್ಯ ತಾಲೂಕು ಪಂಚಾಯಿತಿ ಕಚೇರಿಯ ಮತಗಟ್ಟೆಯಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಇಲ್ಲಿನ 1,087 ಮತದಾರರಲ್ಲಿ 750 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.69 ಮತದಾನವಾಗಿದೆ.
ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಅಲ್ಲಲ್ಲಿ ಚುನಾವಣಾ ಬಹಿಷ್ಕಾರದ ಅಡ್ಡಿ ಎದುರಾಗಿತ್ತು.
ಅಧಿಕ ಮತ ಚಲಾವಣೆ: ಕಳೆದ ಸಾಲಿನಲ್ಲಿ ಒಟ್ಟು 9,74,288 ಮತದಾನ ಚಲಾಯಿಸಿದ್ದರೆ, ಪ್ರಸಕ್ತ ಸಾಲಿನಲ್ಲಿ 11,18,025 ಜನ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಒಟ್ಟು 1,43,737 ಅಧಿಕ ಮತದಾರರು ಮತ ಚಲಾಯಿಸಿದ್ದಾರೆ. ಪ್ರಥಮ ಹಂತದಲ್ಲಿ 62 ಸಾವಿರ ಅರ್ಜಿಗಳನ್ನು ಸ್ವೀಕರಿಸಿ ನೋಂದಾಯಿಸಲಾಗಿದ್ದು, ಸ್ವೀಪ್ ಕಾರ್ಯಕ್ರಮದ ಪರಿಣಾಮ ಜನರು ತಮ್ಮ ಹಕ್ಕಿನ ಬಗ್ಗೆ ಜಾಗೃತರಾಗಿದ್ದಾರೆ. ಮಂಗಳೂರು ಉತ್ತರ 2008- 1,31,468 2013-1,45,238 ಮಂಗಳೂರು ದಕ್ಷಿಣ 2008- 1,18,430 2013- 1,32,177, ಮಂಗಳೂರು 2008- 1,04,329 2013- 1,24,205, ಬೆಳ್ತಂಗಡಿಯಲ್ಲಿ 2008- 1,28,577 2013- 1,45,59, ಮೂಡುಬಿದಿರೆ 2008- 1,10531 2013- 1,28,241, ಬಂಟ್ವಾಳ 2008- 1,34,853 2013- 1,55,750, ಪುತ್ತೂರು 2008- 1,22,941 2013- 1,41,746, ಸುಳ್ಯ 2008- 1,23,159 2013- 1,45,074
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

