ದಕ್ಷಿಣ ಕನ್ನಡ

ಎಸ್‌ಎಸ್‌ಎಲ್‌ಸಿ: ಕಟೀಲು ದೇವಳ ಕಾಲೇಜಿಗೆ ಶೇ.94

Published On :

ಮೂಲ್ಕಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಟೀಲು ದೇವಳ ಕಾಲೇಜು ಶೇ.94 ಫಲಿತಾಂಶ ಪಡೆದಿದ್ದು ಪರೀಕ್ಷೆಗೆ ಹಾಜರಾದ 173 ವಿದ್ಯಾರ್ಥಿಗಳಲ್ಲಿ 162 ಮಂದಿ ಪಾಸಾಗಿದ್ದು 5 ಮಂದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಐಕಳ ಪೊಂಪೈ ಕಾಲೇಜ್ ಶೇ.92 ಫಲಿತಾಂಶ ಪಡೆದಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಐಕಳ ಪೊಂಪೈ ಕಾಲೇಜು ಶೇ.95 ಫಲಿತಾಂಶ ಪಡೆದಿದ್ದು ಪರೀಕ್ಷೆಗೆ ಹಾಜರಾದ 273ರಲ್ಲಿ 259 ಪಾಸಾಗಿದ್ದು 23 ಮಂದಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ವಿಜ್ಞಾನದಲ್ಲಿ ಶೇ.93, ವಾಣಿಜ್ಯದಲ್ಲಿ ಶೇ.99 ಸೇರಿದಂತೆ ಒಟ್ಟು ಶೇ.95 ಫಲಿತಾಂಶ ಬಂದಿದೆ. ಮೂಲ್ಕಿಯ ಶ್ರೀ ನಾರಾಯಣ ಗುರು ಸಂಯುಕ್ತ ಪದವಿಪೂರ್ವ ಕಾಲೇಜು ಪಿಯುಸಿಯಲ್ಲಿ ಶೇ.85.5 ಫಲಿತಾಂಶ ಪಡೆದಿದ್ದು ವಿಜ್ಞಾನದಲ್ಲಿ ಶೇ.78 ಹಾಗೂ ವಾಣಿಜ್ಯದಲ್ಲಿ ಶೇ.93 ಫಲಿತಾಂಶ ಪಡೆದಿದೆ. ಒಟ್ಟು 8 ಮಂದಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಮೂಲ್ಕಿಯ ವಿಜಯ ಕಾಲೇಜ್ ಶೇ.92 ಫಲಿತಾಂಶ ಪಡೆದಿದ್ದು ಪರೀಕ್ಷೆಗೆ ಹಾಜರಾದ 266ರಲ್ಲಿ 245 ಪಾಸಾಗಿದ್ದು ವಿಜ್ಞಾನದಲ್ಲಿ ಶೇ. 85.6 ಹಾಗೂ ವಾಣಿಜ್ಯದಲ್ಲಿ 98.5 ಫಲಿತಾಂಶ ಪಡೆದಿದ್ದು ವಿಜ್ಞಾನದಲ್ಲಿ ಹಾಗೂ ವಾಣಿಜ್ಯದಲ್ಲಿ ತಲಾ 14 ಮಂದಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜ್ ದ್ವಿತೀಯ ಪಿಯುಸಿಯಲ್ಲಿ ಶೇ.93.2 ಫಲಿತಾಂಶ ಪಡೆದಿದ್ದು ಪರೀಕ್ಷೆಗೆ ಹಾಜರಾದ 368ರಲ್ಲಿ 343 ಪಾಸಾಗಿದ್ದು 35 ಮಂದಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ಹಾಗೂ ವಾಣಿಜ್ಯದಲ್ಲಿ ಶೇ.99 ಮತ್ತು ಕಲಾ ವಿಭಾಗದಲ್ಲಿ ಶೇ.82 ಫಲಿತಾಂಶ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.