ದಕ್ಷಿಣ ಕನ್ನಡ

ಧಾರ್ಮಿಕ ದತ್ತಿ ಸಚಿವರಿಗೆ ಈ ಬಾರಿಯೂ ಸೋಲು!

Published On :

ಮಂಗಳೂರು: ದೇವರ ಸೇವೆ ಮಾಡುತ್ತೇವೆ ಎಂದು ಧಾರ್ಮಿಕ ದತ್ತಿ ಸಚಿವರಾದವರ ಮೇಲೆ ದೇವರು ಮಾತ್ರ ಒಲಿಯುವುದಿಲ್ಲ! ಕಾಕತಾಳಿಯವೋ ಗೋತ್ತಿಲ್ಲ ಆದರೆ ಧಾರ್ಮಿಕ ದತ್ತಿ ಸಚಿವರಾದರೆ ಮತ್ತೆ ಗೆಲ್ಲುವುದಿಲ್ಲ ಎಂಬುದಕ್ಕೆ ಈ ಬಾರಿಯೂ ಜ್ವಲಂತ ಉದಾಹರಣೆಗಳು ಸಿಕ್ಕಿವೆ.
 ಬಿಜೆಪಿ ಸರ್ಕಾರದಲ್ಲಿದ್ದ ಧಾರ್ಮಿಕ ಮತ್ತು ದತ್ತಿ ಸಚಿವರಾಗಿದ್ದ ಕೃಷ್ಣ ಹೆಸರಿನ ಕೃಷ್ಣಯ್ಯ ಶೆಟ್ಟಿ ಮತ್ತು ಕೃಷ್ಣ ಜೆ.ಪಾಲೆಮಾರ್, ಸೋಮಣ್ಣ ಸೋಲು ಅನುಭವಿಸಿದ್ದಾರೆ. ಇದೇ ಕೃಷ್ಣಯ್ಯ ಶೆಟ್ಟಿ ಅಪರೇಶನ್ ಕಮಲಕ್ಕೆ ಬಲಿಯಾಗಿ ಬಿಜೆಪಿಗೆ ಬಂದ ಸೋಮಣ್ಣನಿಗಾಗಿ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದರು. ಧಾರ್ಮಿಕ ದತ್ತಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮರು ಚುನಾವಣೆಯಲ್ಲಿ ಸೋಮಣ್ಣ ಅವರು ಕಾಂಗ್ರೆಸ್ ಪ್ರಿಯಕೃಷ್ಣ ಎದುರು ಸೋಲು ಅನುಭವಿಸಿದ್ದರು.
ಇದೀಗ ಕೃಷ್ಣಯ್ಯ ಶೆಟ್ಟಿ ಪಕ್ಷೇತರನಾಗಿ ಸ್ಪರ್ಧಿಸಿದರೆ ಸೋಮಣ್ಣ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದಾರೆ. ಮಂಗಳೂರು ಉತ್ತರದಲ್ಲಿ ಎರಡನೇ ಬಾರಿ ಗೆದ್ದು ದಾಖಲೆ ಮುರಿದಿದ್ದ ಕೃಷ್ಣ ಜೆ.ಪಾಲೆಮಾರ್ ಮುಜರಾಯಿ ಸಚಿವರಾದರು.ಮುಜರಾಯಿ ಸಚಿವರಾದರೆ ಸೋಲುವುದು ಅಪನಂಬಿಕೆ ಎಂದು ಹೇಳಿದ್ದರು. ಆದರೆ ಅವರೂ ಈಗ ಈ ಅಪನಂಬಿಕೆಗೆ ಬಲಿಯಾಗಿದ್ದಾರೆ.
 ಈ ಹಿಂದೆ ಧಾರ್ಮಿಕ ಮತ್ತು ದತ್ತಿ ಸಚಿವರಾಗಿದ್ದ ಅಮರನಾಥ ಶೆಟ್ಟಿ ಈ ಬಾರಿಯೂ ಸೋಲು ಅನುಭವಿಸಿದ್ದಾರೆ. ಸಚಿವರಾದ ಬಳಿಕ ಒಮ್ಮೆ ಗೆದ್ದಿದ್ದ ಅಮರನಾಥ ಶೆಟ್ಟರು ಬಳಿಕ ರಾಜಕೀಯ ಜೀವನದಲ್ಲಿ ಯಶಸ್ಸು ಸಾಧಿಸಲೇ ಇಲ್ಲ.
ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಧಾರ್ಮಿಕ ಮತ್ತು ದತ್ತಿ ಸಚಿವರಾಗಿದ್ದ ನಾಗರಾಜ ಶೆಟ್ಟಿ ವಿಧಾನಸಭೆಯಲ್ಲಿ ಸ್ಪರ್ಧಿಸಿ ಸೋತರು. ಬಳಿಕ ಬಿಜೆಪಿ ತ್ಯಜಿಸಿ ಜೆಡಿಎಸ್ ಸೇರಿ ಮತ್ತೆ ಬಿಜೆಪಿ ಸೇರಿದ್ದಾರೆ. ಆದರೆ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
 ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಧಾರ್ಮಿಕ ದತ್ತಿ ಇಲಾಖೆಯನ್ನು ಹೆಚ್ಚುವರಿಯಾಗಿ ತಮ್ಮ ಬಳಿ ಇಟ್ಟುಕೊಂಡಿದ್ದರು. ಜ್ಯೋತಿಷಿ ಸಲಹೆಯಂತೆ ಅದನ್ನು ವಿ.ಎಸ್. ಆಚಾರ್ಯರಿಗೆ ವರ್ಗಾಯಿಸಿದ್ದರು. ಅಚಾರ್ಯರು ಬದುಕಿರುವಷ್ಟು ಕಾಲ ಖಾತೆ ನಿಭಾಯಿಸಿದ್ದರು.
ನಿಧನ ಬಳಿಕ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡರು ಮುಜರಾಯಿ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡರು. ಆದರೆ ನಾಲ್ಕೇ ತಿಂಗಳಲ್ಲಿ ಅವರು ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟುಕೊಡಬೇಕಾಯಿತು.
ಇದೀಗ ಕೋಟ ಶ್ರೀನಿವಾಸ ಪೂಜಾರಿ ಅವರು ಧಾರ್ಮಿಕ ದತ್ತಿ ಸಚಿವರಾಗಿದ್ದಾರೆ ಅವರು ಕೂಡಾ ವಿಧಾನಪರಿಷತ್ ಸದಸ್ಯತನ ಮುಂದವರಿದರೂ ಅರ್ಧದಲ್ಲಿಯೇ ಸಚಿವ ಸ್ಥಾನ ಕೈಬಿಡಬೇಕಾಗಿದೆ. ಕಾಂಗ್ರೆಸ್‌ನ ಸುಮಾ ವಸಂತ್‌ಮುಜರಾಯಿ ಸಚಿವರಾದ ಬಳಿಕ 2004ರ ಚುನಾವಣೆಯಲ್ಲಿ ಸೋತಿದ್ದರು.
 -ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.