ದಕ್ಷಿಣ ಕನ್ನಡ

'ಎಂಡೋ ಪೀಡಿತರಿಂದ ಸಿಎಂ ಭೇಟಿ ಈಗ ಬೇಡ'

Published On :

ಮಂಗಳೂರು: ಆಡಳಿತ ನಿರ್ವಹಣೆಗೆ ಮುಖ್ಯಮಂತ್ರಿಗಳಿಗೆ ಸ್ವಲ್ಪ ಸಮಯದ ಅಗತ್ಯವಿದೆ. ಆದ್ದರಿಂದ ಎಂಡೋಪೀಡಿತರನ್ನು ಅತ್ಯಂತ ದುರ್ಗಮ ಪರಿಸ್ಥಿತಿಯಲ್ಲಿ ಕರೆದೊಯ್ಯುವುದಕ್ಕಿಂತ ಸಾಂಕೇತಿಕ ಪ್ರತಿಭಟನೆ ನಡೆಸುವುದು ಉತ್ತಮ. ಈ ನಿಟ್ಟಿನಲ್ಲಿ ಎಂಡೋ ಪೀಡಿತರ ಸಮಸ್ಯೆ ಪರಿಹಾರಕ್ಕೆ ಎಲ್ಲ ಸಹಕಾರ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಹಂಪನಕಟ್ಟೆ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಅಂಗವಿಕಲರ ಸಂಘದ 21ನೇ ವಾರ್ಷಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲರು ಋಣಾತ್ಮಕವಾಗಿ ಯೋಚಿಸದೆ ಉನ್ನತ ಸಾಧನೆ ಮಾಡಬೇಕು. ಮಾನಸಿಕ ದೃಢತ್ವ ಬೆಳೆಸಿಕೊಳ್ಳಬೇಕು ಎಂದರು.  
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕೆ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು, ವಾರ್ಷಿಕ ಬಜೆಟ್‌ನ ಶೇ.3ರಷ್ಟನ್ನು ಅವರಿಗಾಗಿ ಕಾದಿರಿಸಿದೆ. ಜಿಲ್ಲೆಯಲ್ಲಿರುವ 8 ಅಂಗವಿಕಲರ ಶಾಲೆಗಳಿಗೆ ವಿಶೇಷ ಅನುದಾನ ನೀಡಲಾಗಿದೆ ಎಂದರು.
ಈ ಸಮಯದಲ್ಲಿ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಬೇಡಿಕೆಗಳು

  •  ಶೇ.75 ಅಂಗವಿಕಲತೆ ಹೊಂದಿರುವವರಿಗೆ ಮಾಸಿಕ ವೇತನ ಭತ್ಯೆಯ ಅರ್ಜಿಗಳನ್ನು ಶೀಘ್ರವೇ ಮಂಜೂರು ಮಾಡಬೇಕು.
  •  ಅಂಗವಿಕಲರ ಆದಾಯ ಪರಿಗಣಿಸುವಾಗ ಪಡಿತರ ಚೀಟಿಯಲ್ಲಿದ್ದ ಎಲ್ಲರ ಆದಾಯ ಲೆಕ್ಕಕ್ಕೆ ತೆಗೆದುಕೊಳ್ಳಬಾರದು.
  •  ಎಪಿಎಲ್ ಹಾಗೂ ಬಿಪಿಎಲ್ ವರ್ಗೀಕರಣದಲ್ಲಿ ತಪ್ಪು ಮಾನದಂಡ ಅನುಸರಣೆಯನ್ನು ಪುನರ್ ಪರಿಶೀಲಿಸಬೇಕು.
  • ಅಂಗವಿಕಲರಿಗೆ ಬರುವ ಶೇ.3 ಅನುದಾನವನ್ನು ಸರಿಯಾಗಿ ನೀಡುವಂತೆ ಎಲ್ಲ ಇಲಾಖೆಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಬೇಕು.
  • ಎಂಡೋ ಪೀಡಿತರಿಗೆ ಕೇರಳ ಮಾದರಿ ಪರಿಹಾರ ನೀಡಬೇಕು.
  •  ಅಂಗವಿಕಲರಿಗೆ ಸರ್ಕಾರದಿಂದಲೇ ಆರೋಗ್ಯ ವಿಮೆ ನೀಡಬೇಕು.
  • ಅಂಗವಿಕಲರ ಹೆಸರಿನಲ್ಲಿರುವ ಮನೆ ಮತ್ತು ಅಂಗಡಿಗಳಿಗೆ ತೆರಿಗೆ ಮನ್ನಾ ಮಾಡುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.