ನಾಳೆ ಮೆಸ್ಕಾಂ ವಿರುದ್ಧ ಪ್ರತಿಭಟನೆ
ಮಂಗಳೂರು: ವಿದ್ಯುತ್ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಡಿವೈಎಫ್ಐ ನೇತೃತ್ವದಲ್ಲಿ ಮೆಸ್ಕಾಂ ವಿರುದ್ಧ ಮೇ 17 ರಂದು ಸಂಜೆ 4ಕ್ಕೆ ಪ್ರತಿಭಟನೆ ನಡೆಯಲಿದೆ.
ಹಲವಾರು ವರ್ಷಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಮಳೆಗಾಲ ಸಮೀಪಿಸತ್ತಿದ್ದರೂ
ತಂತಿ ಮೇಲೆ ಬಿದ್ದಿರುವ ಮರಗಳನ್ನು ತುಂಡರಿಸಿಲ್ಲ, ತಂತಿಗಳನ್ನು ಸರಿಪಡಿಸಲು ಸಿಬ್ಬಂದಿ ಇಲ್ಲ. ದೂರು ನೀಡಿದರೂ ತಿಂಗಳುಗಳ ಕಾಲ ದುರಸ್ತಿಗೆ ಕಾಯಬೇಕಾಗಿದೆ. ಸಮಸ್ಯೆಗಳ ಬಗ್ಗೆ ಸಿಬ್ಬಂದಿಗೆ ಕರೆ ಮಾಡಿದರೆ ರಿಸೀವ್ ಮಾಡುವವರೇ ಇಲ್ಲ. ಇಂಥ ಜನವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಯಲಾಗುವುದು ಎಂದು ಡಿವೈಎಫ್ಐನ ಕಾರ್ಯದರ್ಶಿ ಇಬ್ರಾಹಿಂ ಕಲೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
19 ರಂದು ರೇಕಿ ಚಿಕಿತ್ಸೆ
ಮಂಗಳೂರು: ಡಿವೈನ್ ಹೀಲಿಂಗ್ ಫೌಂಡೇಶನ್ ವತಿಯಿಂದ ಮೇ 19ರಂದು ಬೆಳಗ್ಗೆ 9 ರಿಂದ ಸಂಜೆ 3ರವರೆಗೆ ಜೈಲು ರಸ್ತೆಯ ಕೆನರಾ ಕಾಲೇಜಿನಲ್ಲಿ ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ಶಿಬಿರ ನಡೆಯಲಿದೆ.
ಶಿಬಿರವನ್ನು ಶಿವಮೊಗ್ಗದ ಆಯುರ್ವೇದ ವೈದ್ಯ ಡಾ. ಸತ್ಯನಾರಾಯಣ ನಡೆಸಿಕೊಡುವರು. ಶಿಬಿರದಲ್ಲಿ ಮೈಗ್ರೇನ್, ತಲೆನೋವು, ಅಲರ್ಜಿ ಅಸ್ತಮಾ, ಸಂಧಿವಾತಗಳಿಗೆ ಸರಳ, ಸುಲಭ, ನಿಬಂಧನಾರಹಿತ ಚಿಕಿತ್ಸೆಯ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9901829233 ಸಂಪರ್ಕಿಸಬಹುದು.
ಅರ್ಜಿ ಆಹ್ವಾನ
ಮಂಗಳೂರು: 2013-14ನೇ ಸಾಲಿನ ಹಿಂದಿ ಶಿಕ್ಷಕ್ ಟ್ರೈನಿಂಗ್ ಕೋರ್ಸ್ ಪ್ರವೇಶಕ್ಕೆ 18 ರಿಂದ 40 ವರ್ಷದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ, ಹಿಂದಿ ಪದವಿ ಪರೀಕ್ಷೆಗಳಾದ ವಿದ್ವಾನ್, ರತ್ನ, ಪ್ರವೀಣ್ ಪರೀಕ್ಷೆಗಳಲ್ಲಿ ಪದವಿ, ಬಿಎ ಪದವಿಯಲ್ಲಿ ಐಚ್ಛಿಕ ಭಾಷೆಯಾಗಿ, ಹಿಂದಿ ಎಂಎ ಪದವಿಯಲ್ಲಿ ಶೇ. 50 ಅಂಕ ಪಡೆದಿರಬೇಕು. ಅರ್ಜಿಯನ್ನು ಮಂಡ್ಯದ ಹಿಂದಿ ಶಿಕ್ಷಕ್ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲರಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 08232-226667 ಸಂಪರ್ಕಿಸಬಹುದು
ಕಂಪ್ಯೂಟರ್ತರಬೇತಿ
ಮಂಗಳೂರು: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರಿಗಾಗಿ 3 ತಿಂಗಳ ಉಚಿತ ಕಂಪೂಟರ್ ತರಬೇತಿ ನೀಡಲಾಗುವುದು. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್ ಬೇಸಿಕ್ ಹಾರ್ಡ್ವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿ ನೀಡಲಾಗುತ್ತದೆ. 18 ರಿಂದ 30 ವರ್ಷ ವಯೋವುತಿ, ವಾರ್ಷಿಕ ಆದಾಯ ರು. 40ಸಾವಿರ ಮೀರಿರಬಾರದು. ಪಿಯುಸಿ, ಎಸ್ಎಸ್ಎಲ್ಸಿ ನಂತರದ ಡಿಪ್ಲೋಮ ಉತ್ತೀರ್ಣ ಹಾಗೂ ಅನುತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಜಿ.ಪಂ. ಕಟ್ಟಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪಡೆಯಬಹುದು. ಮಾಹಿತಿಗಾಗಿ 0824-2458173 ಸಂಪರ್ಕಿಸಿ.
ಅರ್ಜಿ ಆಹ್ವಾನ
ಮಂಗಳೂರು: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 5ನೇ ತರಗತಿಯಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶ. ಬಾಲಕಿಯರ ವಸತಿ ನಿಲಯ- ಗುರುಪುರ, ಅಶೋಕನಗರ, ಗುರುಕಂಬಳ. ಬಾಲಕರ ವಸತಿ ನಿಲಯ- ಕದ್ರಿ, ಕೂಳೂರು, ಮುಲ್ಕಿ, ಮೂಡುಬಿದಿರೆ, ಕಡಂದಲೆ, ಸುಂಕದಕಟ್ಟೆ, ದರೆಗುಡ್ಡೆ. ಅರ್ಜಿಗಳನ್ನು ತಾಲೂಕು ಹಿಂದುಳಿದ ವರ್ಗಗಳ ವಿಸ್ತಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು. ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು. 29 ಕೊನೆ ದಿನ. ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಿ.
ಕಚೇರಿ ಮರುಸ್ಥಾಪನೆ
ಮಂಗಳೂರು: ಕಾರ್ಖಾನೆಗಳ ಸಹಾಯಕ ನಿರ್ದೇಶಕರ ಕಚೇರಿ, ವಿಭಾಗ- 2 ಕಚೇರಿಯನ್ನು ಮಂಗಳೂರಿನಲ್ಲಿ ಮರು ಸ್ಥಾಪಿಸಲಾಗಿದೆ. ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ವಿಭಾಗ-2 ಮಂಗಳೂರು ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

