ಮದುವೆ ನಿಶ್ಚಯಆಗಿದ್ದ ಯುವಕ ಆತ್ಮಹತ್ಯೆ
ಮೂಲ್ಕಿ: ತನ್ನ ಮದುವೆ ತಯಾರಿಗೆ ಖುಷಿಯಲ್ಲಿ ತೊಡಗಬೇಕಿದ್ದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ನಡೆದಿದೆ. ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಉಳೆಪಾಡಿಯ ಕುರುಂಜಿ ಗುತ್ತು ಶಶಿಧರ ಶೆಟ್ಟಿ ತಮ್ಮ ಕೇತನ್ (22) ಮೃತ ಯುವಕ. ಈತನ ವಿವಾಹ 22ರಂದು ಬುಧವಾರ ನಡೆಯಬೇಕಾಗಿತ್ತು. ಆದರೆ, ಮನೆಯಲ್ಲಿ ಶನಿವಾರ ಮದುವೆ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕ್ಷುಲಕ ಕಾರಣಕ್ಕಾಗಿ ಕೇತನ್ ಶೆಟ್ಟಿ ಅಮಲು ಪದಾರ್ಥ ಸೇವಿಸಿ 18ರಂದು ರಾತ್ರಿ ಮನೆಯ ಮುಭಾಂಗದ ಬಚ್ಚಲು ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಗಾಳಿಯಿಂದ ಮೂವರು ಅಸ್ವಸ್ಥ
ಬೆಳ್ತಂಗಡಿ: ವಿಷ ಗಾಳಿಯಿಂದ ಮೂವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಅಳದಂಗಡಿ ಸನಿಹದ ಪಿಲ್ಯ ಎಂಬಲ್ಲಿ ಶನಿವಾರ ನಡೆದಿದೆ. ಬಡಗಕಾರಂದೂರು ಗ್ರಾಮದ ಪಿಲ್ಯದ ಹೆರಾಲ್ಡ್ ಫೆರ್ನಾಂಡಿಸ್ ಅವರಿಗೆ ಸೇರಿದ ಬಾವಿಯ ನೀರನ್ನು ಅನೇಕ ಸಮಯದಿಂದ ಉಪಯೋಗಿಸುತ್ತಿರಲಿಲ್ಲ. ಬಾವಿ ಸ್ವಚ್ಛಗೊಳಿಸಲು ಕೆಲಸದವರನ್ನು ಬಾವಿಯೊಳಗೆ ಇಳಿಸಲಾಗಿತ್ತು. ಆದರೆ, ಬಾವಿ ಆಳವಾಗಿದ್ದ ಕಾರಣ ಅಲ್ಲಿ ಆಮ್ಲಜನಕದ ಕೊರೆತೆ ಹಾಗೂ ಕಲುಷಿತ ನೀರಿನಿಂದ ಉಂಟಾದ ವಿಷಗಾಳಿಯಿಂದ ಬಾವಿಗಿಳಿದವರು ಅಸ್ವಸ್ಥರಾದರು. ಕೂಡಲೇ ಅಗ್ನಿಶಾಮಕ ದಳದವರ ಮತ್ತು ಊರಿನವರ ಸಕಾಲಿಕ ಕಾರ್ಯಾಚರಣೆಯಿಂದ ಮೊಗೆರುವಿನ ಬೇಬಿ (36), ತುಂಗಪ್ಪ ಮೂಲ್ಯ (42), ಮೊನಪ್ಪ (40) ಇವರನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಲಾಯಿತು. ಇದೀಗ ಮೂವರೂ ಚೇತರಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

