ದಕ್ಷಿಣ ಕನ್ನಡ

ಇಎಸ್‌ಐ ಅವ್ಯವಸ್ಥೆ: ಸತ್ಯಾಗ್ರಹ 9ನೇ ದಿನ

Published On :

ಮಂಗಳೂರು: ಇಎಸ್‌ಐ ಆಸ್ಪತ್ರೆ ಅವ್ಯವಹಾರ, ಕಾರ್ಮಿಕರ ವಿರೋಧಿ ನೀತಿ ಖಂಡಿಸಿ ಅಖಿಲಭಾರತ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸುದತ್ ಜೈನ್ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 9 ದಿನ ಪೂರೈಸಿದೆ. 10ನೇ ದಿನಕ್ಕೆ ಕಾಲಿಡುವ ಹಿನ್ನೆಲೆಯಲ್ಲಿ ಸುದತ್ ಜೈನ್ ನೀರು ಸೇವನೆ ಕೂಡಾ ಸ್ಥಗಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಐವರು ಕಾರ್ಮಿಕರು  ಉಪವಾಸಕ್ಕೆ ಕುಳಿತುಕೊಂಡಿದ್ದಾರೆ. ಜಗದೀಶ್ ಮರೋಳಿ, ಮೋಹನ್ ಕರ್ಕೆರ, ದಾಮೋದರ ಕೋಟ್ಯಾನ್, ಡೊನಾಲ್ಡ್ ಜೀವನ್, ಆನಂದ್ ಕರ್ಕೆರ ಮಂಗಳವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಕೇವಲ ನೀರು ಸೇವಿಸಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಶಾಸಕ ಜೆ.ಆರ್.ಲೋಬೊ ಬಂದ ಬಳಿಕ ಬೇಡಿಕೆಗೆ ಸಂಬಂಧಿಸಿದ ಬಹುತೇಕ ಅಧಿಕಾರಿಗಳು ಬಂದು ಸ್ಪಂದಿಸಿದ್ದಾರೆ. ಆದರೆ ಇಎಸ್‌ಐ ನಿರ್ದೇಶಕರು ಬಂದು ಅಹವಾಲು ಸ್ವೀಕರಿಸದ ಹಿನ್ನೆಲೆಯಲ್ಲಿ ಸುದತ್ತಜೈನ್ ನೀರು ಸೇವನೆ ಕೂಡಾ ಮೇ 21ರಿಂದ ಬಿಡುವುದಾಗಿ ಹೇಳಿದ್ದಾರೆ. ಕಾರ್ಮಿಕರು ಉಪವಾಸ ಕುಳಿತು 9ದಿನವಾದರೂ ಬೇಡಿಕೆ ಈಡೇರಿಸುವುದು ಬಿಡಿ, ಕನಿಷ್ಠ ಉಪವಾಸ ನಿರತರನ್ನು ಭೇಟಿಯಾಗಿ ವಿಚಾರಿಸುವ ಕನಿಷ್ಠ ಮಾನವೀಯತೆ ಸೌಜನ್ಯ ಇಲ್ಲ. ಇಎಸ್‌ಐ ಆಸ್ಪತ್ರೆ ನಿರ್ದೇಶಕರಿಗೆ ಕಾರ್ಮಿಕರ ಮೇಲಿನ ಕಾಳಜಿ ಎಷ್ಟು ಇದೆ ಎಂಬುದಕ್ಕೆ ಇದು ಉದಹಾರಣೆ ಎಂದು ಉಪವಾಸ ನಿರತ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇರುವುದರಿಂದ ಕಾರ್ಮಿಕರ ಬೇಡಿಕೆ ಈಡೇರುವುದು ಖಚಿತ. ಆದರೆ ನಿರ್ದೇಶಕರ ನಿರ್ಲಕ್ಷ್ಯದಿಂದ ವಿಳಂಬವಾಗುತ್ತಿದೆ. ನಮ್ಮ ದೇಹ ಬಲಿದಾನದಿಂದ ಸಾವಿರಾರು ಕಾರ್ಮಿಕರಿಗೆ ನೆರವಾಗುವುದಾದರೆ ಉಪವಾಸ ಮುಂದುವರಿಸುತ್ತೇನೆ ಎಂದು ಜೈನ್ ಹೇಳಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.