ದಕ್ಷಿಣ ಕನ್ನಡ

ಉದ್ಯೋಗ ಖಾತ್ರಿ: ಜಿಲ್ಲೆಯಲ್ಲಿ 737.39 ಲಕ್ಷ ಮಂದಿಗೆ ಕೆಲಸ

Published On :

ಮಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಡಿ ಜಿಲ್ಲೆಯಲ್ಲಿ 2012-13ನೇ ಸಾಲಿನಲ್ಲಿ 737.39 ಲಕ್ಷ ಜನರು ಕಾರ್ಯನಿರ್ವಹಿಸಿದ ಪರಿಣಾಮ ಶೇ. 51ರ ಗುರಿ ಸಾಧಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಹೇಳಿದ್ದಾರೆ.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ 2012-13ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯು ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಅಧಿಕಾರಿಗಳು ಮಾಹಿತಿ ನೀಡಿದರು.
ಸ್ವರ್ಣಜಯಂತಿ ಗ್ರಾಮ ಸ್ವರೋಜ್ಗಾರ್ ಯೋಜನೆಯಲ್ಲಿ ಒಟ್ಟು 2,411 ಜನರಿಗೆ ಸಹಾಯಧನ ಹಂಚುವ ಮೂಲಕ ಶೇ. 75 ಗುರಿ ಸಾಧಿಸಿದೆ. ಇವರಲ್ಲಿ ಪರಿಶಿಷ್ಟ ಜಾತಿಯ 325, ಪರಿಶಿಷ್ಟ ಪಂಗಡ 379 ಮಹಿಳೆಯರು, ಅಂಗವಿಕಲ 5 ಜನರು ಸೇರಿದ್ದರು.  ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದಲ್ಲಿ ಜಿಲ್ಲೆ ಶೇ. 243 ಗುರಿ ಸಾಧಿಸಿದೆ. ವಿಶೇಷ ವರ್ಗದ 14 ಜನರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದು, ವರ್ಷಾಂತ್ಯಕ್ಕೆ 34 ಜನರಿಗೆ ಸಹಾಯ ಒದಗಿಸಲಾಗಿದೆ. 33 ಮಂದಿಗೆ ವೃತ್ತಿಪರ ತರಬೇತಿ ನೀಡಿ, ಟೂಲ್ಕಿಟ್ಗಳನ್ನು ವಿತರಿಸಿ ಶೇ. 100 ಸಾಧನೆ ಮಾಡಿದ್ದಾರೆ. ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ರಸ್ತೆ ಬದಿಯ ಕುಟೀರ ಉಪಕರಣ ಪೆಟ್ಟಿಗೆಯನ್ನು 15 ಜನರಿಗೆ ಹಾಗೂ ಆಧುನಿಕ ಮಾರಾಟ ಕುಟೀರವನ್ನು ತಲಾ 4 ಜನರಿಗೆ ನೀಡುವ ಮೂಲಕ ಶೇ. 100 ಹಾಗೂ ಶೇ. 80 ಸಾಧನೆ ಮಾಡಿದೆ.
ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ವತಿಯಿಂದ ಚೈತನ್ಯ ಮಾರ್ಜಿನ್ ಸಾಲವನ್ನು 176 ಫಲಾನುಭವಿಗಳಿಗೆ ಒದಗಿಸುವ ಯೋಜನೆಯಲ್ಲಿ 2013ರ ಮಾರ್ಚ್ ಅಂತ್ಯಕ್ಕೆ 102 ಮಂದಿಗೆ ವಿತರಿಸಲಾಗಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 288 ಫಲಾನುಭವಿಗಳಿಗೆ ಸ್ವಾವಲಂಬನ ಯೋಜನೆಯ ಸಾಲ ವಿತರಣೆಯಲ್ಲಿ ವರ್ಷಾಂತ್ಯಕ್ಕೆ 224 ಜನರಿಗೆ ದೊರಕಿಸಿ ಶೇ. 78 ಗುರಿ ಸಾಧಿಸಲಾಗಿದೆ.
ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ 129 ಕೊಳವೆ ಬಾವಿಯನ್ನು ತೋಡಿಸಲಾಗಿದ್ದು, ಶೇ. 98 ಗುರಿ ಸಾಧಿಸಲಾಗಿದೆ. ಸಾಮೂಹಿಕ ಕೊಳವೆ ಬಾವಿಯಲ್ಲಿ 18 ಕೊರೆಸಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 105 ಕೊರೆಸಲಾಗಿದ್ದು, ಶೇ. 88 ಗುರಿ ಸಾಧಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 25,033 ಡಿಟಿಪಿ, 25,033 ಪೋಲಿಯೋ, 25186 ಬಿಸಿಜಿ, 24,607 ದಡಾರ ಚುಚ್ಚುಮದು ಹಾಗೂ 26,462 ಮಂದಿ ಗರ್ಭಿಣಿಯರಿಗೆ ಟಿಟಿ ಚುಚ್ಚುಮದ್ದು ನೀಡಲಾಗಿದೆ.
ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ 40,030 ಸಾಮಾನ್ಯ ಜನರಿಗೆ ಹಾಗೂ 24,336 ಗರ್ಭಿಣಿಯರಿಗೆ ವಿವಿಧ ಪರೀಕ್ಷೆಗಳನ್ನು ನಡೆಸಲಾಗಿದೆ. 4560 ಫಲಾನುಭವಿಗಳಿಗೆ ಮಡಿಲು ಕಿಟ್ಗಳನ್ನು ವಿತರಿಸಲಾಗಿದೆ. 8,309 ಜನರು ಜನನಿ ಸುರಕ್ಷಾ ಫಲಾನುಭವಿಗಳಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರಪ ಶಿಶು ಅಭಿವೃದ್ಧಿ ಯೋಜನೆಯಡಿ ಹುಟ್ಟಿದ ಮಗುವಿನಿಂದ 3ವರ್ಷದೊಳಗಿನ 53,390 ಮಕ್ಕಳಿಗೆ, 3 ರಿಂದ 6 ವರ್ಷದ 42,538 ಮಕ್ಕಳಿಗೆ, 115 ಗರ್ಭಿಣಿಯರಿಗೆ ಹಾಗೂ 105 ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಿಸಲಾಗಿದೆ ಎಂದು ಉಪನಿರ್ದೇಶಕರು ತಿಳಿಸಿದರು. ಬಸವ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ 2012 ಮಾರ್ಚ್ ಅಂತ್ಯಕ್ಕೆ ಒಟ್ಟು 4,536 ಮನೆಗಳು, ಇಂದಿರಾ ಅವಾಜ್ ಯೋಜನೆಯನ್ವಯ 120 ಮನೆಗಳನ್ನು ನಿರ್ಮಿಸಲಾಗಿದೆ.
ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆಶಾ ತಿಮ್ಮಪ್ಪಗೌಡ, ಉಪ ಕಾರ್ಯದರ್ಶಿ ಟಿ.ಎಂ. ಶಶಿಧರ್, ಮುಖ್ಯ ಯೋಜನಾಧಿಕಾರಿ ನಝೀರ್, ಯೋಜನಾ ನಿರ್ದೇಶಕಿ ಸೀತಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.