ಹುಲಿ ಸಂರಕ್ಷಣೆ ಅರಣ್ಯ ಸಂರಕ್ಷಣೆಯ ಒಂದು ಭಾಗ: ರಮಾನಾಥ ರೈ
ಬೆಳ್ತಂಗಡಿ: ಹುಲಿ ಸಂರಕ್ಷಣೆ ಪರಿಸರ ಸಂರಕ್ಷಣೆಯ ಒಂದು ಭಾಗವಾಗಿದ್ದು ಅನಿವಾರ್ಯವೂ ಆಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳೀದರು. ಅವರು ಗುರುವಾರ ರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಹುಲಿ ಅಭಯಾರಣ್ಯದ ಸಾಧಕ ಬಾಧಕಗಳನ್ನು ಚರ್ಚಿಸಿ ಕೇಂದ್ರ ಸಚಿವರ ಜತೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗವುದು. ಪರಿಸರದ ರಕ್ಷಣೆಗೆ ಅಗತ್ಯವುಳ್ಳ ತೀರ್ಮಾನಗಳನ್ನು ಕೈಗೊಳ್ಳಬೇಕಾಗಿದ್ದು ಹುಲಿ ಸಂರಕ್ಷಣೆ ಅನಿವಾರ್ಯಗಳ ಪೈಕಿ ಒಂದಾಗಿದೆ ಎಂದರು. ನಗರ ಪ್ರದೇಶಕ್ಕೆ ಆನೆ ದಾಳಿ ನಡೆಯುವ ನಿಟ್ಟಿನಲ್ಲಿ ತಜ್ಞರ ಸಮಿತಿಯ ವರದಿ ಸಿದ್ಧವಾಗಿದ್ದು ಜನರಿಗೆ ತೊಂದರೆಯಾಗದಂತೆ ಆನೆ ಕಾರಿಡಾರ್ ನಿರ್ಮಿಸಲಾಗುವುದು. ಅರಣ್ಯ ಇಲಾಖೆಯನ್ನು ಜನಸ್ನೇಹಿಯಾಗಿ ಪರಿವರ್ತಿಸಲಾಗುವುದು ಎಂದರು. ಮಂಗಳೂರಿನ ಪಿಲಿಕುಳ ಸಮೀಪ 10 ಎಕರೆ ಜಾಗದಲ್ಲಿ ನಗರ ಇಕೋ ಉದ್ಯಾನವನ ಸ್ಥಾಪನೆ ಮಾಡುವ ಉದ್ದೇಶವಿದೆ. ಪರಿಸರದ ಸಂರಕ್ಷಣೆಗೆ ಮತ್ತು ಮುಂದಿನ ಪೀಳಿಗೆಯಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದರು. ಬಯಲು ಪ್ರದೇಶ ಹಾಗೂ ಒಣ ಭೂಮಿಯಲ್ಲಿ ಬೆಳೆಯುವ ಮರಗಳನ್ನು ಹೆಚ್ಚಾಗಿ ಬಳಸುವಂತೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು. ಡಿ. ಹರ್ಷೇಂದ್ರ ಕುಮಾರ್ ಈ ಸಂದರ್ಭದಲ್ಲಿ ಇದ್ದರು.
ಸುಬ್ರಹ್ಮಣ್ಯ:28ರಂದು ನಾಗಪ್ರತಿಷ್ಠೆ ಇಲ್ಲ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದಲ್ಲಿದ್ದ ನಾಗನ ಕಲ್ಲುಗಳನ್ನು ನೂತನವಾಗಿ ನಾಗನಹಿತ್ಲುವಿನಲ್ಲಿ ನಿರ್ಮಿಸಿದ ನಾಗನಕಟ್ಟೆಗೆ ಸಾಗಿಸಲು ಇರುವುದರಿಂದ ಮೇ 28ರಂದು ಮಂಗಳವಾರ ಶ್ರೀದೇವಳದಲ್ಲಿ ನಾಗಪ್ರತಿಷ್ಠಾ ಸೇವೆ ಇರುವುದಿಲ್ಲ. ಆದರೆ ಮೇ 27ರಂದು ಪ್ರಾರಂಭವಾಗಿ 28ರಂದು ಕೊನೆಗೊಳ್ಳುವ ಸರ್ಪಸಂಸ್ಕಾರ ಸೇವೆಯ ಬಾಬ್ತು ನಡೆಯುವ ನಾಗಪ್ರತಿಷ್ಠಾ ಸೇವೆಯು ಮೇ 29ರಂದು ನೆರವೇರುವುದು ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

