ಕೈಗೆಟಕುವ ದರದಲ್ಲಿ ಸೈಟ್ ನೀಡಿ: ಖಾದರ್
ಮಂಗಳೂರು: ನಗರ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ಗಳ ಕೊಡುಗೆ ಅಪಾರವಾದ್ದು. ಜನಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ಸೈಟ್ ನೀಡಲು ಮುಂದಾಗುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಕರೆ ನೀಡಿದ್ದಾರೆ.
ಮಂಗಳೂರಿನ ಡಾ.ಟಿ.ಎಂ.ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಮಣಿಪಾಲ್ ಏಸ್ ಆಶ್ರಯದಲ್ಲಿ ಶನಿವಾರ 2 ದಿನಗಳ 'ಬಿಲ್ಡ್ಕಾನ್ ರಿಯಲ್ ಎಸ್ಟೇಟ್ ಎಕ್ಸ್ಪೋ-2013' ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ತಲೆಎತ್ತಿದ ಪ್ರಮುಖ ಕಟ್ಟಡಗಳು ಜಿಲ್ಲೆಯ ಸೌಂದರ್ಯಕ್ಕೆ ಕಲಶಪ್ರಾಯವಾಗಿದೆ. ಬಿಲ್ಡರ್ಗಳು, ಬ್ಯಾಂಕರ್ಗಳು ಸೇರಿ ಗ್ರಾಹಕರಿಗೆ ಉತ್ತಮ ಅವಕಾಶ ಒದಗಿಸುವುದು ಶ್ಲಾಘನಾರ್ಹ ಎಂದು ಹೇಳಿದರು.
ಶಾಸಕ ಜೆ.ಆರ್. ಲೋಬೋ ಮಾತನಾಡಿ, ಮಂಗಳೂರು ನಗರದಲ್ಲಿ ಕಟ್ಟಡ ಪರಿಪೂರ್ಣ ಇದ್ದರೂ ದೈನಂದಿನ ವ್ಯವಸ್ಥೆ ಸರಿ ಇಲ್ಲ. ಕಟ್ಟಡ ನಿರ್ಮಾಣಕ್ಕೆ ಹೂಡಿಕೆ ಮಾಡುವಾಗ ಗ್ರಾಹಕರ ಬಗ್ಗೆ ಕಾಳಜಿ ಇರಬೇಕು ಎಂದರು.
ಮುಗ್ಧ ಗ್ರಾಹಕರು ಬಲಿಬೀಳಬಾರದು. ಮಹಾನಗರ ಪಾಲಿಕೆ ಮಾರ್ಗಸೂಚಿಯಂತೆ ಕಟ್ಟಡ ರಚನೆ ಕೈಗೊಳ್ಳಬೇಕಿದ್ದು, ಗ್ರಾಹಕರ ನಂಬಿಕೆ ಕಳಕೊಳ್ಳಬಾರದು ಎಂದು ಹೇಳಿದರು. ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ಮಾತನಾಡಿದರು.
ಎಸ್ಬಿಐ ಡಿಜಿಎಂ ಬಾಲಕೃಷ್ಣ ನೈಕ್, ಸಿವಿಲ್ ಎಂಜಿನಿಯರ್ ಎಸೋಸಿಯೇಶನ್ ಅಧ್ಯಕ್ಷ ವಿಜಯವಿಷ್ಣು ಮಲ್ಯ ಹಾಜರಿದ್ದರು.
ಬಿಲ್ಡ್ಕಾನ್ನಲ್ಲಿ...: ಮಂಗಳೂರಿನಲ್ಲಿ ಬಿಲ್ಡ್ಕಾನ್ ರಿಯಲ್ ಎಕ್ಸ್ಪೋ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ.
ಈ ಬಾರಿ 20 ಬಿಲ್ಡರ್ಸ್, 6 ಬ್ಯಾಂಕ್ಗಳು, 10 ಬಿಲ್ಡಿಂಗ್ ಮೆಟೀರಿಯಲ್ ಕಂಪನಿಗಳು ಭಾಗವಹಿಸುತ್ತಿವೆ. 45 ಸ್ಟಾಲ್ಗಳಿದ್ದು, 2 ದಿನಗಳ ಕಾಲ 3ರಿಂದ 5 ಸಾವಿರ ಜನರನ್ನು ನಿರೀಕ್ಷಿಸಲಾಗಿದೆ.
ಮಂಗಳೂರಿನ ಮೋತಿಶ್ಯಾಂ, ಬೆಂಗಳೂರಿನ ಬ್ರಿಗೇಡರ್ಸ್, ಉಡುಪಿಯ ಸಾಯಿರಾಂ ಮುಂತಾದ ಪ್ರಮುಖ ಬಿಲ್ಡರ್ ಕಂಪನಿಗಳು ಪಾಲ್ಗೊಂಡಿವೆ.
ಮಂಗಳೂರಲ್ಲಿ ಚದರ ಅಡಿಗೆ ರು. 2,250ರಿಂದ ರು. 5 ಸಾವಿರ ವರೆಗೆ ಬೆಲೆ ಇದೆ ಎಂದು ಸಂಯೋಜಕ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

