ತಪ್ಪಿದಾಗ, ಎಚ್ಚರಿಸಿ ಬುದ್ಧಿ ಹೇಳಿ: ಸೊರಕೆ
ಉದ್ಯಾವರ: ಮತದಾರರು ನಮಗೆ ಶಕ್ತಿ ತುಂಬಿದ್ದಾರೆ, ಅದನ್ನು ಹಿಂದುತಿರುಗಿಸಿ ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಾವು ಬದ್ಧರಾಗಿದ್ದೇವೆ. ನಾವು ತಪ್ಪಿದಾಗ ಎಚ್ಚರಿಸಿ ಬುದ್ಧಿ ಹೇಳಿ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಇಲ್ಲಿನ ಚರ್ಚ್ ಕಾಂಪೌಂಡಿನಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜರಗಿದ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತಾರ್ಪಣಾ ಸಮಾರಂಭದಲ್ಲಿ ಮಾತನಾಡಿದರು.
ದಾನವಲ್ಲ, ಸಾಲ: ಈ ಸಂದರ್ಭದಲ್ಲಿ ಅಭಿನಂದನಾ ಭಾಷಣ ಮಾಡಿದ ಸಮಿತಿಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಸಚಿವರು, ಶಾಸಕರು ಪಡೆದದ್ದು ಮತಗಳ ದಾನವಲ್ಲ, ದಾನವಾದರೆ ಅದು ಹಿಂದಿರುಗಿಸಬೇಕಾಗಿಲ್ಲ. ಇದು ಸಾಲ, ಇವೆಲ್ಲವನ್ನು ತಾವು 5 ವರ್ಷಗಳಲ್ಲಿ ಜನತೆಯ ಕೆಲಸ ಮಾಡುವ ಮೂಲಕ ಹಿಂದುರುಗಿಸಬೇಕಾಗಿದೆ. ಕಾರ್ಯಕರ್ತರು ನಿಮ್ಮ ಗೆಲವಿಗೆ ರಾತ್ರಿ ಹಗಲು ದುಡಿದಿದ್ದಾರೆ. ಅವರನ್ನು ಗುರುತಿಸಿ ಪ್ರೀತಿಸಿ, ಈಗ ಹಾರ ಹಿಡಿದು ಮುಂದೆ ಬರುವವರ ಬಗ್ಗೆ ಎಚ್ಚರವಿರಲಿ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ದಿವಾಕರ ಕುಂದರ್, ತಾಪಂ ಸದಸ್ಯ ಪ್ರವೀಣ್ ಶೆಟ್ಟಿ, ಧರ್ಮಗುರುಗಳಾದ ರೆ.ಫಾ. ಸಿಫ್ರಿಯಾನ್ ಪಿಂಟೊ ಮತ್ತು ರೆ.ಫಾ. ವಿಲಿಯಂ ಮಾರ್ಟಿಸ್, ಹಿರಿಯ ಕಾಂಗ್ರೆಸಿಗ ಯು. ಆನಂದ ಮೆಂಡನ್, ಬಿಲ್ಲವ ಮುಖಂಡ ಸದಾಶಿವ ಕೋಟ್ಯಾನ್, ಕಾಪು ಬ್ಲಾಕ್ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ, ಜಿಲ್ಲಾ ಸೇವಾದಳದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಅಜೀಜ್ ಹೆಜಮಾಡಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಉಡುಪಿ- ಚಿಕ್ಕಮಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಬೀಬ್ ಆಲಿ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮೀಣ ಸಮಿತಿಯ ಕಾರ್ಯದರ್ಶಿ ಲೋರೆನ್ಸ್ ಡೇಸಾ ಸ್ವಾಗತಿಸಿದರು. ರಮೇಶ್ ಕುಮಾರ್ ಉದ್ಯಾವರ ನಿರೂಪಿಸಿ, ರಿಯಾಜ್ ಪಜಳ್ಳಿ ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಉದ್ಯಾವರ ಮಠದಂಗಡಿ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಮೆರವಣಿಗೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಅಭಿನಂದಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

