ದಕ್ಷಿಣ ಕನ್ನಡ

ಬಳಕೆದಾರರ ಶುಲ್ಕಕ್ಕೆ ರಶೀದಿ ಇಲ್ಲ: ಆರೋಪ

Published On :

ಪುತ್ತೂರು: ಹಾಲಿ ರೇಶನ್ ಕಾರ್ಡ್ ನವೀಕರಣ, ತಿದ್ದುಪಡಿ, ಹೊಸ ಕಾರ್ಡ್‌ಗಳಿಗಾಗಿ ಸರ್ಕಾರದ ಕಚೇರಿಯಲ್ಲಿ ಅಥವಾ ಫ್ರಾಂಚೈಸಿ ಬಳಿ ಪಾವತಿಸುವ ಬಳಕೆದಾರರ ಶುಲ್ಕಕ್ಕೆ ಯಾವುದೇ ರೀತಿಯ ರಶೀದಿ ನೀಡುತ್ತಿಲ್ಲ. ಇದರಿಂದಾಗಿ ಶುಲ್ಕ ವಸೂಲಾತಿಯಲ್ಲಿ ಗೊಂದಲ, ಜನರನ್ನು ಪ್ರಾಂಚೈಸಿಗಳು ಶೋಷಿಸಲು ಅವಕಾಶ ನೀಡಿದಂತಾಗುತ್ತದೆ ಎಂದು ಬೊಳುವಾರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ಡಾ. ಸಿ. ನಿತ್ಯಾನಂದ ಪೈ  ಆರೋಪಿಸಿದ್ದಾರೆ. ಸರ್ಕಾರದ ಎಲ್ಲಾ ವ್ಯವಹಾರಗಳಿಗೆ ಅಥವಾ ದೂರು ದಾಖಲಿಸಲು ಲಿಖಿತ ಸಾಕ್ಷ್ಯಾಧಾರಗಳು ಅವಶ್ಯವಾಗಿರುವುದು ವಾಸ್ತವದ ಸಂಗತಿಯಾಗಿರುತ್ತದೆ. ಆದರೆ ಸರ್ಕಾರದ ಯಾ ಸರ್ಕಾರದ ಪ್ರತಿನಿಧಿಗಳಿಗೆ ಶುಲ್ಕದ ಬಗ್ಗೆ ಯಾವುದೇ ರಶೀದಿ ಅಥವಾ ದಾಖಲೆ ನೀಡದಿರುವುದು ಸಮಂಜಸವಲ್ಲ. ಇ- ಆಡಳಿತ ಉಪಕ್ರಮಗಳ ಈ ಕಾಲದಲ್ಲಿ ಗಣಕಯಂತ್ರಗಳ ಮೂಲಕವೇ ಜನರು ಪಾವತಿಸುವ ಸಂಪೂರ್ಣ ಮೊತ್ತಕ್ಕೆ ಸೂಕ್ತ ರಶೀದಿ ನೀಡುವಿಕೆಯು ಅವಶ್ಯವೂ,ನ್ಯಾಯ ಸಮ್ಮತ ಕ್ರಮವೂ ಆಗಿರುತ್ತದೆ. ಆದ ಕಾರಣ ಈ ಬಗ್ಗೆ ಪರಿಶೀಲಿಸಿ ಸೂಕ್ತ ಆದೇಶ ನೀಡುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ವಿವಿಧ ಬೇಡಿಕೆ ಈಡೇರಿಕೆಗೆ ಮನವಿ
ಮೂಲ್ಕಿ: ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿವಿ ವ್ಯಾಪ್ತಿಯ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯ ಸಭೆಯಲ್ಲಿ ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆ ಭರ್ತಿ ಮಾಡುವ ಬಗ್ಗೆ, ಪದವಿ ತರಗತಿಗಳಿಗೆ ಹೊಸ ವಿಷಯಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ, ಬೇಡಿಕೆ ಕಡಿಮೆಯಿರುವ ಪದವಿ ಕೋರ್ಸುಗಳ ಸಂಯೋಜನ ಶುಲ್ಕ ಕಡಿಮೆ ಮಾಡುವ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಕಾಲೇಜು ಅಧ್ಯಾಪಕರಿಗೆ ವಿವಿ ಹಣಕಾಸು ಆಯೋಗದಿಂದ ಬಾಕಿಯಿರುವ ಬಗ್ಗೆ, ಅನುದಾನಿತ ಕಾಲೇಜುಗಳಲ್ಲಿ ಕೆಲವು ವರ್ಷಗಳಿಂದ ಭೋದಕ, ಭೋದಕೇತರ ಹುದ್ದೆ ಖಾಲಿಯಿರುವ ಬಗ್ಗೆ ನೂತನ ಸರ್ಕಾರ ಖಾಲಿಯಿರುವ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಅಧ್ಯಕ್ಷತೆಯನ್ನು ಮಂಡಳಿಯ ಅಧ್ಯಕ್ಷ ಡಾ.ಎಚ್. ಶಾಂತರಾಮ್ ವಹಿಸಿದ್ದರು.
 ಮೂಲ್ಕಿ ವಿಜಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ ಎ.ಆರ್. ಕುಡ್ವ, ಪ್ರಾಂಶುಪಾಲ ಕೆ.ಆರ್. ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.