ದಕ್ಷಿಣ ಕನ್ನಡ

ಲೆಕ್ಕಪರಿಶೋಧಕರ ಕಚೇರಿಯಲ್ಲಿ ಕಳವು

Published On :

ಮಂಗಳೂರು: ಬಂಟ್ಸ್ ಹಾಸ್ಟೆಲ್ ಬಳಿ ಲೆಕ್ಕಪರಿಶೋಧಕರ ಕಚೇರಿಗೆ ನುಗ್ಗಿದ ಕಳ್ಳರು ಎರಡು ಕಂಪ್ಯೂಟರ್ ಮತ್ತು 2 ಸಾವಿರ ಕಳವು ಮಾಡಿದ್ದಾರೆ. ಶನಿವಾರ ರಾತ್ರಿ ಕಚೇರಿ ಬಾಗಿಲು ಹಾಕಿದ ಲೆಕ್ಕ ಪರಿಶೋಧಕ ಸುದೇಶ್ ರೈ ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಕಚೇರಿ ಬಾಗಿಲು ತೆರೆಯುವ ವೇಳೆ ಕಳ್ಳತನ ಆಗಿರುವುದು ಪತ್ತೆಯಾಗಿದೆ. ಕಳವಾದ ಸೊತ್ತುಗಳ ಮೌಲ್ಯ 62 ಸಾವಿರ ಅಂದಾಜಿಸಲಾಗಿದೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉಡುಪಿ: ಸ್ಕೂಟರ್ ಕಳವು
ಉಡುಪಿ: ನಗರದ ಹೊಟೇಲ್ ಎದುರು ನಿಲ್ಲಿಸಿದ ಸ್ಕೂಟರ್ ಕಳವಾದ ಘಟನೆ ಭಾನುವಾರ ಸಂಭವಿಸಿದೆ. ಅಜಿತ್ ಎ. ಭಟ್ ತನ್ನ ತಂದೆಯ ಸುಜಕಿ ಆಕ್ಸೆಸ್ ಸ್ಕೂಟರನ್ನು ಉಡುಪಿಗೆ ಬಂದು ಸರ್ವಿಸ್ ಬಸ್ ನಿಲ್ದಾಣ ಬಳಿ ಇರುವ ಶಾಂತಿಸಾಗರ ಹೊಟೇಲ್ ಎದುರು ನಿಲ್ಲಿಸಿ ಹೊಟೇಲಿಗೆ ಹೋಗಿದ್ದು, ವಾಪಾಸು ಬಂದು ನೋಡಿದಾಗ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ಕಳವಾದ ವಾಹನದ ಮೌಲ್ಯ ರು. 45,000 ಎಂದು ಅಜಿತ್ ಎ. ಭಟ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ಮೊಬೈಲ್ ಎಗರಿಸಿ ಪರಾರಿ
ವಿಟ್ಲ: ಮನೆಗೆ ನುಗ್ಗಿದ ಕಳ್ಳರು ಸೊತ್ತಿಗಾಗಿ ಹುಡುಕಾಡಿದ್ದು, ಮನೆಯವರು ಎಚ್ಚರಗೊಂಡ ಹಿನ್ನೆಲೆಯಲ್ಲಿ ಕೈಗೆ ಸಿಕ್ಕ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ಕನ್ಯಾನ ಸಮೀಪದ ಬೈರಿಕಟ್ಟೆ ಎಂಬಲ್ಲಿ ಭಾನುವಾರ ನಡೆದಿದೆ. ಬೈರಿಕಟ್ಟೆ ನಿವಾಸಿ ಎಂ. ಇಬ್ರಾಹಿಂ ಮನೆಗೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು ಚಿನ್ನಾಭರಣಕ್ಕಾಗಿ ಹುಡುಕಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮನೆಯವರಿಗೆ ಎಚ್ಚರಗೊಂಡು ಬೊಬ್ಬೆ ಹಾಕಿದ ಹಿನ್ನೆಲೆಯಲ್ಲಿ ಕಳ್ಳರು ಅವರನ್ನು ತುಳಿದುಕೊಂಡು ಪರಾರಿಯಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಅದೇ ಪರಿಸರದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಳವಿಗೆ ವಿಫಲ ಯತ್ನ ನಡೆಸಿದ್ದರು ಎನ್ನಲಾಗಿದೆ. ವಾರದ ಹಿಂದೆ ಕನ್ಯಾನ ಗ್ರಾಮದ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಒಂದು ಮನೆಯಿಂದ ಉಂಗುರ ಹಾಗೂ ಇನ್ನೊಂದು ಮನೆಯಲ್ಲಿ ಕಳವಿಗೆ ವಿಫಲ ಯತ್ನ ನಡೆಸಿದ್ದರು ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.