ದಕ್ಷಿಣ ಕನ್ನಡ

ಮೋದಿ ಭೇಟಿ

Published On :

ಮಂಗಳೂರು: ಯಂಗ್ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಶನ್(ವೈಎಂಸಿಎ) ವತಿಯಿಂದ ಅಹಮ್ಮದ್ಬಾದಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ನಗರದ ಅಥೆನಾ ಆಸ್ಪತ್ರೆಯ ಅಧ್ಯಕ್ಷ ಆರ್.ಎಸ್. ಶೆಟ್ಟಿಯಾನ್ ಪಾಲ್ಗೊಂಡಿದ್ದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜತೆ ಮಾತನಾಡಿದರು. ವಿಚಾರ ವಿನಿಮಯ ನಡೆಸಿದ ಬಳಿಕ, ಸಂಸ್ಥೆಯ ರಾಷ್ಟ್ರೀಯ ಯುವ ಸೇವಾ ಕಾರ್ಯಚಟುವಟಿಕೆಗಳ ಬಗ್ಗೆ ಮೋದಿ ಅವರಿಗೆ ಸಂಕ್ಷಿಪ್ತ ವಿವರ ನೀಡಿದರು. ಈ ಸಂದರ್ಭ ವೈಎಂಸಿಎ ರಾಷ್ಟ್ರಾಧ್ಯಕ್ಷ ರೋಲ್ಯಾಂಡ್ ವಿಲಿಯಂ ಹಾಜರಿದ್ದರು.
ಜೂ. 1ರಿಂದ ತರಬೇತಿ
ಮಂಗಳೂರು: ಮಹಾನಗರ ಪಾಲಿಕೆ ನಗರ ಬಡತನ ನಿರ್ಮೂಲನ ಕೋಶ ವತಿಯಿಂದ ಜೂ. 1 ರಿಂದ ಪಾಂಡೇಶ್ವರ ವೇದಂ ಆಯು ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ತರಬೇತಿ ನಡೆಯಲಿದೆ. ತರಬೇತಿಯಲ್ಲಿ ಥೆರಪ್ಯುಟಿಕ್ ಮಸಾಜ್ ಟೆಕ್ನಿಶಿಯನ್, ಫಿಸಿಯೋಥೆರಪಿ, ನ್ಯಾಚುರೋ ಥೆರಫಿಸ್ಟ್ ಕಲಿಸಲಾಗುವುದು. 4 ತಿಂಗಳು ತರಬೇತಿ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಂ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.