ಕರ್ಣಾಟಕ ಬ್ಯಾಂಕ್: ಬಡ್ಡಿದರ ಪರಿಷ್ಕರಣೆ
ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ದೇಶೀಯ ಬಡ್ಡಿದರವನ್ನು ನ.7ರಿಂದ ಅನ್ವಯವಾಗುವಂತೆ ಪರಿಷ್ಕರಿಸಿದೆ. 121 ರಿಂದ 180 ದಿನಕ್ಕೆ ಶೇ.8, 181ರಿಂದ 364 ದಿನಕ್ಕೆ ಶೇ.8.50, 1 ವರ್ಷದಿಂದ 2 ವರ್ಷ ಶೇ.9.50 ( 5 ಕೋಟಿಗಿಂತ ಅಧಿಕ ಠೇವಣಿಗೆ ಶೇ.9.25), 2 ರಿಂದ 3 ವರ್ಷ ಶೇ.9.25 ( 5 ಕೋಟಿಗಿಂತ ಜಾಸ್ತಿ ಠೇವಣಿಗೆ ಶೇ.9), 3 ವರ್ಷ ಶೇ.9( 5 ಕೋಟಿ ವರೆಗೆ) ನಿಗದಿಪಡಿಸಲಾಗಿದೆ. ಹಿರಿಯನ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ.0.50 ಬಡ್ಡಿದರ ಸೇರಿಸಲಾಗುವುದು. ಎನ್ಆರ್ಇ ಅವಧಿಯ ಠೇವಣಿಗೆ 1ರಿಂದ 2 ವರ್ಷ ಶೇ.9.50, 2ರಿಂದ 3 ವರ್ಷ ಶೇ.9.25, 3 ವರ್ಷದಿಂದ 5 ವರ್ಷ ಶೇ.9.75, 5 ವರ್ಷದಿಂದ 10 ವರ್ಷ ಶೇ.9.50 ಬಡ್ಡಿದರ ನಿಗದಿಪಡಿಸಲಾಗಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.
14ರಿಂದ ಶಬರಿಮಲೆ ಬಳಿ ತಾತ್ಕಾಲಿಕ
ರೈಲು ನಿಲುಗಡೆ
ಮಂಗಳೂರು: ಶಬರಿಮಲೆ ಉತ್ಸವ ಪ್ರಯುಕ್ತ ಚೆಂಗನ್ನೂರಿನಲ್ಲಿ ಸಂಚರಿಸುವ ನಾಲ್ಕು ರೈಲುಗಳಿಗೆ ನ.14ರಿಂದ ಜ.19ರ ವರೆಗೆ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ. ತಿರುವನಂತಪುರಂ-ಚೆನ್ನೈ ಸೆಂಟ್ರಲ್ ವೀಕ್ಲಿ ಎಕ್ಸ್ಪ್ರೆಸ್, ಚೆನ್ನೈ ಸೆಂಟ್ರಲ್-ತಿರುವನಂತಪುರಂ 1-ವೀಕ್ಲೀ ಎಕ್ಸ್ಪ್ರೆಸ್, ಕುಚ್ಚುವೇಲಿ-ಭಾವನಗರ್ ವೀಕ್ಲಿ ಎಕ್ಸ್ಪ್ರೆಸ್, ಭಾವನಗರ್-ಕುಚ್ಚುವೇಲಿ ವೀಕ್ಲಿ ಎಕ್ಸ್ಪ್ರೆಸ್ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ ಎಂದು ಪಾಲ್ಘಾಟ್ ರೇಲ್ವೆ ವಿಭಾಗ ಪ್ರಕಟಣೆ ತಿಳಿಸಿದೆ.
ರಿಕ್ಷಾ ಚಾಲಕ ನಾಪತ್ತೆ
ವಿಟ್ಲ: ರಿಕ್ಷಾ ಚಾಲಕ ಶಶಿಕುಮಾರ್ (18) ಅ. 31ರಿಂದ ನಾಪತ್ತೆಯಾಗಿದ್ದಾನೆ ಎಂದು ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಕರೈಯಲ್ಲಿ ಆಟೋ ಚಲಾಯಿಸುತ್ತಿದ್ದ ಈತ ಅ. 31ರಂದು ಸಂಜೆ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದು ವಾಪಸಾಗಿರಲಿಲ್ಲ. ನ.1ರಂದು ತನ್ನ ಅಕ್ಕನನ್ನು ಮೊಬೈಲ್ನಲ್ಲಿ ಸಂಪರ್ಕಿಸಿ, ತಾನು ಮನೆಗೆ ಹೋಗುವುದಿಲ್ಲ, ಹುಡುಕಬೇಡಿ ಎಂದಿದ್ದು ಬಳಿಕ ಸ್ವಿಚ್ ಆಫ್ ಮಾಡಿದ್ದಾನೆ. ಆಮೇಲೆ ಆತನ ಪತ್ತೆಯಾಗಲಿಲ್ಲ ಎಂದು ಸುಳ್ಯ ತಾಲೂಕಿನ ತೋಡಿಕಾನದ ಅಡ್ಯಡ್ಕ ತ್ಯಾಗರಾಜು ಕೆ. ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

