ದಕ್ಷಿಣ ಕನ್ನಡ

ಇಂದು 'ಸಾವಯವ ಕೃಷಿ ಉತ್ಪನ್ನಗಳ ಆಂದೋಲನ'

Published On :


ಮಂಗಳೂರು: ಕುಡುಪು ಸಾವಯವ ಪ್ರೇರಣಾ ಕೂಟದ ವತಿಯಿಂದ 14 ರಂದು ಬೆಳಗ್ಗೆ 11ಕ್ಕೆ ರೋಶನಿ ನಿಲಯದ ಸೋಶಿಯಲ್ ವರ್ಕ್ಸ್ ಕಾಲೇಜಿನಲ್ಲಿ ಸಾವಯವ ಉತ್ಪನ್ನ ವಿಚಾರ ಸಂಕಿರಣ ಮತ್ತು ಮಾರಾಟ ಮೇಳ ನಡೆಯಲಿದೆ. ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಸಾವಯವ ಆಹಾರ ಉತ್ಪಾದನೆ ಹಾಗೂ ವಿತರಣೆ ಮಹತ್ವದ ಕುರಿತು ಅರಿವು ಮತ್ತು ವಿಚಾರಸಂಕಿರಣ ಕಾರ್ಯಕ್ರಮ ನಡೆಯಲಿದೆ ಎಂದು ಕೂಟದ ಸಂಚಾಲಕಿ ಡಾ. ರೀಟಾ ನೊರ್ಹೊನಾ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್‌ನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಇನ್‌ಫಾರ್‌ಮೇಶನ್ ಟೆಕ್ನೋಲಜಿ ವಿದ್ಯಾರ್ಥಿಗಳಿಂದ 'ಹೊಲದಿಂದ ಮನೆಗೆ' ಎಂಬ ಅಂತರ್ಜಾಲ ತಾಣ ಹಾಗೂ ಗ್ಲೋಬಲ್ ಟಿವಿ ರಚಿತ 'ಸಾವಯವ ಜೀವನ' ವೀಡಿಯೊ ಬಿಡುಗಡೆಗೊಳ್ಳಲಿದೆ ಎಂದರು. ಪ್ರಗತಿಪರ ರೈತ ಸನ್ನಿ ಡಿಸೋಜ, ಸಂಚಾಲಕ ಭರತ್ ಕುಮಾರ್ ರೈ ಇದ್ದರು.

ಇಂದು ಮಕ್ಕಳ ದಿನಾಚರಣೆ


ಮಂಗಳೂರು: ಯೇನೆಪೋಯ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಕ್ರೇನಿಯೋ ಫೇಶಿಯಲ್, ನ್ಯೂಯಾರ್ಕ್‌ನ ಸ್ಮಲ್ ಟ್ರೇನ್ ಸಂಸ್ಥೆ ಹಾಗೂ ಯೇನೆಪೋಯ ವಿವಿ ಎನ್‌ಎಸ್‌ಎಸ್ ವಿಭಾಗ ಆಶ್ರಯದಲ್ಲಿ ನ.14ರಂದು ಬೆಳಗ್ಗೆ 11.15ಕ್ಕೆ ಮಕ್ಕಳ ದಿನಾಚರಣೆ ನಡೆಯಲಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೇನಪೋಯ ವಿವಿ ಕುಲಸಚಿವ ಡಾ.ಪ್ರಭುವೀರ್, ಕರ್ನಾಟಕ ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ ನಿರ್ದೇಶಕ ಎಚ್.ಎಂ.ಮುಜೀಬ್ ಅಹ್ಮದ್ ಆಗಮಿಸುವರು. ವಿವಿ ಕುಲಾಧಿಪತಿ ಯೇನೆಪೋಯ ಅಬ್ದುಲ್ ಕುಂಞ ಅಧ್ಯಕ್ಷತೆ ವಹಿಸುವರು. ಉಪಕುಲಪತಿ ಡಾ.ಚಂದ್ರಮೋಹನ ಪಾಲ್ಗೊಳ್ಳುವರು. ಸುಮಾರು 1 ಸಾವಿರ ಮುಖ ವಿಕಲಚೇತನ ಮಕ್ಕಳಿಗೆ ಚಿಕಿತ್ಸೆ ನೀಡಿದ್ದು, 250 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.