ಬಂಟರ ಸಂಘಕ್ಕೆ ಅಜಿತ್ ಕುಮಾರ್ ಮಾಲಾಡಿ ಅಧ್ಯಕ್ಷ
ಮಂಗಳೂರು: ಬಂಟರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಂಗಳೂರಿನ 20ಕ್ಕೆ 20 ಸ್ಥಾನಗಳಲ್ಲಿ ಅಜಿತ್ ಕುಮಾರ್ ರೈ ಮಾಲಾಡಿ ಬಣ ಗೆಲವು ಸಾಧಿಸಿದೆ. ಬಂಟರ ಸಂಘದ ಅಧ್ಯಕ್ಷರಾಗಿ ಅಜಿತ್ ಕುಮಾರ್ ರೈ ಮಾಲಾಡಿ 1149 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಎ. ಸದಾನಂದ ಶೆಟ್ಟಿ ಬಣಕ್ಕೆ ತೀವ್ರ ಮುಖಭಂಗವಾಗಿದೆ.
ಒಟ್ಟು 13500 ಮತಗಳಲ್ಲಿ 7,800 ಮತ ಚಲಾವಣೆ ಆಗಿತ್ತು. ಇದರಲ್ಲಿ 4,363 ಮತಗಳು ಅಜಿತ್ ಕುಮಾರ್ ರೈ ಮಾಲಾಡಿ ಅವರಿಗೆ ಲಭಿಸಿತ್ತು. 3214 ಮತಗಳು ಎ.ಸದಾನಂದ ಶೆಟ್ಟಿ ಲಭಿಸಿವೆ.
ಅಜಿತ್ ರೈ ಬಣದ ಮಂಗಳೂರು ನಿಟ್ಟೆಗುತ್ತು ರವಿರಾಜ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ, ಕೃಷ್ಣಪ್ರಸಾದ್ ರೈ, ಜಗನ್ನಾಥ ಶೆಟ್ಟಿ ಬಾಳ, ಶಶಿರಾಜ್ ಶೆಟ್ಟಿ ಕೊಳಂಬೆ, ಮೇಘನಾಥ ಶೆಟ್ಟಿ ಮೂಡುಬಿದರೆ, ಉಮೇಶ್ ರೈ, ಕೇಶವ ಮಾರ್ಲ, ಡಾ.ಪೃಥ್ವಿ ಶೆಟ್ಟಿ, ಜಯರಾಮ ಸಾಂತ, ಗೋಪಾಲ ಶೆಟ್ಟಿ, ರವೀಂದ್ರ ಪೂಂಜಾ, ಸುರೇಶ್ ರೈ, ಯಶೋಧರ ಶೆಟ್ಟಿ, ವಿಕಾಸ್ ಶೆಟ್ಟಿ ಮನಮೋಹನ್ ಶೆಟ್ಟಿ, ಸುಂದರ ಶೆಟ್ಟಿ, ಸಂದೀಪ್ ಶೆಟ್ಟಿ, ಶ್ರೀನಿವಾಸ ಆಳ್ವ, ಸಾಮಾನ್ಯ ಮಹಿಳೆ ವಿಭಾಗದಲ್ಲಿ ಜಯಲಕ್ಷ್ಮಿ ಎಸ್.ಹೆಗ್ಡೆ ವಿಜೇತರಾಗಿದ್ದಾರೆ.
ಪ್ರತಿಷ್ಠಿತರಿಗೆ ಮುಖಭಂಗ: ಸದಾನಂದ ಶೆಟ್ಟಿ ಬಣದಲ್ಲಿ ಕದ್ರಿ ನವನೀತ್ ಶೆಟ್ಟಿ, ಪ್ರದೀಪ್ ಆಳ್ವ, ರೋಹಿತಾಕ್ಷ ರೈ ಮೊದಲಾದವರಿದ್ದರು. ನಿಟ್ಟೆ ವಿವಿ ಕುಲಪತಿ ವಿನಯ್ ಹೆಗ್ಡೆ, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಡಾ.ಶಾಂತಾರಾಮ ಶೆಟ್ಟಿ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾಜಿ ಸಚಿವ ಅಮರನಾಥ ಶೆಟ್ಟಿ ಅವರು ಎ.ಸದಾನಂದ ಶೆಟ್ಟಿ ಪರವಾಗಿ ಬಹಿರಂಗ ಪ್ರಚಾರ ನಡೆಸಿದ್ದರು.
ದೊಡ್ಡ ಉದ್ಯಮಿಗಳು ಎಲ್ಲ ಸದಾನಂದ ಶೆಟ್ಟಿ ಪರವಾಗಿದ್ದರು. ಆದರೆ ಮಂಗಳೂರು ತಾಲೂಕಿನ ಒಂದೇ ಒಂದು ಕಾರ್ಯಕಾರಿ ಸಮಿತಿ ಸದಸ್ಯತ್ವ ಪಡೆಯಲು ಅಸಾಧ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

