ಅತ್ತಾಜೆ: ರಸ್ತೆ ಡಾಂಬರೀಕರಣ ತಡೆದು ಪ್ರತಿಭಟನೆ
ಬೆಳ್ತಂಗಡಿ: ಜನರ ಬಹುಕಾಲದ ಬೇಡಿಕೆಯ ಅತ್ತಾಜೆ ರಸ್ತೆಯನ್ನು ಬಿಟ್ಟು ತಾ.ಪಂ. ಸದಸ್ಯೆಯೊಬ್ಬರ ಮನೆಗೆ ಹೋಗುವ ರಸ್ತೆಗೆ ಡಾಂಬರೀಕರಣ ಮಾಡಲು ಮುಂದಾಗಿರುವುದನ್ನು ತಡೆದ ಸ್ಥಳೀಯ ರಸ್ತೆ ಬಳಕೆದಾರರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಲ್ಲದೆ, ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದ ಘಟನೆ ಉಜಿರೆ ಗ್ರಾಮದ ಅತ್ತಾಜೆಯಲ್ಲಿ ಇತ್ತೀಚೆಗೆ ನಡೆದಿದೆ.
ಅತ್ತಾಜೆ ರಸ್ತೆಯನ್ನು ಡಾಂಬರೀಕರಣಗೊಳಿಸಬೇಕು ಎಂದು ಇಲ್ಲಿನ ನಾಗರಿಕರು ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರು. ಚುನಾವಣೆಯ ಸಂದರ್ಭದಲ್ಲೂ ಇಲ್ಲಿನ ಜನರು ಅಭ್ಯರ್ಥಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿಗಳ ಮೇಲೆ ಮನವಿಗಳನ್ನು ಸಲ್ಲಿಸುತ್ತಾ ಬರುತ್ತಿದ್ದರು. ಆ ಹಿನ್ನೆಲೆಯಲ್ಲಿ ಇಲ್ಲಿಗೆ ರು. 15 ಲಕ್ಷ ಅನುದಾನ ಮಂಜೂರುಗೊಳಿಸಲಾಗಿದೆ ಎಂಬ ಮಾಹಿತಿ ಜನರಿಗೆ ತಿಳಿದಿತ್ತು. ಈ ನಡುವೆ ಇದ್ದಕ್ಕಿದ್ದಂತೆ ಉಜಿರೆ ಕೆದ್ರೋಳಿ ರಸ್ತೆಗೆ ಡಾಂಬರೀಕರಣ ಮಾಡಲು ಶುಕ್ರವಾರ ಕಚ್ಚಾ ವಸ್ತುಗಳು ಮತ್ತು ಕೆಲಸದವರು ಬಂದಿದ್ದರು. ಇದನ್ನು ಕಂಡು ಕೆರಳಿದ ರಸ್ತೆ ಬಳಕೆದಾರರು ಕೆಲಸದವರಲ್ಲಿ ವಿಚಾರಿಸಿದಾಗ ತೃಪ್ತಿಕರವಾದ ಉತ್ತರ ಲಭಿಸಲಿಲ್ಲ. ಈ ವೇಳೆಗಾಗಲೇ ಮಹಿಳೆಯರೂ ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ಸೇರಿದ ಜನ ಪ್ರತಿಭಟನೆಗೆ ಇಳಿದರು. ನಮ್ಮ ರಸ್ತೆಯ ಕೆಲಸ ಪ್ರಾರಂಭಿಸದೆ ಈ ರಸ್ತೆಯ ಕಾಮಗಾರಿ ನಡೆಸಲು ಬಿಡೆವು ಎಂದು ಪಟ್ಟು ಹಿಡಿದರು.
ಕಾಮಗಾರಿಗೆ ಸಾಮಾನು ಹೊತ್ತು ತರುತ್ತಿದ್ದ ಅತ್ತಾಜೆ ರಸ್ತೆಯಲ್ಲಿ ಚರಂಡಿ ತೋಡಿ ಸಂಚಾರಕ್ಕೆ ಅಡ್ಡಿಪಡಿಸಲಾಯಿತು.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಗೌಡ, ಸದಸ್ಯ ಮಂಜುಳಾ ಉಮೇಶ್, ತಾ.ಪಂ. ಸದಸ್ಯೆ ವಿಮಲಾ ಭೇಟಿ ನೀಡಿದರು.
ಜನಪ್ರತಿನಿಧಿಗಳು ಮತ್ತು ತಾ.ಪಂ. ಸದಸ್ಯರ ನಡವೆ ಮಾತಿನ ಚಕಮಕಿ ನಡೆಯಿತು. ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ, ವಾದ ವಿವಾದಗಳು ನಡೆದು ನಂತರ ಮುಂದಿನ ನ. 24 ರೊಳಗೆ ರಸ್ತೆ ಕಾಮಗಾರಿ ಪ್ರಾರಂಭಿಸುವಂತೆ ಗಡುವು ನೀಡಿ, ಇಲ್ಲದಿದ್ದರೆ ಮುಂದೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

