ಅಣಬೆ ಸಂಘದಿಂದ ಮೋಸ ಆರೋಪ: ಇಂದು ಪ್ರತಿಭಟನೆ
ಸುಬ್ರಹ್ಮಣ್ಯ: ಯಾವುದೇ ದಾಖಲೆಗಳಿಲ್ಲದೆ ಸುಲಭವಾಗಿ ದೊಡ್ಡ ಪ್ರಮಾಣದಲ್ಲಿ ತ್ವರಿತವಾಗಿ ಸಾಲ ನೀಡುವುದಾಗಿ ನಂಬಿಸಿ ಸದಸ್ಯತ್ವ ಮತ್ತು ಠೇವಣಿ ರೂಪದಲ್ಲಿ ಹಣ ಪಡೆದು ವಂಚಿಸಿದ ಅಣಬೆ ಬೆಳೆಗಾರರ ಸಂಘದ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಯಲಿದೆ.
ಅಣಬೆ ಬೆಳೆಗಾರರ ಸಂಘದ ಪ್ರವರ್ತಕ ಸಂಸ್ಥಾಪಕ ಕೋಲಾರ ಮೂಲದ ವ್ಯಕ್ತಿ ಹಾಗೂ ಪಾಲುದಾರರಾದ ಸ್ಥಳೀಯರಿಬ್ಬರು ಸಾವಿರಾರು ಮಂದಿಗೆ ಟೋಪಿ ಹಾಕಿದ್ದಾರೆ ಎಂದು ಈ ಸಂಘದಲ್ಲಿ ಹಣ ತೊಡಗಿಸಿ ಮೋಸಕ್ಕೆ ಒಳಗಾದ ಸದಸ್ಯರು ಆರೋಪಿಸಿದ್ದಾರೆ. ಶುಕ್ರವಾರ ಸಂಘದ ಕಚೇರಿ ಹೊಂದಿರುವ ವಿದ್ಯಾನಗರದ ಪಾಲುದಾರರಿಬ್ಬರ ನಿವಾಸದ ಎದುರು ಮೋಸಕ್ಕೊಳಗಾದ ಜನತೆ ಪ್ರತಿಭಟನೆ ನಡೆಸಲಿದೆ ಎಂದು ಲಕ್ಷ್ಮೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿರುದ್ಯೋಗದ ಬವಣೆಯಿಂದ ತತ್ತರಿಸಿ ಹೊಟ್ಟೆಪಾಡಿಗಾಗಿ ಉದ್ಯೋಗವೊಂದರ ತಲಾಶೆಯಲ್ಲಿದ್ದ ಸುಮಾರು 25ರಷ್ಟೂ ಮಂದಿ ಯುವಕ ಯುವತಿಯರು ಉದ್ಯೋಗದ ಆಸೆಗೆ ಬಲಿಯಾಗಿ ಗ್ರಾಮೀಣ ಭಾಗದಲ್ಲೆಲ್ಲಾ ಓಡಾಡಿ ಸಂಸ್ಥೆಯ ಸಂಸ್ಥೆಯ ಧ್ಯೇಯೋದ್ದೇಶಗಳ ಬಗ್ಗೆ ಪ್ರಚಾರ ಮಾಡಿ ಬಡವರಿಂದ ಸದಸ್ಯತ್ವ ಠೇವಣಿ ಸಂಗ್ರಹಿಸಿ ಸಂಸ್ಥೆಗೆ ತುಂಬಿದ್ದಾರೆ.
ನಂತರದ ದಿನಗಳಲ್ಲಿ ಇನ್ನಷ್ಟು ಆಮಿಷ ಒಡ್ಡಿದ ಪರಿಣಾಮ ಸಾವಿರಾರು ಮಂದಿಯಿಂದ ಲಕ್ಷಾಂತರ ಮೊತ್ತದ ಹಣ ಸಂಸ್ಥೆಗೆ ತುಂಬಲಾಗಿದೆ.
ಸ್ಥಳೀಯ ಯುವಕ ಯುವತಿಯರ ಮೇಲೆ ವಿಶ್ವಾಸವಿಟ್ಟು ಸದಸ್ಯತ್ವ ಠೇವಣಿ ರೂಪದಲ್ಲಿ ಹಣ ಲಕ್ಷಾಂತರ ರೂಪಾಯಿ ಸಂಘದಲ್ಲಿ ತೊಡಗಿಸಿದವರು ಈಗ ಅನ್ಯಾಯಕ್ಕೊಳಗಾಗಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಸಾಲ ನೀಡುವುದಾಗಿ ಹೇಳಿದ್ದ ಸಂಸ್ಥೆ ನಂತರದ ದಿನಗಳಲ್ಲಿ ಅಲೆದಾಡಿಸಿ ಕೊನೆಗೆ ಸಾಲ ನೀಡಲದೆ ಮೋಸ ಮಾಡಿರುತ್ತಾರೆ.
ಬಳಿಕ ತೀವ್ರ ಒತ್ತಡ ತಂದಿದ್ದು ಅಲ್ಲದೆ ಪ್ರತಿಭಟನೆ ನಡೆಸಿ ಪೊಲೀಸ್ ದೂರು ನೀಡಿದ್ದರಿಂದ ಪೊಲೀಸರ ಸಮಕ್ಷಮ ಸದಸ್ಯತ್ವ, ಠೇವಣಿ ಹಣ ನೀಡುವುದಾಗಿ ಒಪ್ಪಕೊಂಡ ಸ್ಥಳೀಯ ಪಾಲುದಾರರು ಮತ್ತೆ ಮೋಸ ಮಾಡಿದ್ದಾರೆ ಎಂದರು. ಅಂದು ಆಸೆ ಆಮಿಷ ಒಡ್ಡಿ ಹಣ ತೊಡಗಿಸಲು ಪ್ರೇರೆಪಿಸಿದ ಇಬ್ಬರು ಸ್ಥಳೀಯ ಪಾಲುದಾರರು ಇದೀಗ, 'ನಮಗೂ ಹಣಕಾಸಿನ ವಿಷಯಕ್ಕೂ ಸಂಬಂಧವೇ ಇಲ್ಲ' ಎನ್ನುತ್ತಾರೆ. ಅಲ್ಲದೆ ಉದ್ಘಟತನದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಉದ್ಯೋಗ ಭರವಸೆ: ಉದ್ಯೋಗ ಆಸೆಯಿಂದ ಈ ಮೂರು ಮಂದಿಯ ಮಾತು ನಂಬಿದ ಸುಮಾರು 25ಕ್ಕೂ ಮಂದಿ ಯುವ ಯುವತಿಯರಿಂದ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಸಾವಿರಾರು ಮೊತ್ತದ ಲಂಚ ರೂಪದಲ್ಲಿ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

