6.5 ಕೋಟಿ ಜನರಿಗೂ ಆರೋಗ್ಯ ವಿಮೆ ಯೋಜನೆ
ಮಂಗಳೂರು: ಕ್ಯಾನ್ಸರ್, ಹೃದಯಶಸ್ತ್ರ ಚಿಕಿತ್ಸೆ ಸಹಿತ ಗಂಭೀರ ಕಾಯಿಲೆ ಬಂದರೆ ಎಪಿಎಲ್ ಕಾರ್ಡ್ನವರಿಗೆ ಶೇ.90 ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಲಿದೆ. ರಾಜ್ಯದ ಎಲ್ಲ ಪ್ರಜೆಗಳಿಗೂ ಆರೋಗ್ಯ ವಿಮಾ ಯೋಜನೆ ಅನ್ವಯವಾಗಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
4 ಕೋಟಿ ಜನ ಇರುವ ಬಿಪಿಎಲ್ ಕಾರ್ಡ್ದಾರರಿಗೆ ಈಗಾಗಲೇ ಉಚಿತ ಚಿಕಿತ್ಸೆ ಲಭ್ಯ ಇದೆ. 85 ಲಕ್ಷ ಮಂದಿ ಸರ್ಕಾರಿ ನೌಕರರಿಗೂ ಉಚಿತ ಚಿಕಿತ್ಸೆ ಸೌಲಭ್ಯ ಇದೆ. ಇನ್ನು ಕೆಲವರಿಗೆ ಯಶಸ್ವಿನಿ ವಿಮಾ ಸೌಲಭ್ಯ ಇದೆ. ಆದ್ದರಿಂದ ಬಾಕಿ ಉಳಿಯುವ ಜನರ ಸಂಖ್ಯೆ ಕಡಿಮೆಯೇ. ಆದ್ದರಿಂದ ಸಾಧಕ, ಬಾಧಕ ಆಲೋಚನೆ ಮಾಡಿಯೇ ರಾಜೀವ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸಹಯೋಗ ಪಡೆಯಲಾಗಿದೆ. ಗಡಿ ಭಾಗದವರಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸೌಲಭ್ಯ ಇರುವ ಹೈದರಬಾದ್, ಸೋಲಾಪುರ ಆಸ್ಪತ್ರೆಗಳಲ್ಲಿಯೂ ಸಹಯೋಗ ಮಾಡಲಾಗಿದೆ. ಜಿಲ್ಲೆಯಲ್ಲಿ 9 ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಸಹಯೋಗದಲ್ಲಿ ವಿಮಾ ಯೋಜನೆ ಜಾರಿಗೆ ಬರಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವಿಮಾ ಯೋಜನೆಯಡಿ ಉಚಿತ ಚಿಕಿತ್ಸೆ ಸೌಲಭ್ಯ ನೀಡಲಾಗುವುದು. ವೈದ್ಯರು ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿದರೆ ಇನ್ಸೆಟಿವ್ ನೀಡುವ ಪದ್ಧತಿ ಆರಂಭಿಸಲಾಗುವುದು. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಶಸ್ತ್ರ ಚಿಕಿತ್ಸೆ ನಡೆದು, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ನೀಡುವ ಚಿಕಿತ್ಸ ವೆಚ್ಚ ಕಡಿಮೆಯಾಗಲಿದೆ. ವಿಶೇಷ ವಾರ್ಡ್, ಎಸಿ ರೂಮ್ ಇತ್ಯಾದಿ ವೆಚ್ಚವನ್ನು ರೋಗಿಯೇ ಭರಿಸಬೇಕಾಗುತ್ತದೆ. ಸಾಮಾನ್ಯ ವಾರ್ಡ್ನಲ್ಲಿರುವ ವೆಚ್ಚವನ್ನು ಮಾತ್ರ ಸರ್ಕಾರ ಪಾವತಿಸಲಿದೆ. ಈ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದೆ.
ಎಪಿಲ್ ಕಾಡ್ ರ್ಹೊಂದಿರುವವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಅಂದಾಜು 2 ಲಕ್ಷ ಖರ್ಚಾಗುವಂತಿದ್ದರೆ ಶೇ.10 ಅಂದರೆ 20 ಸಾವಿರ ರೋಗಿ ಪಾವತಿಸಬೇಕು. ಉಳಿದ ಹಣವನ್ನು ಖಾಸಗಿ ಆಸ್ಪತ್ರೆಗೆ ಸರ್ಕಾರವೇ ಪಾವತಿಸಲಿದೆ. ಎಲ್ಲವೂ ಕ್ಯಾಶ್ ಲೆಸ್ ಕಾರ್ಡ್ ಯೋಜನೆಯಾಗಿ ಕಾರ್ಯಗತಗೊಳ್ಳಲಿದೆ ಎಂದರು.
ದೇಶದಲ್ಲೇ ಮೊದಲು: ಎಲ್ಲರಿಗೂ ಆರೋಗ್ಯ ವಿಮೆ ನೀಡುವಂತೆ ವಿಶ್ವಸಂಸ್ಥೆ ಹೇಳಿದೆ. ಆದರೆ ಕರ್ನಾಟಕ ಸರ್ಕಾರ ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ಕರ್ನಾಟಕದ ಪ್ರಜೆಗಳಿಗೆ ಸಾಮೂಹಿಕವಾಗಿ ಆರೋಗ್ಯ ವಿಮೆ ಜಾರಿಗೆ ತಂದು ದಾಖಲೆ ಮಾಡಿದೆ. ರಾಷ್ಟ್ರೀಯ ಆರೋಗ್ಯ ಮಿಶನ್ ನಮ್ಮ ಯೋಜನೆಯನ್ನು ಶ್ಲಾಘಿಸಿದೆ. ಈ ಯೋಜನೆ ಇಡಿ ದೇಶದಲ್ಲಿಯೇ ಅಳವಡಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಬೇರೆ ರಾಜ್ಯದಿಂದ ಬಂದು ಕೂಲಿ ಕೆಲಸ ಮಾಡುವವರ ಬಳಿ ಯಾವುದೇ ಕಾರ್ಡ್ ಇರುವುದಿಲ್ಲ, ಅಂಥವರಿಗೂ ಈ ಯೋಜನೆ ಪ್ರಯೋಜನ ಒದಗಿಸಲಾಗುವುದು.
ಅಪಘಾತ ವಿಮೆ: ಅಪಘಾತದಲ್ಲಿ ಗಾಯಗೊಂಡವರಿಗೆ ವಿಮೆ ಹಣ ಸಿಗುವಾಗ ಅನೇಕ ವರ್ಷಗಳೇ ಕಳೆದಿರುತ್ತದೆ. ಬದುಕು ಕಷ್ಟವಾಗಿರುವಾಗ ಹಣ ಒಟ್ಟು ಮಾಡುವುದು ಕಷ್ಟ. ಇಂಥ ಸಂದರ್ಭ ಹಣ ಒಟ್ಟು ಮಾಡುವ ಅವಲಂಬಿತರ ಕಷ್ಟ ನೋಡಲು ಅಸಾಧ್ಯ. ಅಪಘಾತ ಚಿಕಿತ್ಸೆಗೆ ತಕ್ಷಣ ಸರ್ಕಾರವೇ ಹಣ ಭರಿಸುವ ಕ್ಯಾಶ್ಲೆಸ್ ವಿಮಾ ಯೋಜನೆ ಜಾರಿಗೆ ತರುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು.
ಶೇ.100 ಸಾಧನೆ: 7 ತಿಂಗಳ ಅವಧಿಯಲ್ಲಿ ಆರೋಗ್ಯ ಇಲಾಖೆ ಶೇ.100 ಸಾಧನೆ ಮಾಡಿದೆ ಎಂದು ಸಾಧನೆ ಪಟ್ಟಿಯನ್ನು ನೀಡಿದರು.
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಅಲ್ಲ ನನ್ನ ಇಲಾಖೆಯಲ್ಲಿ ನೂರಕ್ಕೆ ನೂರು ಸಾಧನೆ ಎಂದು ಆರೋಗ್ಯ ಸಚಿವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪುಷ್ಟಿ ಬಿಸ್ಕತ್: ಬಾಗಲಕೋಟೆಯಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ಉತ್ತಮ ಗೊಳಿಸಲು ಆಯುರ್ವೇದದ ಪುಷ್ಟಿ ಬಿಸ್ಕತ್ ನೀಡಲಾಗುವುದು. ಅಪೌಷ್ಟಿಕತೆ ಪ್ರಮಾಣ ನೋಡಿ ಮಕ್ಕಳಿಗೆ 1, 2, 3 ಅಥವಾ ನಾಲ್ಕು ಬಿಸ್ಕತ್ ನೀಡಲು ಸೂಚಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

