ಗೋಶಾಲೆಗಳ ರು. 22 ಕೋಟಿ ಅನುದಾನ ವಾಪಸ್; ಪುರಾಣಿಕ್
ಮಂಗಳೂರು: ಇಲ್ಲಿ ಪಾಠ ಮಾಡಲು ಅಧ್ಯಾಪಕರಿಲ್ಲ, ಸಮಯ ಆಯಿತೆಂದು ಗಂಟೆ ಬಾರಿಸುವುದಿಲ್ಲ. ಆದರೂ ಇದು ಶಾಲೆ. ಇಲ್ಲಿ ಕೇವಲ ಅಂಬಾ ಎನ್ನುವ ಧ್ವನಿ ಮಾತ್ರ ಕೇಳುತ್ತದೆ. ಇದುವೇ ಮಂಗಳೂರು ಫಜೀರು ಗ್ರಾಮದ ಬೀಜದಗುರಿಯಲ್ಲಿರುವ ಗೋವನಿತಾಶ್ರಯ ಶಾಲೆ.
ಇಲ್ಲಿ ಸುಮಾರು 200ಕ್ಕಿಂತಲೂ ಅಧಿಕ ಹಸು, ಕರು, ಎತ್ತುಗಳಿವೆ. ಸುಂದರ ಹಚ್ಚ ಪ್ರದೇಶದಲ್ಲಿ ಹುಲ್ಲು ಮೇಯುತ್ತಾ ಸ್ವಚ್ಛಂದವಾಗಿವೆ.
ಇದು ಕೇವಲ ಗೋ ಶಾಲೆ ಮಾತ್ರವಾಗಿರದೆ ಇಲ್ಲಿನ ಗೋ ಉತ್ಪನ್ನಗಳಿಂದ ಆಯುರ್ವೇದಿಕ್ ಔಷಧಿಗಳನ್ನು ತಯಾರಿಸಿ, ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಲಿನಿಂದ ಸೌಂದರ್ಯವರ್ಧಕಗಳಾದ ಪೌಡರ್, ಕ್ರೀಮ್ಗಳನ್ನು ತಯಾರಿಸಲಾಗುತ್ತಿದೆ. ಗೊಬ್ಬರ, ತೆಂಗಿನ ಸಸಿಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ.
ಭಾನುವಾರ ಗೋ ಪ್ರೇಮಿ ಟ್ರಸ್ಟ್ ವತಿಯಿಂದ ಗೋಶಾಲೆಯಲ್ಲಿ ಗೋಪೂಜೆ ಹಾಗೂ ಎಸ್ಡಿಎಂ ಮತ್ತು ಶಾರದಾ ವಿದ್ಯಾಲಯದ ಮಕ್ಕಳಿಂದ ಶ್ರಮದಾನ, ವೀಕ್ಷಣೆ, ಮಾಹಿತಿ ಸಂಗ್ರಹಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸಹಉಪನ್ಯಾಸಕಿ ಪ್ರೊ. ಸುಭಾಷಿಣಿ ಶ್ರೀವತ್ಸ, ಮನುಷ್ಯ ಮತ್ತು ಗೋವುಗಳ ಮಧ್ಯೆ ಅವಿನಾಭಾವ ಸಂಬಂಧವಿದ್ದು, ಇದಕ್ಕಾಗಿಯೇ ಗೃಹಪ್ರವೇಶದ ಸಂದರ್ಭ ಮನೆಯೊಳಗೆ ಹಸು ಮತ್ತು ಕರುವನ್ನು ಕರೆದುಕೊಳ್ಳುವುದು. ಭೂಮಾತೆಯ ಸ್ವರೂಪವಾಗಿರುವ ಗೋಮಾತೆಯಲ್ಲಿ 33 ಕೋಟಿ ದೇವರುಗಳಿದ್ದು, ಗೋ ಪೂಜೆ ಮಾಡಿದಾಗ ಸಮೃದ್ಧಿ, ಐಶ್ವರ್ಯ, ಶಾಂತಿ ನೆಲೆಸುತ್ತದೆ ಎಂದರು.
ಗೋವನಿತಾಶ್ರಯ ಟ್ರಸ್ಟ್ ಅಧ್ಯಕ್ಷ ಎಂ.ಬಿ. ಪುರಾಣಿಕ್ ಮಾತನಾಡಿ, ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, 20 ವರ್ಷಗಳ ನಂತರದ ಗೋವುಗಳನ್ನು ಚಿತ್ರದಲ್ಲಿ ಮಕ್ಕಳಿಗೆ ತೋರಿಸುವ ಪರಿಸ್ಥಿತಿ ಉಂಟಾಗಬಹುದು. ಗೋಸಂರಕ್ಷಣೆ ಕೇವಲ ಶ್ರೀ ರಾಮ ಸೇನೆ, ಬಜರಂಗದಳ ಸಂಘಟನೆಗೆ ಮಾತ್ರ ಸೇರಿದ್ದಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗಳು ಜನ್ಮಸಿದ್ಧ ಹಕ್ಕೆಂದು ಭಾವಿಸಿ ರಕ್ಷಿಸಬೇಕಾಗಿದೆ ಎಂದು ಹೇಳಿದರು.
ರಾಜ್ಯದ ಗೋಶಾಲೆ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ರು. 22 ಕೋಟಿ ನೀಡಿದ್ದು, ಇದನ್ನು ಇಂದಿನ ಸರ್ಕಾರ ಹಿಂಪಡೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋ ಭಕ್ಷಣೆ ಮಾಡುವವರ ಪರವಾಗಿ ಇದ್ದು, ರಕ್ಷಣೆ ಮಾಡುವವರ ಜತೆ ಇಲ್ಲ ಎಂದರು.
ಗೋ ಪ್ರೇಮಿ ವೇದಿಕೆ ಪ್ರಧಾನ ಸಂಚಾಲಕ ರಾಮಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ರತ್ನಾಕರ್ ಕುಳಾಯಿ ಪಾಲ್ಗೊಂಡಿದ್ದರು.
ಗೋವನಿತಾಶ್ರಯ ಟ್ರಸ್ಟಿಗಳಾದ ಅನಂತಕೃಷ್ಣ ಭಟ್ ಸ್ವಾಗತಿಸಿ, ಮನೋಹರ ತುಳಜರಾಮ್ ವಂದಿಸಿದರು.
ಕೀನ್ಯಾ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹ
ಎಸ್ಡಿಎಂ ಕಾಲೇಜಿನ ಕಾನೂನು ವಿಭಾಗದ ಕೀನ್ಯಾ ದೇಶದ ವಿದ್ಯಾರ್ಥಿಗಳು ಗೋವನಿತಾಶ್ರಯಕ್ಕೆ ಆಗಮಿಸಿದ್ದು, ಗೋವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಹಾಗೂ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳು ಜತೆಯಾಗಿ ಆಶ್ರಯದ ಸುತ್ತಮುತ್ತಲಿನ ಗಿಡಗಂಟಿ ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

