ದಕ್ಷಿಣ ಕನ್ನಡ

23ರಂದು ಹೊನಲು ಬೆಳಕಿನ 'ಕಲ್ಲಡ್ಕ ಕ್ರೀಡೋತ್ಸವ'

Published On :

ಬಂಟ್ವಾಳ: ಸೌಹಾರ್ದ ಕ್ರಿಕೆಟರ್ಸ್ ಕಲ್ಲಡ್ಕ ಆಶ್ರಯದಲ್ಲಿ ಒಂದೇ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ನಾಲ್ಕು ಪಂದ್ಯಗಳು, ಸನ್ಮಾನ ಸಮಾರಂಭ ಹಾಗೂ ಸಂಗೀತ ರಸಮಂಜರಿಯನ್ನೊಳಗೊಂಡ 'ಕಲ್ಲಡ್ಕ ಕ್ರೀಡೋತ್ಸವ-2013' ಕಾರ್ಯಕ್ರಮ ನ.23ರಂದು ಸಂಜೆ 7 ಗಂಟೆಗೆ ಕಲ್ಲಡ್ಕ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಲಿದೆ ಎಂದು ಸೌಹಾರ್ದ ಕ್ರಿಕೆಟರ್ಸ್ ಅಧ್ಯಕ್ಷ ನಝೀರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡೋತ್ಸವದಲ್ಲಿ ಪುರುಷರ ಮುಕ್ತ ವಿಭಾಗದ ಕಬಡ್ಡಿ, ಸೂಪರ್ ಸಿಕ್ಸ್ 7 ಜನರ ಕ್ರಿಕೆಟ್, ಹಗ್ಗಜಗ್ಗಾಟ, ಡಬಲ್ಸ್ ಹಾಗೂ ಸಿಂಗಲ್ಸ್ ಕೇರಂ ಪಂದ್ಯಾವಳಿ ಮತ್ತು ನೌಶಾದ್ ಬಳಗ ಮಂಗಳೂರು ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಉದ್ಯಮಿಗಳಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜಿತೇಂದ್ರ ಎಸ್. ಕೊಟ್ಟಾರಿ, ಮಾಜಿ ಶಾಸಕ ಎ. ರುಕ್ಮಯ್ಯ ಪೂಜಾರಿ, ಕೆಪಿಸಿಸಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿ.ಪಂ. ಸದಸ್ಯ ಚೆನ್ನಪ್ಪ ಕೋಟ್ಯಾನ್, ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಬಂಟ್ವಾಳ ವಕೀಲರ ಸಂಘ ಅಧ್ಯಕ್ಷ ಸುರೇಶ್ ಪೂಜಾರಿ ಭಾಗವಹಿಸಲಿದ್ದಾರೆ.ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ರಮೇಶ್ ಕಲ್ಲಡ್ಕ, ಗೋಳ್ತಮಜಲು ಕ್ಷೇತ್ರ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ವಿಟ್ಲ ಆರಕ್ಷಕ ಉಪನಿರೀಕ್ಷಕ ಮಾಧವ ಕೂಡ್ಲು, ಹಗ್ಗಜಗ್ಗಾಟ ಕ್ರೀಡೆಯ ಹಿರಿಯ ಕ್ರೀಡಾಳು ಸ್ಟ್ಯಾನಿ ಡಿಕುನ್ಹಾ, ರಾಷ್ಟ್ರೀಯ ಕಬಡ್ಡಿ ಆಟಗಾರ ಮಹಮ್ಮದ್ ಶಬೀರ್ ಅವರನ್ನು ಸನ್ಮಾನಿಸಲಾಗುವುದು ಎಂದು ನಝೀರ್ ತಿಳಿಸಿದರು.
ಸೌಹಾರ್ದ ಕ್ರಿಕೆಟರ್ಸ್ ಪದಾಧಿಕಾರಿಗಳಾದ ಪ್ರವೀಣ್, ತೌಫೀಕ್, ಮುಜೀಬ್ ಕಲ್ಲಡ್ಕ, ಮುಜೀಬ್ ಬಲ್ಲೆಕೋಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.