ಡಿ. 4ರಂದು ರಾಸಾಯನಿಕ ದುರಂತ ನಿವಾರಣಾ ದಿನ
ಮಂಗಳೂರು: ಭೋಪಾಲ್ ಅನಿಲ ದುರಂತದ ಸ್ಮರಣಾರ್ಥ ನಡೆಸಲಾಗುವ ರಾಸಾಯನಿಕ ದುರಂತ ನಿವಾರಣಾ ದಿನಾಚರಣೆ ಪ್ರಯುಕ್ತ ಡಿ. 4 ರಂದು ಸುರತ್ಕಲ್ ಎಚ್.ಪಿ.ಸಿ.ಎಲ್ ಘಟಕದಲ್ಲಿ ಆಫ್ಸೈಟ್ ಎಮರ್ಜೆನ್ಸಿ ಅಣುಕು ಪ್ರದರ್ಶನ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ದಯಾನಂದ್ ಹೇಳಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಡಳಿತ ಮತ್ತು ಎಚ್.ಪಿ.ಸಿ.ಎಲ್. ಸಹಯೋಗದೊಂದಿಗೆ ಪ್ರದರ್ಶನ ನಡೆಯಲಿದ್ದು, ಈ ಕುರಿತು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ಹಾಗೂ ಇತರೆ ಕೈಗಾರಿಕಾ ಘಟಕಗಳು ಈ ನಿಟ್ಟಿನಲ್ಲಿ ಕೈ ಜೋಡಿಸುವಂತೆ ಸೂಚಿಸಿದರು. ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ ಉಪ ನಿರ್ದೇಶಕ ನಂಜಪ್ಪ, ಎಂ.ಆರ್.ಪಿ.ಎಲ್, ಎಚ್.ಪಿ.ಸಿ.ಎಲ್ ಕೈಗಾರಿಕೆಗಳ ಅಧಿಕಾರಿಗಳು ಇದ್ದರು.
ಸೌಜನ್ಯಾ ಕುಟುಂಬಕ್ಕೆ ಕಬೀರ ಮಹಾಸ್ವಾಮಿ ಸಾಂತ್ವನ
ಬೆಳ್ತಂಗಡಿ: ಗುಲ್ಬರ್ಗ ಶ್ರೀ ಮರುಳ ಶಂಕರ ದೇವರ ಗುರಪೀಠದ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿ ಅವರು ಬುಧವಾರ ಧರ್ಮಸ್ಥಳದ ಮೃತ ಸೌಜನ್ಯಾಳ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸೌಜನ್ಯಾಳ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನ್ಯಾಯ ಕೇಳಿ ನಡೆಯುತ್ತಿರುವ ಹೋರಾಟಗಳಿಗೆ ಎಲ್ಲ ರೀತಿಯ ಬೆಂಬಲವನ್ನು ನೀಡುವುದಾಗಿ ಪ್ರಕಟಿಸಿದ ಅವರು ಗುರುವಾರದಿಂದ ಆರಂಭಗೊಳ್ಳಲಿರುವ ಕಾಲ್ನಡಿಗೆ ಜಾಥಾ ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಯಲಿದೆ. ಇಂತಹ ಪ್ರಕರಣಗಳು ಇನ್ನು ಮರುಕಳಿಸದಂತೆ ನೋಡಿಕೊಳ್ಳಬೇಕಾದ್ದು ಜನರ ಜವಾಬ್ದಾರಿಯಾಗಿದೆ. ಜಾಥಾ ಹಾಗೂ ಹೋರಾಟಗಳಿಗೆ ಪಕ್ಷ, ಜಾತಿಭೇದ ಮರೆತು ಎಲ್ಲರೂ ಬೆಂಬಲ ನೀಡುವಂತೆ ಕೋರಿದರು. ಸಿಪಿಎಂ ಪಕ್ಷದ ಮುಖಂಡರಾದ ಬಿ.ಎಂ. ಭಟ್, ಶಿವಕುಮಾರ್, ಹರಿದಾಸ್, ಶೇಖರ ಇದ್ದರು.
ಲಾರಿ ಹರಿದು ಬೈಕ್ ಸಾವರ ಸ್ಥಳದಲ್ಲೇ ಸಾವು
ಪಡುಬಿದ್ರಿ: ಇಲ್ಲಿನ ರಾಹೆ 66 ತೆಂಕ ಎಂಬಲ್ಲಿ ಲಾರಿಯೊಂದು ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ. ತೆಂಕ ಎರ್ಮಾಳಿನ ಯುಪಿಸಿಎಲ್ ಪೈಪ್ ಲೈನ್ ಸಮೀಪದ ವಾಸಿ ಪದ್ಮನಾಭ ಆಚಾರ್ಯ (58) ಮೃತರು.
ಇಲ್ಲಿನ ರಾಹೆ ಸಂಪೂರ್ಣ ಹದಗೆಟ್ಟಿದ್ದು ದ್ವಿಚಕ್ರ ವಾಹನ ಸವಾರರರು ಹೊಂಡ ತಪ್ಪಿಸಲು ಹೋಗಿ ಮಗುಚಿ ಬಿದ್ದ ಅನೇಕ ಘಟನೆಗಳು ನಡೆದಿವೆ. ಪದ್ಮನಾಭ ಆಚಾರ್ಯರು ಕೂಡ ಹೊಂಡ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದು ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಅವರ ಮೇಲೆ ಹರಿದು ಈ ಘಟನೆ ಸಂಭವಿಸಿದೆ. ಮರದ ಕೆಲಸ ಮಾಡಿಕೊಂಡಿದ್ದ ಪದ್ಮನಾಭ ಆಚಾರ್ಯ ಬುಧವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಿತ್ತಿದ್ದಾಗ, ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿ ಈ ಅಪಘಾತ ನಡೆದಿದೆ. ಈ ಘಟನೆಯಿಂದ ರಾಹೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಯಿತು. ಪಡುಬಿದ್ರಿ ಠಾಣಧಿಕಾರಿ ಅಜ್ಮತ್ ಆಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

