ಅತ್ಯಾಚಾರ ಯತ್ನ ಆರೋಪ: ಅಮಾಯಕ ಯುವಕಗೆ ಹಲ್ಲೆ
ಉಪ್ಪಿನಂಗಡಿ: ಅತ್ಯಾಚಾರಕ್ಕೆ ಯತ್ನ ಸಂಬಂಧಿಸಿ ಆರೋಪಿಯನ್ನು ಹಿಡಿಯುವ ಭರದಲ್ಲಿ ಅಮಾಯಕ ದಲಿತ ಯುವಕನಿಗೆ ಜಾತಿ ನಿಂದನೆಗೈದು ಹಲ್ಲೆ ನಡೆಸಿದ ಪ್ರಕರಣ ಕಡಬ ಠಾಣೆಯಲ್ಲಿ ಗುರುವಾರ ತಡರಾತ್ರಿ ದಾಖಲಾಗಿದೆ.
ಕೋಡಿಂಬಾಳ ಗ್ರಾಮದ ಕೋಡಂದೂರಿನ ಯುವತಿಯೊಬ್ಬಳು ಕಡಬ ಪೇಟೆಗೆ ಬಂದು ಮನೆಗೆ ಹಿಂತಿರುಗುವಾಗ ಕೋಡಂದೂರು ಬಳಿ ದಾರಿಯಲ್ಲ ಅಪರಿಚಿತನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ, ಪರಾರಿಯಾಗಿರುವುದಾಗಿ ಯುವತಿ ಕಡಬ ಪೊಲೀಸರಿಗೆ ದೂರು ನೀಡಿದ್ದಳು. ಮುಸ್ಲಿಮ್ ಯುವತಿ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ಸುದ್ದಿ ಹಬ್ಬುತ್ತಿಂತೆ ಕೆಲವು ಯುವಕರು ಸೇರಿ, ಆಕೆ ಆರೋಪಿಸಿದ ವ್ಯಕ್ತಿಯ ಚಹರೆಯನ್ನು ತೊಟ್ಟ ಬಟ್ಟೆ ಬರೆಯನ್ನು ಕೇಳಿ ತಿಳಿದುಕೊಂಡರು. ಬಳಿಕ ತಾವೇ ಪತ್ತೆ ಕಾರ್ಯಕ್ಕೆ ಮುಂದಾದರು. ಯುವತಿ ಹೇಳಿದ ಚಹರೆಯ ವ್ಯಕ್ತಿ ಹಾಗೂ ಧರಿಸಿದ ಬಟ್ಟೆ ಬರೆಯ ನೆಲೆಯಲ್ಲಿ ಕಡಬ ಪೇಟೆಯಲ್ಲಿರುವ ದೇವಸ್ಥಾನದ ಬಳಿ ವ್ಯಕ್ತಿಯೋರ್ವನನ್ನು ಕಂಡು, ಕೂಲಂಕಷ ವಿಚಾರಣೆ ಮಾಡುವ ಬದಲು ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಿದೆ. ಬಳಿಕ ಯುವತಿಯ ಬಳಿಗೆ ಕರೆ ತಂದಾಗ ಯುವತಿ ಅವನಲ್ಲ ಎಂದು ತಿಳಿಸಿದ್ದಾಳೆ. ಹಲ್ಲೆಗೀಡಾದ ಅಮಾಯಕ ಬಂಟ್ರ ಗ್ರಾಮದ ನೀರಾಜೆ ನಿವಾಸಿ ಮಾದವ (20) ಎಂಬ ದಲಿತ ಯುವಕನಾಗಿದ್ದ. ದಲಿತ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣವನ್ನು ದಾಖಲಿಸುವಂತೆ ಕೋರಿ ಯುವಕ ದೂರು ಸಲ್ಲಿಸಿದ. ಎಂಟು ಜನರ ವಿರುದ್ಧ ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣ ದಾಖಲಾಯಿತು. ಈ ಮಧ್ಯೆ ಪ್ರಕರಣದ ಕುರಿತು ದಲಿತ ಸಂಘಟನೆಯ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಡಿಎಸ್ಪಿ ಎಚ್.ಡಿ. ಮೆಂಡೋನ್ಸಾ, ಉಪ್ಪಿನಂಗಡಿ ವೃತ್ತ ನಿರೀಕ್ಷಕ ಸುರೇಶ್ ಕಡಬಕ್ಕೆ ಆಗಮಿಸಿ ಸ್ಥಳ ತನಿಖೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

