ವಳಲಂಬೆ ದೇವಸ್ಥಾನದಲ್ಲಿ ಬತ್ತ ಕಟಾವು
ಸುಬ್ರಹ್ಮಣ್ಯ: ಗುತ್ತಿಗಾರು ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಬೆಳೆಸಲಾಗಿದ್ದ ಬತ್ತವನ್ನು ಇತ್ತೀಚೆಗೆ ಶ್ರಮದಾನದ ಮೂಲಕ ಕಟಾವು ಮಾಡಲಾಯಿತು. ದೇವಸ್ಥಾನ ಎದುರಿನ ಖಾಲಿ ಜಾಗದಲ್ಲಿ ಬತ್ತ ಬೇಸಾಯವನ್ನು ಕಳೆದ ಎರಡು ವರ್ಷಗಳಿಂದ ನಡೆಸಲಾಗುತ್ತಿದೆ. ಈ ವರ್ಷ ಕೂಡ ನಾಟಿ ಕಾರ್ಯ ಮಾಡಲಾಗಿತ್ತು. ಇದೀಗ ಪೈರು ಬೆಳೆದು ಕಟಾವಿಗೆ ಬಂದಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ನವೋದಯ ಸ್ವಸಹಾಯ ಗುಂಪಿನ ಸದಸ್ಯರು ಮತ್ತು ಸ್ಥಳೀಯರು ಶ್ರಮದಾನದ ಮೂಲಕ ಕಟಾವು ನಡೆಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ, ಸದಸ್ಯ ಡಿ.ಎಂ. ರಾಮಣ್ಣ ಗೌಡ, ಮಹೇಶ್ ಪುಚ್ಚಪ್ಪಾಡಿ, ಪದ್ಮನಾಭ ದಂಬೆಕೋಡಿ, ಲಿಂಗಪ್ಪ ನಾಯ್ಕ್, ಕಲಾವತಿ ಮೊಟ್ಟೆ, ರಾಧಾಕೃಷ್ಣ ಮಾವಿನಕಟ್ಟೆ, ಗ್ರಾಪಂ ಸದಸ್ಯ ಲೋಕೇಶ್ ಡಿ.ಆರ್. ಸ್ಥಳೀಯರಾದ ಸರೋಜಿನಿ ಗಂಗಯ್ಯ ಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

