ದಕ್ಷಿಣ ಕನ್ನಡ

ಕಟೀಲು ದೇವಿಗೆ ಶಿಲ್ಪಾ ವಿಶೇಷ ಪೂಜೆ

Published On :

ಮಂಗಳೂರು: ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಊರಿಗೆ ಬಂದರೆ ಕಟೀಲಿಗೆ ಬಂದು ದೇವಿಗೆ ಪೂಜೆ ಮಾಡಿಯೇ ಹೋಗುತ್ತಾರೆ. ಶಿಲ್ಪಾ ಶೆಟ್ಟಿ ಭಾನುವಾರ ಮಧ್ಯಾಹ್ನ ತಂದೆ ಸುರೇಂದ್ರ ಶೆಟ್ಟಿ ಜತೆ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಅರ್ಚಕ ಅನಂತ ಆಸ್ರಣ್ಣ ದೇವಿ ಪ್ರಸಾದವಾಗಿ ರೇಷ್ಮೆ ಸೇರಿ ನೀಡಿದರು.
ದೇವರ ದರ್ಶನ ಬಳಿಕ ಮಾತನಾಡಿದ ಶಿಲ್ಪಾ ಶೆಟ್ಟಿ, ತನ್ನ ಯಶಸ್ಸಿಗೆ ದುರ್ಗಾಪರಮೇಶ್ವರಿ ಕಾರಣವಾಗಿದ್ದು, ಇದಕ್ಕೆ ಧನ್ಯವಾದ ಅರ್ಪಿಸಲು ದೇವರ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸಿದರು. ಪತಿ ರಾಜ್ ಕುಂದ್ರಾ ಮತ್ತು ಮಗು ಮಂಗಳೂರಿಗೆ ಬಂದಿದ್ದರೂ ಮಾಧ್ಯಮದಿಂದ ದೂರ ಉಳಿದರು.
ಕಟೀಲು ಸಮೀಪದ ಮುದಲಾಡಿಗುತ್ತು ಮನೆತನದ ಶಿಲ್ಪಾ ಶೆಟ್ಟಿ ಬಿಗ್‌ಬ್ರದರ್ ಮೂಲಕ ವಿಶ್ವವಿಖ್ಯಾತರಾಗಿದ್ದರು. ಪ್ರತಿ ಬಾರಿಯೂ ಮಂಗಳೂರಿಗೆ ಬಂದಾಗ ಮಾತೃಭಾಷೆ ತುಳುವಿನಲ್ಲಿಯೇ ಮಾತನಾಡಿ ಇಲ್ಲಿನ ಜನರ ಮನಗೆಲ್ಲುವುದು ವಿಶೇಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.