ಡಿ.14ರಿಂದ ಕದ್ರಿಯಲ್ಲಿ 'ಕುಡ್ಲ ಕಲಾಮೇಳ'
ಮಂಗಳೂರು: ಕರಾವಳಿ ಚಿತ್ರಕಲಾ ಚಾವಡಿ ವತಿಯಿಂದ ಕುಡ್ಲ ಕಲಾಮೇಳ ಡಿ.14 ಮತ್ತು 15ರಂದು ನಗರದ ಕದ್ರಿ ಪಾರ್ಕ್ ವಠಾರದಲ್ಲಿ ಏರ್ಪಡಲಿದೆ. ಈ ಕುರಿತ ಮಹಿತಿ ಕೈಪಿಡಿಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ವಿಭಾಗೀಯ ಮಾರಾಟ ವ್ಯವಸ್ಥಾಪಕ ವಿ.ಆರ್.ಮೆನನ್ ಇತ್ತೀಚೆಗೆ ನಗರದ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾವಡಿ ಅಧ್ಯಕ್ಷ ವಿಷ್ಣು ಶೇವಗೂರ್, ಕದ್ರಿ ಪಾರ್ಕ್ ವಠಾರದಲ್ಲಿ 200 ಕಲಾಮಳಿಗೆಗಳನ್ನು ನಿರ್ಮಿಸಿ 10 ಸಾವಿರಕ್ಕೂ ಅಧಿಕ ಕಲಾಕೃತಿ ಪ್ರದರ್ಶಿಸಲಾಗುವುದು. ಈ ಹಿಂದೆ ಮೂರು ಬಾರಿ ಇಂಥ ಕಲಾಮೇಳ ಆಯೋಜಿಸಲಾಗಿತ್ತು. ಸಾಮಾಜಿಕವಾಗಿ ಕಲಾಜಾಗೃತಿ ಮೂಡಿಸುವುದು, ಕಲೆ, ಕಲಾಕೃತಿಗಳನ್ನು ಜನಸಾಮಾನ್ಯರಿಗೆ ತಲಪಿಸುವುದು, ಹಿರಿಯ ಕಿರಿಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದು. ಪ್ರತಿಭಾವಂತ ಕಲಾವಿದರನ್ನು ಗುರುತಿಸುವುದು. ಮನೆ ಮನೆಗಳಲ್ಲಿ ಕಲಾಕೃತಿ ನೆಲೆಗೊಳ್ಳುವಂತಾಗಲು ಕೈಗೆಟಕುವ ದರದಲ್ಲಿ ಕಲಾಕೃತಿ ಲಭ್ಯವಾಗುವಂತೆ ನೋಡಿಕೊಳ್ಳುವುದು. ಕಲಾವಿದ ತನ್ನ ಕಲಾಕೃತಿ ಮೂಲಕ ಸಾಮಾಜಿಕ ನೆಲೆಯಲ್ಲಿ ಜನರೊಂದಿಗೆ ಮುಕ್ತವಾಗಿ ಬೆರೆತುಕೊಳ್ಳಲು ಸದಾವಕಾಶ ಕಲ್ಪಿಸುವುದು ಇದರ ಉದ್ದೇಶ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

