ದಕ್ಷಿಣ ಕನ್ನಡ

ಎಸ್‌ಕೆಎಸಿಎಂಎಸ್‌ನಲ್ಲಿ ವ್ಯವಹಾರ ಸ್ಥಗಿತ

Published On :

ಸುಳ್ಯ: ಇಲ್ಲಿನ ಎಸ್.ಕೆ.ಎ.ಸಿ.ಎಂ.ಎಸ್. (ದ.ಕ. ಜಿಲ್ಲಾ ಕೃಷಿ ಮತ್ತು ಸಹಕಾರಿ ಮಾರುಕಟ್ಟೆ ಸಂಘ) ಸಹಕಾರಿ ಸಂಸ್ಥೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ವ್ಯವಹಾರ ಸ್ಥಗಿತಗೊಂಡಿದ್ದು, ನಿತ್ಯ ನಿಧಿ, ಎಸ್.ಬಿ., ಎಫ್.ಡಿ.ಯಲ್ಲಿ ಹಣ ಹೂಡಿರುವವರು ಹಣ ತೆಗೆಯಲು ಬಂದಾಗ ಹಣ ಸಿಗದ ಕಾರಣ ಆತಂಕಗೊಂಡಿದ್ದಾರೆ.
 ಗ್ರಾಹಕರು ಸಭೆ ಸೇರಿ ಒಂದು ವಾರದೊಳಗೆ ಲಿಖಿತ ಉತ್ತರ ನೀಡಲು ಸಂಸ್ಥೆಯ ಆಡಳಿತಾಧಿಕಾರಿ, ವ್ಯವಸ್ಥಾಪಕರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.   ಎಸ್.ಕೆ.ಎ.ಸಿ.ಎಂ.ಎಸ್. ಸಂಸ್ಥೆಯ ಆಡಳಿತ ಮಂಡಳಿಯ ಅವಧಿ ಎರಡು ತಿಂಗಳ ಹಿಂದೆ ಮುಗಿದು ಯಾರೂ ಚುನಾವಣೆಗೆ ಸ್ಪರ್ಧಿಸದ ಕಾರಣ ಸರ್ಕಾರದಿಂದ ಆಡಳಿತಾಧಿಕಾರಿಯ ನೇಮಕವಾಗಿತ್ತು. ಸಂಸ್ಥೆಯಲ್ಲಿ ಕೆಲವು ತಿಂಗಳುಗಳಿಂದ ವ್ಯವಹಾರಗಳು ಸರಿಯಾಗಿ ನಡೆಯುತ್ತಿರಲಿಲ್ಲವೆನ್ನಲಾಗಿದೆ. ಈ ವಿಚಾರ ಸೊಸೈಟಿಯಲ್ಲಿ ಹಣ ಹೂಡಿರುವ ಕೆಲವು ಗ್ರಾಹಕರಿಗೆ ತಿಳಿದು ತಮ್ಮ ಅಕೌಂಟ್‌ನಲ್ಲಿರುವ ಹಣ ತೆಗೆಯಲು ಬಂದಾಗ, ಸೊಸೈಟಿಯ ಸ್ಥಿತಿಗತಿಯ ಕುರಿತು ಅವರಿಗೆ ಅರಿವಾಯಿತು.
 ಈ ವಿಚಾರ ಗೊತ್ತಾಗಿ ಪಿಗ್ಮಿಯಲ್ಲಿ ಹಣ ಹೂಡಿರುವವರು ಸುಳ್ಯ ಎಸ್.ಕೆ.ಎ.ಸಿ.ಎಂ.ಎಸ್. ಶಾಖೆಗೆ ಬಂದು ವಿಚಾರಿಸತೊಡಗಿದರು. ಆದರೆ, ಇಲ್ಲಿಯ ನೌಕರರು ನೀಡಿದ ಉತ್ತರಗಳು ಅಲ್ಲಿ ಬಂದ ಗ್ರಾಹಕರಿಗೆ ಸಮಾಧಾನ ತರಲಿಲ್ಲ. ಆಡಳಿತಾಧಿಕಾರಿಯ ಫೋನ್ ನಂಬರ್ ಪಡೆದು ಅವರಿಗೆ ಫೋನ್ ಮಾಡಿ ವಿಚಾರಿಸಿದಾಗಲೂ ಅವರು ಸರಿಯಾದ ಉತ್ತರ ನೀಡಿರಲಿಲ್ಲ. ಸಂಸ್ಥೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ತಿಳಿದುಕೊಂಡ ಗ್ರಾಹಕರು ಒಟ್ಟು ಸೇರಿ ಮುಂದಿನ ಕ್ರಮದ ಕುರಿತು ನಿರ್ಣಯಿಸಲು ಸಭೆಯನ್ನು ಕರೆಯಲು ನಿರ್ಧರಿಸಿದರು.
 ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ಪಿಗ್ಮಿ, ಎಸ್.ಬಿ., ಎಫ್.ಡಿ.ಯಲ್ಲಿ ಹಣ ಹೂಡಿದವರ ಸಭೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.