ದಕ್ಷಿಣ ಕನ್ನಡ

ಭೂಮಾಪನ ಶುಲ್ಕ ಹೆಚ್ಚಳ ವಾಪಾಸ್ ಆಗ್ರಹ

Published On :

ಮಂಗಳೂರು: ಭೂಮಾಪನ ನಕ್ಷೆಯ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿರುವ ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ರೈತರಿಗೆ ತೊಂದರೆ ಉಂಟುಮಾಡುವ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಜಾಗ ಅಳತೆಗೆ ಮೋಜಣಿ ವ್ಯವಸ್ಥೆಯಲ್ಲಿ ಸ್ವೀಕೃತವಾಗುವ ಅರ್ಜಿಗಳಿಗೆ ನೀಡುವ ನಕ್ಷೆಗಳಿಗೆ ಪಡೆಯುತ್ತಿದ್ದ ಶುಲ್ಕವನ್ನು ಏಕಾಏಕಿ ಹೆಚ್ಚಿಸಲಾಗಿದೆ. ನಕ್ಷೆಗೆ ರು. 600 ಮತ್ತು ತತ್ಕಾಲ್ ಪೋಡಿಗೆ ರು. 500ನ್ನು ಪರಿಷ್ಕರಿಸಿ 2 ಎಕರೆ ವರೆಗೆ ವಿಸ್ತೀರ್ಣಕ್ಕೆ ರು. 1500 ಮತ್ತು 2 ಎಕರೆಗಿಂತ ಹೆಚ್ಚಿನ ಪ್ರತಿಗೆ ರು. 200ರಂತೆ ಶುಲ್ಕ ಪಡೆಯಲಾಗುತ್ತಿದೆ. ನಗರ ಪ್ರದೇಶದಲ್ಲಿ 11 ಅರ್ಜಿ ಮತ್ತು ಅಲಿನೇಷನ್ ಪೂರ್ವ ನಕ್ಷೆಗೆ ಪಡೆಯುತ್ತಿದ್ದ ರು. 600 ಮತ್ತು ರು. 500 ಶುಲ್ಕವನ್ನು ಪರಿಷ್ಕರಿಸಿ ಏರಿಕೆ ಮಾಡಲಾಗಿದೆ.  ಈಗಾಗಲೇ ಸರ್ಕಾರದ ತಪ್ಪು ತೀರ್ಮಾನದಿಂದ ಗ್ರಾಮೀಣ ಪ್ರದೇಶದ ಭೂ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ. ಇದೀಗ ನಕ್ಷೆ ಶುಲ್ಕ ಹೆಚ್ಚಳ ಸಾರ್ವಜನಿಕರಿಗೆ ಹೊರೆಯಾಗಿದ್ದು, ಹಗಲು ದರೋಡೆಯಾಗಿದೆ. ಇದರಿಂದ ಗ್ರಾಮೀಣ ಜನತೆ ತಮ್ಮ ಜಮೀನು ಅಳತೆ ಮಾಡಿ ನಕ್ಷೆ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಜಮೀನು ವಿಭಾಗ ಮಾಡಿಕೊಳ್ಳಲು ಇದರಿಂದ ತೊಂದರೆಯುಂಟಾಗಿದೆ. ಇದು ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ ಎಂಬುದಕ್ಕೆ ಜ್ವಲಂತ ಉದಾಹರಣೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.