ದಕ್ಷಿಣ ಕನ್ನಡ

ಕಾಡುತ್ಪತ್ತಿ ಸಂಗ್ರಹಕಾರಗೆ ಗುಂಡೇಟು, ಗಾಯ

Published On :

ಉಪ್ಪಿನಂಗಡಿ: ಶಿರಾಡಿ ಗ್ರಾಮದ ಶಿರ್ವತಡ್ಕ ಎಂಬಲ್ಲಿ ಕಾಡುತ್ಪತ್ತಿ ಸಂಗ್ರಹಿಸಲೆಂದು ಹೋದ ಗುಂಪಿನ ಮೇಲೆ ಗುಂಡು ಹಾರಿಸಿ ತನಿಯಪ್ಪ (48) ಎಂಬವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.
 ಶಿರಾಡಿ ಗ್ರಾಮದ ದೇರಮಜಲು ಮನೆ ನಿವಾಸಿ ತನಿಯಪ್ಪ ಗಾಯಾಳು.
ಅವರು ತಮ್ಮ ಹೆಂಡತಿ ಅಕ್ಕಮ್ಮ, ಮಂಜುನಾಥ ಮತ್ತು ಅವರ ಅಕ್ಕ ಸುಮತಿ ಎಂಬವರು ಜತೆಗೂಡಿ ಶಿರ್ವತಡ್ಕ ರಕ್ಷಿತಾರಣಕ್ಕೆ ಹೋಗಿದ್ದಾಗ ಕಾಡಿನೊಳಗೆ ಏಕಾಏಕಿ ಗುಂಡು ಹಾರಿ ಬಂದು, ತನಿಯಪ್ಪ ಅವರ ಕೈ ಮತ್ತು ಕಿವಿಯ ಭಾಗಕ್ಕೆ ಗಾಯವನ್ನುಂಟು ಮಾಡಿದೆ. ತಕ್ಷಣ ಅವರನ್ನು ಕಾಡಿನಿಂದ ಹೊರ ತಂದು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಗೂಢ ಗುಂಡು: ತನಿಯಪ್ಪ ಮತ್ತವರ ತಂಡದ ಮೇಲೆ ಗುಂಡು ಎಲ್ಲಿಂದ ತೂರಿ ಬಂದಿದೆ ಎಂಬುದಿನ್ನೂ ಖಚಿತವಾಗಿಲ್ಲ. ಒಂದು ಮಾಹಿತಿ ಪ್ರಕಾರ ಅರಣ್ಯ ಇಲಾಖಾ ಸಿಬ್ಬಂದಿ ಕಾಡಿನೊಳಕ್ಕೆ ಅಕ್ರಮ ಪ್ರವೇಶಿದ ತಂಡ ಕಾಡುತ್ಪತ್ತಿ ಕದಿಯುತ್ತಿದ್ದ ಕಾರಣಕ್ಕೆ ಗುಂಡು ಹಾರಿಸಿದ್ದಾರೆಂದು ಹೇಳಲಾಗಿತ್ತಾದರೂ, ಅರಣ್ಯ ಇಲಾಖಾ ಮೂಲಗಳು ಇದನ್ನು ನಿರಾಕರಿಸಿವೆ.
 ಕರ್ತವ್ಯದಲ್ಲಿರುವ ಐದಾರು ಸಿಬ್ಬಂದಿ ಗುರುವಾರದಂದು ಯಾವುದೇ ಆಯುಧ ಬಳಸಿರಲಿಲ್ಲವಾದುದರಿಂದ, ಹಾಗೂ ಅನಿವಾರ್ಯವೆನಿಸದೆ ಗುಂಡು ಹಾರಿಸುವ ಕೃತ್ಯಕ್ಕೆ ಕೈ ಹಾಕುವ ಪ್ರಮೇಯವೇ ಇಲ್ಲದಿರುವುದರಿಂದ ಗುಂಡೇಟು ಪ್ರಕರಣದಲ್ಲಿ ಅರಣ್ಯ ಇಲಾಖಾ ಪಾತ್ರ ಇಲ್ಲವೆನ್ನಲಾಗುತ್ತಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.