ಸಮಾಜದಲ್ಲಿ ಭಾರತೀಯತೆ ಮೇಳೈಸಲಿ: ಹೆಗ್ಗಡೆ
ಮಂಗಳೂರು: ಯುವಪೀಳಿಗೆಯಲ್ಲಿ ಧರ್ಮ ಸಂಸ್ಕೃತಿ, ನಮ್ಮತನವನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಹಿರಿಯರ ಕರ್ತವ್ಯ. ಪ್ರಸ್ತುತ ಸಮಾಜದಲ್ಲಿಯೂ ಭಾರತೀಯತೆಯನ್ನು ತರಬೇಕಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಆಶಿಸಿದ್ದಾರೆ.
ಅವರು ಗುರುವಾರ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ದಸರಾ ಉತ್ಸವ ಹಾಗೂ ಕ್ಷೇತ್ರ ಸ್ಥಾಪನೆಯ 151ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ಬಂದು 65 ವರ್ಷ ಕಳೆದಿದ್ದು, ನಮಗೆ ಸಮಾನತೆಯಲ್ಲದೆ ಸರ್ವ ಸಮಾನತೆ ಕೂಡ ಸಿಕ್ಕಿದೆ. ಕಾನೂನಿನಲ್ಲಿ ಪರಿವರ್ತಿಸಲಾಗದ್ದನ್ನು ಮನಃ ಪರಿವರ್ತನೆ ಮೂಲಕ ಪರಿವರ್ತಿಸಿದ್ದೇವೆ. ಭ್ರಷ್ಟಾಚಾರ, ಅತ್ಯಾಚಾರಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ದುಷ್ಟಶಕ್ತಿಯನ್ನು ಮರ್ದಿಸಿ, ಶಿಷ್ಟ ಶಕ್ತಿಯನ್ನು ಪೋಷಿಸುವ ನವರಾತ್ರಿ ಆಚರಣೆಯ ಅರ್ಥವನ್ನು ಜೀವನದಲ್ಲಿ ಅನುಸರಿಸಬೇಕಿದೆ. ಪ್ರಾಪಂಚಿಕ ಆಕರ್ಷಣೆಯನ್ನು ಮೀರಿ ನಿಂತಾಗ ಭಕ್ತಿ, ಶ್ರದ್ಧೆ, ಧರ್ಮ, ಸಾತ್ವಿಕತೆ ಕಡೆಗೆ ಮುಖಮಾಡಲು ಸಾಧ್ಯ ಎಂದರು.
ಭಾರತರತ್ನಕ್ಕೆ ಅರ್ಹ: ಅಧ್ಯಕ್ಷತೆ ವಹಿಸಿದ ಕುದ್ರೋಳಿ ಕ್ಷೇತ್ರದ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಯಾರೂ ಮಾಡದ ಸಾಧನೆಯನ್ನು ಡಾ.ಹೆಗ್ಗಡೆ ಮಾಡಿದ್ದಾರೆ. ಸ್ವಾರ್ಥರಹಿತ ಸೇವೆಯಿಂದ ಜನಮನ್ನಣೆ ಪಡೆದಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಡಾ.ಹೆಗ್ಗಡೆಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹೇಳಿದರು.
ಈ ಸಂದರ್ಭ ಡಾ.ಹೆಗ್ಗಡೆ ಅವರಿಗೆ ರಾಧೆ ಕೃಷ್ಣರ ಕಂಚಿನ ಪ್ರತಿಮೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಯುವಜನ ಸೇವಾ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೋ, ಶಕುಂತಳಾ ಶೆಟ್ಟಿ, ಸ್ವರ್ಣೋದ್ಯಮಿ ಕೆ.ಪಿ.ನಂಜುಂಡಿ, ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ.ಸುವರ್ಣ, ಉದ್ಯಮಿ ಊರ್ಮಿಳಾ ರಮೇಶ್, ಸಾಂಸ್ಕೃತಿಕ ರಾಯಭಾರಿ ಆರತಿಕೃಷ್ಣ ಅಮೆರಿಕ, ಜನಾರ್ದನ ಪೂಜಾರಿ ಪತ್ನಿ ಮಾಲತಿ ಪೂಜಾರಿ, ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಮಾಧವ, ಕೋಶಾಧಿಕಾರಿ ಪದ್ಮರಾಜ, ಪದಾಧಿಕಾರಿಗಳ ಹರಿಕೃಷ್ಣ ಬಂಟ್ವಾಳ, ದೇವೇಂದ್ರ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

