ದಕ್ಷಿಣ ಕನ್ನಡ

ಉಜಿರೆ: ಇಂದು ನೆಡ್ಲೆ ಶತಮಾನ ಸಂಸ್ಮರಣೆ

Published On :

ಬೆಳ್ತಂಗಡಿ: ಯಕ್ಷಗಾನ ಕುಲಗುರು ನೆಡ್ಲೆ ನರಸಿಂಹ ಭಟ್ ಶತಮಾನ ಸಂಸ್ಮರಣೆ ಅಂಗವಾಗಿ ಅ.19ರಂದು ನೆಡ್ಲೆ ಸಂಸ್ಮರಣೆ ಸಮಾರಂಭ- ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ವಠಾರದಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ನೆಡ್ಲೆ ಸ್ಮತಿ ಸ್ವಾರಸ್ಯದ ಪ್ರಸ್ತುತಿಯನ್ನು ಕುರಿಯ ಗಣಪತಿ ಶಾಸ್ತ್ರಿ, ಡಾ. ಎಂ. ಪ್ರಭಾಕರ ಜೋಶಿ, ಕೆ. ಗೋವಿಂದ ಭಟ್, ಸರ್ಪಂಗಳ ಈಶ್ವರ ಭಟ್, ಕುಬಣೂರು ಶ್ರೀಧರ ರಾವ್, ಕೆ. ರಾಜಾರಾಮ ಶರ್ಮ ಬೆಳಾಲು ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಪುತ್ತಿಗೆ ರಘುರಾಮ ಹೊಳ್ಳ, ಅಡೂರು ಗಣೇಶ್ ರಾವ್ ಮತ್ತು ಬಿ. ಜನಾರ್ದನ ತೋಳ್ಪಡಿತ್ತಾಯ ಅವರ ಹಿಮ್ಮೇಳದಲ್ಲಿ ಮತ್ತು ಡಾ. ಕೊಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ಕೆ. ಗೋವಿಂದ ಭಟ್, ದಿವಾಣ ಶಿವಶಂಕರ ಭಟ್ ಅವರ ಮುಮ್ಮೇಳದಲ್ಲಿ ತೆಂಕುತಿಟ್ಟು ರಂಗಕ್ರಮ ದರ್ಶನ ನಡೆಯಲಿದೆ.  
ಸಂಜೆ 4 ಗಂಟೆಗೆ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ನೆಡ್ಲೆ ಸಂಸ್ಮರಣೆ, ಸಮಾರಂಭ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ವಹಿಸಲಿದ್ದಾರೆ. ಮಂಗಳೂರಿನ ತಹಸೀಲ್ದಾರ್ ಕೆ. ಮೋಹನ ರಾವ್ ಉಪಸ್ಥಿತರಿರುತ್ತಾರೆ. ಹಿರಿಯ ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿ ಸಂಸ್ಮರಣೆ ಮಾಡಲಿದ್ದು ಹಾಸ್ಯಗಾರ ನೆಲ್ಲಿಕಟ್ಟೆ ನಾರಾಯಣ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಕುರಿಯ ವಿಠಲ ಶಾಸ್ತ್ರೀ ಯಕ್ಷಗಾನ ಪ್ರತಿಷ್ಠಾನ ಉಜಿರೆ ಇದರ ನೇತೃತ್ವದಲ್ಲಿ ಮತ್ತು ನೆಡ್ಲೆ ನರಸಿಂಹ ಭಟ್ ಯಕ್ಷಗಾನ ಪ್ರತಿಷ್ಠಾನ ಯೆಯ್ಯಾಡಿ ವತಿಯಿಂದ ಈ ಕಾರ್ಯಕ್ರಮಗಳು ನಡೆಯಲಿವೆ. ನಾಳೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ವಹಿಸಲಿದ್ದು ಧರ್ಮಸ್ಥಳ ಭುಜಬಲಿ, ದ.ಕ. ಜಿಲ್ಲಾ ಮರಳು ಸಾಗಾಟ ವಾಹನ ಮಾಲಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಸತ್ಯಪಾಲ ರೈ ಕೆಡೆಂಜ ಉಪಸ್ಥಿತರಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.