ದಕ್ಷಿಣ ಕನ್ನಡ

ದತ್ತಮಾಲಾಧಾರಣೆ- ಮೆರವಣಿಗೆಯಲ್ಲಿ ನಾಗಾ ಸಾಧುಗಳು

Published On :

ಮಂಗಳೂರು: ಕದ್ರಿ ದೇವಸ್ಥಾನದಲ್ಲಿ ದತ್ತಮಾಲಾಧಾರಣೆ ಅ.25ರಂದು ನಡೆಯಲಿದೆ. ಈ ಸಂದರ್ಭ ಡೊಂಗರಕೇರಿ ಶ್ರೀವೆಂಕಟರಮಣ ದೇವಸ್ಥಾನದಿಂದ ಕದ್ರಿ ಶ್ರೀಮಂಜುನಾಥೇಶ್ವರ ದೇವಸ್ಥಾನ ವರೆಗೆ ನಗರ ಸಂಕೀರ್ತಿನೆ ನಡೆಯಲಿದ್ದು, ನಾಗಾ ಸಾಧುಗಳು ಭಾಗವಹಿಸುವರು.  ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ ಕುಮಾರ್ ಮಾಲೆಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.  26ರಂದು ರಾತ್ರಿ 10 ಗಂಟೆಗೆ ಕದ್ರಿ ಜೋಗಿಮಠದಿಂದ ದತ್ತಪೀಠ ಯಾತ್ರೆ ಆರಂಭವಾಗಲಿದೆ. 27ರಂದು ಬೆಳಗ್ಗೆ 10 ಗಂಟೆಗೆ ಚಿಕ್ಕಮಗಳೂರಲ್ಲಿ ಶೋಭಾಯಾತ್ರೆ ನಡೆಯಲಿದೆ. ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದು ಮಕ್ಕಳ್‌ಕಚ್ಚಿಯ ಅರ್ಜುನ್ ಸಂಪತ್, ಥಪ್ಪನ್ ಘೋಷ್ ಭಾಗವಹಿಸುವರು ಎಂದರು.
ಪಕ್ಷಪಾತಕ್ಕೆ ಖಂಡನೆ: ಅಲ್ಪಸಂಖ್ಯಾತರಿಗೆ ಮಂಚ, ಬೆಡ್, ತಲೆದಿಂಬು, ಎರಡನೇ ಮದುವೆ ಆಗುವವರಿಗೆ 50 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕಾಂಗ್ರೆಸ್‌ಗೆ ಎಲ್ಲ ಧರ್ಮದವರು ಮತ ನೀಡಿದ್ದಾರೆ. ಇದೇ ರೀತಿ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದರೆ ಸೇನೆ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದರು.
ಕ್ಷೇತ್ರ ಅವಹೇಳನ ಸಲ್ಲ: ಧರ್ಮಸ್ಥಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದನ್ನು ಶ್ರೀರಾಮಸೇನೆ ಸಹಿಸುವುದಿಲ್ಲ ಎಂದರು.
 ಸೌಜನ್ಯ ಹತ್ಯಾಚಾರ ಬಗ್ಗೆ ಧ್ವನಿ ಎತ್ತಿ ಪ್ರತಿಭಟಿಸುವರನ್ನು ಖಂಡಿಸಲು ಬಹಳ ಮಂದಿ ಇದ್ದಾರೆ. ಆದರೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಯುವತಿಯರನ್ನು ರಕ್ಷಿಸಲು ದಾಳಿ ಮಾಡಿದರೆ ಎಷ್ಟೋ ಬುದ್ಧಿ ಜೀವಿಗಳು ಪ್ರಕರಣ ಸಿಐಡಿಗೆ ನೀಡಿ ಎಂದು ಪ್ರತಿಭಟಿಸುತ್ತಾರೆ. ಮುಗ್ಧ ಹುಡುಗಿ ಅತ್ಯಾಚಾರ, ಕೊಲೆಯಾದರೆ ಬುದ್ಧಿ ಜೀವಿಗಳು ಪ್ರತಿಭಟಿಸುವುದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.