ಅಲ್ಪಸಂಖ್ಯಾತ ಮತಗಳಿಂದ ಮಾತ್ರ'ಕೈ' ಗೆದ್ದಿಲ್ಲ: ಖಾದರ್
ಮಂಗಳೂರು: ಪಿಲಿಕುಲ ಸ್ಕೌಟ್ ಭವನದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತರ ರಕ್ಷಣೆ ವಿಚಾರದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತು ಮಾಜಿ ಮೇಯರ್ ಆಶ್ರಫ್ ಪರೋಕ್ಷ ವಾಗ್ಬಾಣಗಳ ವಿನಿಮಯ ಮಾಡಿಕೊಂಡರು! ಮಂಗಳೂರು ಮಾಜಿ ಮೇಯರ್ ಅಶ್ರಫ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಬಳಿಕವೂ ಅಲ್ಪಸಂಖ್ಯಾತರ ಸಮಸ್ಯೆ ಕಡಿಮೆಯಾಗಿಲ್ಲ. ಗೋ ಸಾಗಣೆ ಪರವಾನಗಿ ಇದ್ದರೂ ದಾಳಿಗಳು ನಡೆಯುತ್ತಿವೆ. ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧವೇ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಸಭೆ ಕೂಡಾ ಕರೆದಿದ್ದೇವೆ ಎಂದು ಗುಡುಗಿದರು. ಇದರಿಂದ ವಿಚಲಿತರಾದ ಜಿ. ಪರಮೇಶ್ವರ, ನೀವೆಲ್ಲ ಈ ರೀತಿ ಮಾಡಬಾರದು. ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ, ನಿಮ್ಮ ದೂರುಗಳನ್ನು ಪರಿಶೀಲನೆ ಮಾಡುತ್ತೇವೆ ಎಂದರು. ಜಿಲ್ಲೆಯಲ್ಲಿ ಮೂವರು ಸಚಿವರಿದ್ದಾರೆ. ದಯವಿಟ್ಟು ಕುಳಿತುಕೊಳ್ಳಿ ಎಂದು ಆಶ್ರಫ್ ಅವರನ್ನು ಅಧ್ಯಕ್ಷರು ಕುಳ್ಳಿರಿಸಿದರು. ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ಅಲ್ಪಸಂಖ್ಯಾತರಿಗೆ ತೊಂದರೆ ಆಗಿದ್ದರೆ ನಿರ್ದಿಷ್ಟ ಪ್ರಕರಣಗಳನ್ನು ತಿಳಿಸಿ. ಈ ಬಗ್ಗೆ ಪೊಲೀಸರು, ಅಧಿಕಾರಿಗಳ ಜತೆ ಮಾತನಾಡಿ ಪರಿಹರಿಸೋಣ. ಇದನ್ನು ಬಿಟ್ಟು ಪ್ರತಿಭಟನೆ ಹೆಸರಲ್ಲಿ ಬ್ಲ್ಯಾಕ್ಮೇಲ್ ಮಾಡುವುದು ಸರಿ ಅಲ್ಲ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಮತಗಳಿಂದ ಗೆದ್ದಿಲ್ಲ. ಉಳ್ಳಾಲದಲ್ಲಿ ತನಗೆ ಅಷ್ಟು ಬಹುಮತ ಬಂದಿದೆ. ಬಹುಸಂಖ್ಯಾತರು ಮತ ಹಾಕದೆ ಇದು ಸಾಧ್ಯವಿಲ್ಲ ಎಂದರು.
ಮಗು ಸೊಂಟಕ್ಕೆ ಕಟ್ಟಿ ಕಡಲಿಗೆ ಹಾರಿದ ತಾಯಿ
ಮಂಗಳೂರು: ದಾಂಪತ್ಯ ಸಮಸ್ಯೆಯಿಂದ ನೊಂದ ಮಹಿಳೆ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಪಣಂಬೂರು ತೀರದಲ್ಲಿ ಕಡಲಿಗೆ ಹಾರಿದ್ದಾಳೆ. ಜೀವರಕ್ಷದಳದವರು ನದಿಗೆ ಹಾರಿ ಮಹಿಳೆಯನ್ನು ರಕ್ಷಿಸಿದರೂ 9 ತಿಂಗಳ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕುದ್ರೋಳಿ ಜೋಡುಪಳ್ಳಿಯ ನಝೀಮಾ (22) ತನ್ನ 9 ತಿಂಗಳ ಮಗು ನಝೀಮ್ನನ್ನು ಶಾಲ್ನಲ್ಲಿ ಸೊಂಟಕ್ಕೆ ಕಟ್ಟಿ ಸೋಮವಾರ ಸಂಜೆ ಕಡಲಿಗೆ ಹಾರಿದ್ದರು. ಇದನ್ನು ನೋಡಿದ ಜೀವರಕ್ಷಕದಳದವರು ಆಕೆಯನ್ನು ಎಳೆದು ತೀರಕ್ಕೆ ತಂದಿದ್ದರು. ಮಹಿಳೆ ಬಚಾವಾದರೂ ಸೊಂಟದಲ್ಲಿ ಕಟ್ಟಿದ್ದ ಕಾರಣಕ್ಕೆ ಮಗು ನೀರಲ್ಲಿ ತುಂಬ ಹೊತ್ತು ಮುಳುಗಿ ಮೃತಪಟ್ಟಿತ್ತು. ಮಹಿಳೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೀವರಕ್ಷಕದಳದ ಮುಖ್ಯಸ್ಥ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ. ಗಂಡ ಹೆಂಡಿರ ನಡುವಿನ ಜಗಳವೇ ಈ ಕೃತ್ಯವೆಸಗಲು ಕಾರಣ ಎನ್ನಲಾಗಿದೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

