ಸೆಲೂನ್‌ಗೆ ಬೆಂಕಿ; ಸೊತ್ತು ಪೂರ್ಣ ಭಸ್ಮ
ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಎಂಬಲ್ಲಿರುವ ಬಜರಂಗ ದಳದ ಕಾರ್ಯಕರ್ತನ ಸೆಲೂನ್ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಅಂಗಡಿ ಸಂಪೂರ್ಣ ಸುಟ್ಟು ಹೋದ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ.
ತಡರಾತ್ರಿ 2.30ರ ಸುಮಾರಿಗೆ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಬಳಿ ಇರುವ ರಮೇಶ್ ಭಂಡಾರಿ ಎಂಬವರ ಸೆಲೂನ್ ಅಂಗಡಿ ಹಿಂಭಾಗದ ಸಣ್ಣ ಕಿಟಕಿಯ ಮೂಲಕ ಸೀಮೆಎಣ್ಣೆ ಅಥವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.
ಘಟನೆಯಲ್ಲಿ ರು. 1 ಲಕ್ಷ ಮೌಲ್ಯದ ಸೊತ್ತು-ನಗದು ಬೆಂಕಿಗಾಹುತಿಯಾಗಿದೆ. ಘಟನೆಯಿಂದಾಗಿ ಅಂಗಡಿ ಕಟ್ಟಡವೂ ಸಂಪೂರ್ಣ ಹಾನಿಯಾಗಿದ್ದು, ಸುರೇಶ್ ಎನ್ನುವರ ಮಾಲೀಕತ್ವದ ಈ ಅಂಗಡಿಯ ನಷ್ಟದ ಪ್ರಮಾಣವನ್ನು ಇನ್ನು ಅಂದಾಜಿಸಬೇಕಾಗಿದೆ.
ಅಂಗಡಿ ಬೆಂಕಿಗಾಹುತಿಯಾಗುವುದನ್ನು ಕಂಡ ಸ್ಥಳೀಯರು, ತಕ್ಷಣ ಸ್ಥಳಕ್ಕೆ ಧಾವಿಸಿ ಬಂದಿದ್ದು, ಬೆಂಕಿ ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡರು. ರಮೇಶ್ ಭಂಡಾರಿ ಭಜರಂಗ ದಳದ ಕಾರ್ಯಕರ್ತರಾಗಿದ್ದು, ತನ್ನ ಅಂಗಡಿಗೆ ಯಾರು ಬೆಂಕಿ ಹಚ್ಚಿದರೆಂಬ ಬಗ್ಗೆ ಯಾರನ್ನೂ ಹೆಸರಿಸದೆ ದೂರು ನೀಡಿದ್ದಾರೆ.
ಖಂಡನೆ: ಅಂಗಡಿಗೆ ಬೆಂಕಿ ಹಚ್ಚಿದ ಕೃತ್ಯವನ್ನು ಬಜರಂಗದಳ ಸಂಚಾಲಕ ಪ್ರಸಾದ್ ಪಚ್ಚಾಡಿ ಖಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

