ದಕ್ಷಿಣ ಕನ್ನಡ

ಬಚ್ಚಲು ಕೋಣೆ ಇಣುಕು ಕಾಮಿ ಬಾವಿಗೆ ಬಿದ್ದ!

Published On :

ಮಂಗಳೂರು: ಬಚ್ಚಲುಮನೆ ಇಣುಕಲು ಹೋದ 'ಇಣುಕು ಕಾಮಿ'ಯೊಬ್ಬ ಸ್ಥಳೀಯರಿಂದ ತಪ್ಪಿಸಿಕೊಳ್ಳಲು ಹೋಗಿ ತೆರೆದ ಬಾವಿಗೆ ಬಿದ್ದ ಪ್ರಸಂಗ ಕೋಟೆಕಾರ್ ಅಂಚೆಕಚೇರಿ ಬಳಿ ನಡೆದಿದೆ. ಒಂದು ಗಂಟೆ ಕಾಲ ಬಾವಿಯಲ್ಲಿದ್ದ ಆತನನ್ನು ಬಳಿಕ ಅಗ್ನಿಶಾಮಕದಳದವರು ಮೇಲೆತ್ತಿದರು.   ಉತ್ತರ ಕರ್ನಾಟಕ ಭಾಗದ ಕಾರ್ಮಿಕ ಉಮೇಶ್ ಎಂಬಾತ ಮಂಗಳವಾರ ರಾತ್ರಿ ಮನೆಯೊಂದರ ಬಚ್ಚಲು ಕೋಣೆಯನ್ನು ಇಣುಕಿ ನೋಡುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿಯಲು ಯತ್ನಿಸಿದರು. ಆಗ ಆತ ತಪ್ಪಿಸಿಕೊಳ್ಳುವ ಭರದಲ್ಲಿ ಮನೆ ಆವರಣದಲ್ಲಿದ್ದ ಬಾವಿಗೆ ಬಿದ್ದಿದ್ದಾನೆ. ಬಾವಿಯಲ್ಲಿ ಒಂದು ಗಂಟೆ ಕಾಲ ಈಜುತ್ತಲೇ ಕಾಲ ಕಳೆದಿದ್ದ. ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ಉಮೇಶ್ನನ್ನು ಮೇಲೆತ್ತಿದರು. ಈ ಸಂದರ್ಭದಲ್ಲಿ ಸ್ಥಳೀಯರು ಇಣುಕುಕಾಮಿಗೆ ಚೆನ್ನಾಗಿ ಚಚ್ಚಿದ್ದಾರೆ. ಉಳ್ಳಾಲ ಪೊಲೀಸರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.