ಹಣ ನೀಡುವಂತೆ ಒತ್ತಾಯ: ಪತ್ನಿ ಮೇಲೆ ಗಂಡನಿಂದ ಹಲ್ಲೆ
ವಿಟ್ಲ: ಹಣ ನೀಡುವಂತೆ ಒತ್ತಾಯಿಸಿ ಗಂಡ ಹಲ್ಲೆ ನಡೆಸಿರುವುದಾಗಿ ಮಹಿಳೆಯೊಬ್ಬರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ವಿಟ್ಲದ ಕೇಪು ಗ್ರಾಮದ ನಿರ್ಕಾಜೆ ಸಮೀಪದ ಕುಕ್ಕೆಬೆಟ್ಟು ನಿವಾಸಿ ಮಹಮ್ಮದ್ ಅವರ ಪುತ್ರಿ ಸಿಲಿಮಾ (28) ಎಂಬವರೇ ಗಂಡನಿಂದ ಹಲ್ಲೆಗೊಳಗಾದವರು. ಮೂಲತಃ ಮುಂಬೈ ಸೀತಾಕ್ಯಾಂಪ್ ನಿವಾಸಿ ಹಸನ್ ಅವರ ಪುತ್ರ, ಈ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹನೀಫ್ (31) ಎಂಬಾತ ಮಂಗಳವಾರ ಸಂಜೆ ಮನೆಗೆ ಬಂದು ತನ್ನ ಪತ್ನಿ ಸಿಲಿಮಾಳೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿದ್ದು, ಬಳಿಕ ತನಗೆ ಹಣ ನೀಡುವಂತೆ ಬೆದರಿಸಿದ್ದಾನೆ. ಈ ಸಂದರ್ಭ ಆಕೆ ನನ್ನಲ್ಲಿ ಹಣವಿಲ್ಲ ಎಂದು ಹೇಳಿದ್ದು, ಇದರಿಂದ ಕೋಪಗೊಂಡ ಆತ ಆಕೆಯ ಕೂದಲು ಎಳೆದು ಹೊಟ್ಟೆಗೆ ಗಂಭೀರವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.ಕಳೆದ ಎಂಟು ವರ್ಷಗಳಿಂದ ಈತ ಆಕೆ ಹಣದ ವಿಚಾರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದು, ಇದೀಗ ಮಹಿಳೆ ತನಗೆ ನ್ಯಾಯ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನ್ನ ಪತಿ ಹನೀಫ್ ವಿರುದ್ಧ ದೂರು ನೀಡಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

