ದಕ್ಷಿಣ ಕನ್ನಡ

ಡೀಸೆಲ್ ಕಳ್ಳಸಾಗಾಟ: ಟ್ಯಾಂಕರ್ ಚಾಲಕ ಸೆರೆ

Published On :

ಮಂಗಳೂರು: ಎನ್ಎಂಪಿಟಿ ಬಂದರು ಬಳಿ ಡೀಸೆಲ್ ಕಳ್ಳಸಾಗಾಟ ನಡೆಸುತ್ತಿದ್ದ ವೇಳೆ ಕರಾವಳಿ ಕಾವಲು ಪಡೆ ಪೊಲೀಸರು ಟ್ಯಾಂಕರ್ ಚಾಲಕನನ್ನು ಬಂಧಿಸಿದ್ದಾರೆ. ಉಜಿರೆ ರಾಮಚಂದ್ರ (33) ಬಂಧಿತ. ಪಣಂಬೂರು ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಒಸಿಎಲ್ ಸಂಸ್ಥೆಯಿಂದ ಎನ್ಎಂಪಿಟಿಗೆ ರಾಮಚಂದ್ರ ಡೀಸೇಲ್ ಸಾಗಾಟ ಮಾಡುತ್ತಿದ್ದ. ಟ್ಯಾಂಕರ್ ಒಳಗೆ ರಹಸ್ಯ ಟ್ಯಾಂಕ್ ಮಾಡಿದ್ದ. ಗುರುವಾರ ಪೊಲೀಸರು ಸಂಶಯದಿಂದ ತಪಾಸಣೆ ನಡೆಸಿದಾಗ ಕಳ್ಳ ಸಾಗಾಟ ಬಯಲಿಗೆ ಬಂದಿದೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರೈಲು ಡಿಕ್ಕಿ: ವೃದ್ಧ ಸಾವು
ಮಂಗಳೂರು: ಚೊಕ್ಕಬೆಟ್ಟು ಹಳಿ ಬಳಿ ಗರುವಾರ ರೈಲು ಡಿಕ್ಕಿಯಾಗಿ ಶಿವಣ್ಣ ಶೆಟ್ಟಿ (80) ಮೃತಪಟ್ಟಿದ್ದಾರೆ. ಹಳಿ ಬಳಿ ನಡೆದುಹೋಗುತ್ತಿದ್ದ ವೇಳೆ ಯಶವಂತಪುರ-ಕಣ್ಣೂರು ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿರಬೇಕು ಎಂದು ಶಂಕಿಸಲಾಗಿದೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2.45 ಕೆಜಿ ಚಿನ್ನ ಗಟ್ಟಿ ವಶ
 ಮಂಗಳೂರು:  ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಾಟ ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಎರಡು ಪ್ರಕರಣದಲ್ಲಿ 2.45 ಕಿಲೊ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ದುಬೈಯಿಂದ ಬರುತ್ತಿದ್ದ ವಿಮಾನ ಪ್ರಯಾಣಿಕರನ್ನು ತಪಾಸಣೆ ಮಾಡುವಾಗ ಚಿನ್ನ ಸಿಕ್ಕಿದೆ.  ಕಾಸರಗೋಡು ಪೆರುಂಬಾಳ ನಿವಾಸಿ ಅಬ್ಬಾಸ್ ಅಲಿ ಸಾಬದ್ನ ಬಳಿಯಿಂದ 1.45 ಕಿಲೊ ಚಿನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.ಚಿನ್ನ ಮೌಲ್ಯ 46.32 ಲಕ್ಷ ಅಂದಾಜಿಸಲಾಗಿದೆ. ಗ್ಲಾಸ್ಸ್ಟಾಂಡ್ ಕ್ಲಾಂಪ್ ಹೊಲ್ಡರ್ನಲ್ಲಿ ಚಿನ್ನದ ಬಿಲ್ಲೆಗಳು ಲಭಿಸಿದೆ. ಆರೋಪಿಯನ್ನು ಬಜಪೆ ಪೊಲೀಸರ ವಶಕ್ಕೆ ನೀಡಿದ್ದು, ಕೋರ್ಟ್ಗೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
1 ಕೆಜಿ ಚಿನ್ನ ವಶ: ಜೆಟ್ ಏರ್ವೇಸ್ ವಿಮಾನದೊಳಗೆ ಸೀಟ್ನಲ್ಲಿ ಅವಿತಿರಿಸಲಾಗಿದ್ದ 1 ಕಿಲೊ ಬಂಗಾರವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಗುರುವಾರ ಬೆಳಗ್ಗೆ ದುಬೈಯಿಂದ ವಿಮಾನ ಮಂಗಳೂರಿಗೆ ಬರುತ್ತಿತ್ತು.  
ಕೊಳೆತ ಶವ ಪತ್ತೆ
ಮಂಗಳೂರು: ತಣ್ಣೀರುಬಾವಿ ತೀರದಲ್ಲಿ 30-40 ವರ್ಷ ಪ್ರಾಯದ ಅಪರಿಚಿತ ಶವ ಪತ್ತೆಯಾಗಿದ್ದು, ಸಂಪೂರ್ಣ ಕೊಳೆತು ಹೋಗಿದೆ. ಎರಡು ವಾರದ ಹಿಂದೆ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿರಿಸಲಾಗಿದೆ.
ಟ್ಯಾಂಕರ್-ಕಾರು ಡಿಕ್ಕಿ; 6 ಮಂದಿಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಎಂಜಿರ ಎಂಬಲ್ಲಿ ರಾ.ಹೆ.75ರಲ್ಲಿ ಟ್ಯಾಂಕರ್ ಮತ್ತು ಸುಮೋ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಹುಬ್ಬಳಿಯ ಕುಟಂಬವೊಂದರ ಸದಸ್ಯರು ಸುಬ್ರಹ್ಮಣ್ಯಕ್ಕೆಂದು ಸುಮೋ ಕಾರಿನಲ್ಲಿ ಯಾತ್ರೆ ಕೈಗೊಂಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಎದುರಿನಿಂದ ಬಂದ ಟ್ಯಾಂಕರ್ ಹಾಗೂ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಂಜುನಾಥ, ನಾರಾಯಣ, ಲಕ್ಷ್ಮಣ್, ಮೋಹಿತ್,  ಜಯ, ಪವಿತ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.