ತಾರೆಗಳ ಆದಾಯ ತೆರಿಗೆ ಖಾತೆ ಹ್ಯಾಕ್ ಪ್ರಕರಣ; ಪ್ರತ್ಯೇಕ ತನಿಖೆ
ಮಂಗಳೂರು: ಉದ್ಯಮಿ ಅನಿಲ್ ಅಂಬಾನಿ, ಸಿನಿಮಾ, ಕ್ರಿಕೆಟ್ ತಾರೆಯರ ಆದಾಯ ತೆರಿಗೆ ಖಾತೆ ಹ್ಯಾಕ್ ಮಾಡಿದ ಪ್ರಕರಣಗಳನ್ನು ಭಾರತೀಯ ಲೆಕ್ಕ ಪರಿಶೋಧಕ ಸಂಘ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಕೆ.ರಘು ಹೇಳಿದ್ದಾರೆ.
ಟಿ.ವಿ. ರಮಣಪೈ ಹಾಲ್ನಲ್ಲಿ ಗುರುವಾರ ನಡೆದ ಲೆಕ್ಕಪರಿ ಶೋಧಕರ ಉಪವಿಭಾಗೀಯ ಸಮ್ಮೇಳನ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಶಾರುಕ್ ಖಾನ್, ಸಲ್ಮಾನ್ ಖಾನ್, ಭಾರತೀಯ ತಂಡದ ಕಪ್ತಾನ ಎಂ.ಎಸ್. ಧೋನಿ, ಸಚಿನ್ ತೆಂಡುಲ್ಕರ್ ಆದಾಯ ತೆರಿಗೆ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು. ಹೈದರಾಬಾದ್ನ ಲೆಕ್ಕಪರಿಶೋಧಕರ ಸಹಾಯಕನೊಬ್ಬ ಉದ್ಯಮಿ ಅನಿಲ್ ಅಂಬಾನಿ ಆದಾಯ ತೆರಿಗೆ ಇ-ಖಾತೆಯನ್ನು ಹ್ಯಾಕ್ ಮಾಡಿದ್ದ. ಉತ್ತರಪ್ರದೇಶದ ಸಿಎ ಸಹಾಯಕ ಸಿನಿಮಾ, ಕ್ರೀಡಾ ತಾರೆಗಳ ಇ-ಖಾತೆ ಹ್ಯಾಕ್ ಮಾಡಿರುವುದು ತಿಳಿದು ಬಂದಿದೆ.
ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸಂಸ್ಥೆ ಕೇಂದ್ರ ಸಮಿತಿ ಸದಸ್ಯ ಚೈರಾ ಜಯ್ಗೆ ಅಧ್ಯಕ್ಷರು ಸೂಚಿಸಿದ್ದಾರೆ. ತನಿಖೆಯಲ್ಲಿ ಆರೋಪ ಸಾಬೀತಾದರೆ ಇಬ್ಬರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು. ಆರ್ಥಿಕ ವ್ಯವಸ್ಥೆ ಸ್ಥಿರತೆ ಮತ್ತು ಡಾಲರ್ ಎದರು ರುಪಾಯಿ ಮೌಲ್ಯ ಕುಸಿತ ತಡೆಗಟ್ಟಲು ಕೆಲವು ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು ಎಂದರು.
ವರ್ಷಕ್ಕೆ 20 ಲಕ್ಷ ವೇತನ !
ಗಲ್ಫ್, ಆಸ್ಟ್ರೇಲಿಯಾದಲ್ಲಿ ಲೆಕ್ಕಪರಿಶೋಧಕರಿಗೆ ಕೈತುಂಬ ಸಂಬಳದ ಉದ್ಯೋಗ ಕಾಯುತ್ತಿದೆ ಎಂದು ಭಾರತೀಯ ಲೆಕ್ಕಪರಿಶೋಧಕ ಸಂಘದ ಉಪಾಧ್ಯಕ್ಷ ಕೆ.ರಘು ಹೇಳಿದರು. ಕೊಲ್ಲಿ ರಾಷ್ಟ್ರಗಳಲ್ಲಿ ಬಹಳ ಬೇಡಿಕೆ ಇದೆ. ಆಸ್ಟ್ರೇಲಿಯಾದಲ್ಲಿ, ಸಿಂಗಪುರದಲ್ಲಿಯೂ ಲೆಕ್ಕಪರಿಶೋಧಕರಿಗೆ ಅಪಾರ ಬೇಡಿಕೆ ಇದೆ. ಕೈತುಂಬಾ ವೇತನ ಸಿಗುವುದರಿಂದ ಅಲ್ಲಿಯೇ ಸೆಟ್ಲ್ ಆಗಬಹುದು ಎಂದು ಸಲಹೆ ಮಾಡಿದರು. ಗುಣಮಟ್ಟದ ಲೆಕ್ಕಪರಿಶೋಧನೆಗೆ ಪುನರ್ ಪರಿಶೀಲನೆ ಸಮಿತಿ ರಚನೆ, ಸಿಎ ವಿದ್ಯಾರ್ಥಿಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ, ತರಬೇತಿ ನೀಡಲಾಗುತ್ತಿದೆ ಎಂದರು. ಕ್ಯಾಂಪಸ್ ಸಂದರ್ಶನದಲ್ಲಿ ಮುಂಬಯಿ ಹಿಂದುಸ್ತಾನ್ ಯುನಿಲೆವೆರ್ ಸಂಸ್ಥೆ ಒಬ್ಬನಿಗೆ ವರ್ಷಕ್ಕೆ ಗರಿಷ್ಠ 20 ಲಕ್ಷ ವೇತನ ಒಪ್ಪಂದ ಮಾಡಿಕೊಂಡಿದೆ. ವಿದೇಶದಲ್ಲಿನ ಉದ್ಯೋಗಕ್ಕೆ ಒಬ್ಬನಿಗೆ 24.64 ಲಕ್ಷದ ದಾಖಲೆ ಮೊತ್ತಕ್ಕೆ ಒಪ್ಪಂದ ಮಾಡಿದೆ. ಸರಾಸರಿ ವೇತನ ವರ್ಷಕ್ಕೆ 7.36 ಲಕ್ಷ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

