ದಕ್ಷಿಣ ಕನ್ನಡ

10 ಲಕ್ಷ ಅನುದಾನ ಕ್ರಿಯಾ ಯೋಜನೆಯಲ್ಲಿ ತಾರತಮ್ಯ ಆರೋಪ

Published On :

ಬಂಟ್ವಾಳ: ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಶೌಚಾಲಯಗಳಿಗೆ ಬಿಡುಗಡೆಯಾದ 10 ಲಕ್ಷ ಅನುದಾನದ ಕ್ರಿಯಾಯೋಜನೆ ಮಂಡನೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯಿತಿ ಸಭೆಯಲ್ಲಿ ಜಟಾಪಟಿ ನಡೆಯಿತು.
ಆಡಳಿತ ಪಕ್ಷದ ದಿನೇಶ್ ಅಮ್ಟೂರು ಹಾಗೂ ವಿರೋಧ ಪಕ್ಷದ ಮಾಧವ ಮಾವೆ ನಡವೆ ಉಂಟಾದ ಗದ್ದಲ ಪರಸ್ಪರ ಆರೋಪ ಪ್ರತ್ಯಾರೋಪ, ವೈಯಕ್ತಿಕ ನಿಂದನೆ ವರೆಗೂ ಮುಂದುವರೆಯಿತು. ಒಂದು ಹಂತದಲ್ಲಿ ಮಾಧವ ಮಾವೆ ಆಕ್ರೋಶದಿಂದ ಅಧ್ಯಕ್ಷರ ಮೇಜಿನತ್ತ ಧಾವಿಸಿದರು. ಆಗ ಸದಸ್ಯ ವಸಂತ ಅಣ್ಣಳಿಕೆ ಮಧ್ಯಪ್ರವೇಶಿಸಿ ಏನು ಅಧ್ಯಕ್ಷರಿಗೆ ಹೊಡೆಯುತ್ತೀರಾ ಎಂದು ಆಕ್ರೋಶ ಭರಿತರಾಗಿ ಮೇಜು ಕುಟ್ಟಿದರು. ಈ ಸಂದರ್ಭ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲವೇ ಉಂಟಾಯಿತು. ಕೊನೆಗೆ ಉಪಾಧ್ಯಕ್ಷ ಎ ಆನಂದ ಶಂಬೂರು ಸದಸ್ಯರನ್ನು ಸಮಾಧಾನಿಸಲು ಮಧ್ಯಪ್ರವೇಶಿಸಿದರು. ಅನುದಾನವನ್ನು ಸಮಾನವಾಗಿ ಹಂಚುವಂತೆ ಜಿ.ಪಂ. ಸದಸ್ಯ ಚೆನ್ನಪ್ಪ ಕೋಟ್ಯಾನ್ ತಿಳಿಸಿದರು.
ಕೋಕೋ ಗಿಡ ಪ್ರದರ್ಶನ; ತೋಟಾಗಾರಿಕೆ ಇಲಾಖೆಯಿಂದ ಕೋಕೋ ಗಿಡ ಕ್ಲಸ್ಟರ್ನಲ್ಲಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಾರದೆ ಕಳಪೆ ಸಸಿಗಳನ್ನು ಹಂಚಿಕೆ ಮಾಡಿದ್ದೀರಿ ಎಂಬ ಆರೋಪ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.
ಸದಸ್ಯ ದಿನೇಶ್ ಅಮ್ಟೂರು ಅವರು ಸಸಿಯನ್ನು ಸಭೆಯಲ್ಲಿ ಪ್ರದರ್ಶಿಸಿ ಹೆಚ್ಚುವರಿ ಬೆಲೆಗೆ ಸಸಿಗಳನ್ನು ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಮೂಲಕ ತೋಟಗಾರಿಕಾ ಇಲಾಖೆ ರೈತರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಾಗಾರಿಕಾ ಇಲಾಖಾ ಅಧಿಕಾರಿ ಸಂಜೀವ ನಾಯ್ಕ್, ಸಂಘದ ವತಿಯಿಂದಲೇ ಸಸಿಗಳನ್ನು ಖರೀದಿಸಿ ಫಲಾನುಭವಿಗೆ ಹಂಚಿಕೆ ಮಾಡುವಂತೆ ತಿಳಿಸಿಲಾಗಿತ್ತು. ಇದರ ಬಾಬ್ತು ಹಣವನ್ನು ಇಲಾಖೆಯಿಂದಲೇ ಪಾವತಿಸುವುದಾಗಿಯೂ ತಿಳಿಸಲಾಗಿತ್ತು. ಆದರೆ ಸಂಘದ ಸದಸ್ಯರು ಇಲಾಖೆಯಿಂದಲೇ ಸಸಿಗಳನ್ನು ಖರೀದಿಸಿ ನೀಡುವಂತೆ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಸಸಿಗಳನ್ನು ಖರೀದಿಸಿ ವಿತರಿಸಲಾಗಿದೆ ಎಂದರು.
ಸದಸ್ಯರಾದ ಶರೀಫ್, ರಮೇಶ್ ಕುಡ್ಮೇರ್, ಯಶವಂತ, ಶೈಲಜಾ ಶೆಟ್ಟಿ, ಪದ್ಮಶೇಖರ್ ಜೈನ್, ಸುರೇಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.