ದಕ್ಷಿಣ ಕನ್ನಡ

ಮಾಣಿ: ರಾಮಕಥಾ ಸರಣಿ ತೃತೀಯ ಕಂತಿಗೆ ಚಾಲನೆ

Published On :

ವಿಟ್ಲ: ಮಾಡಬೇಕಾದ್ದನ್ನು ಮಾಡಿದರೆ, ಮಾಡಬಾರದ್ದನ್ನು ಮಾಡಿದರೆ ಏನಾಗಬೇಕೋ ಅದು ಆಗಿಯೇ ಆಗುತ್ತದೆ. ಇದನ್ನು ಅರಿತು ಜೀವನದಲ್ಲಿ ಮುಂದುವರಿದರೆ ಯಾವುದೇ ಅವಾಂತರಗಳಿಲ್ಲ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಜನಭವನದಲ್ಲಿ ಭಾನುವಾರ ಆರಂಭವಾದ ರಾಮಕಥಾ ಸರಣಿಯ ತೃತೀಯ ಕಂತಿನ ಆರಂಭದ ದಿನ ಅವರು ಪ್ರವಚನ ನೀಡಿದರು.
ರಾಮನ ದಯೆ ಇದ್ದರೆ ಮೂಕ ಮಾತುಗಾರನಾಗುತ್ತಾನೆ, ಕುಂಟ ಗಿರಿಯನ್ನೇರುತ್ತಾನೆ, ರಾಮನ ಗಾಳಿ ಬೀಸಿದರೆ ಜಡರೂಪದ ಕಲ್ಲು ಕೂಡಾ ಎದ್ದು ನಿಲ್ಲುತ್ತದೆ. ಶತ್ರು ಮಿತ್ರನಾಗುತ್ತಾನೆ, ಅಗ್ನಿ ತಂಪಾಗುತ್ತದೆ, ವಿಷ ಅಮೃತವಾಗುತ್ತದೆ. ಹಾಗೆಯೇ ಹನುಮನಲ್ಲಿ ರಾಮನು ತುಂಬಿಕೊಂಡು ಜಗದ ಶಕ್ತಿಯನ್ನೆಲ್ಲ ತುಂಬಿಕೊಂಡಿದ್ದಾನೆ. ಆದ್ದರಿಂದ ಹನುಮನಿಗೆ ಜಾಢ್ಯವಿಲ್ಲವಾಯಿತು ಎಂದರು.
ಅತಿಥಿ ಸತ್ಕಾರ ಹೀಗಿರಲಿ: ಅತಿಥಿಗಳು ಮನೆಗೆ ಬಂದಾಗ ಬೀಳ್ಕೊಡುವಾಗ ಮನೆಯವರು ಯಾವ ರೀತಿ ವರ್ತಿಸಬೇಕು ಎಂದು ವಿವರಿಸಿದ ಸ್ವಾಮೀಜಿ, ಅತಿಥಿಗಳನ್ನ ಸತ್ಕರಿಸಿ, ಗೌರವಿಸಿ, ತೆರಳುವ ಸಂದರ್ಭ ಹೊರಗೆ ಹೋಗಿ ಬೀಳ್ಕೊಡಬೇಕು. ಆಗ ಟಿ.ವಿ.ಧಾರಾವಾಹಿಯನ್ನು ನೋಡುತ್ತಿರಬೇಡಿ, ಅದು ಸಂಸ್ಕಾರವಲ್ಲ ಎಂದರು.
ಕಲಾವಿದರಾದ ನೀರ್ನಳ್ಳಿ ಗಣಪತಿ, ಅಶೋಕ ಸಿದ್ಧನಕಾಯಿ, ಗೋಪಿನಾಥ ಸಾಗರ ಅವರ ಆಶು ಚಿತ್ರಗಳು ಗಮನ ಸೆಳೆದವು. ಗುಣವಂತೇಶ್ವರ ಭಟ್ ಕಾರ್ಕಳ, ಡಾ.ಸಂಪತ್ತಿಲ ಮಹಾಲಿಂಗೇಶ್ವರ ಶರ್ಮ ಮತ್ತು ಮನೆಯವರು ರಾಮಕಥಾದ ಪ್ರಾಯೋಜಕತ್ವ ವಹಿಸಿದ್ದರು. ಆಚಳ್ಳಿ ಶಂಕರನಾರಾಯಣ ಶಾಸ್ತ್ರಿ ಮತ್ತು ವೆಂಕಟ್ರಮಣ ಭಟ್ ಹಿರೇಬಂಡಾಡಿ ಸಹಪ್ರಾಯೋಜಕತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.