ಕಡಬ: ಪರಿಹಾರ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಉಪ್ಪಿನಂಗಡಿ: ಸತತ ಮಳೆಯಿಂದಾಗಿ ಕಾಡಿದ ಕೊಳೆ ರೋಗದಿಂದ ನಷ್ಟಕ್ಕೀಡಾದ ಕೃಷಿಕರಿಗೆ ಸೂಕ್ತ ಪರಿಹಾರ ಹಾಗೂ ಸಾಲಮನ್ನಾ ಮಾಡಬೇಕೆಂದು ಅಗ್ರಹಿಸಿ ಕಡಬ ಬಿಜೆಪಿ ಶಕ್ತಿ ಕೇಂದ್ರದ ಆಶ್ರಯದಲ್ಲಿ ಹಕ್ಕೊತ್ತಾಯ ಕಾರ್ಯಕ್ರಮ ಇತ್ತೀಚೆಗೆ ಕಡಬ ನಾಡಕಚೇರಿ ಎದುರು ನಡೆಯಿತು.
ರಾಜ್ಯ ಸರ್ಕಾರ ರೈತನ ನೆರವಿಗೆ ಮುಂದಾಗಬೇಕು, ಕೊಳೆರೋಗಕ್ಕೆ ಪರಿಹಾರವಾಗಿ ರೈತನ ಅಡಕೆ ಬೆಳೆಗೆ ಎಕ್ರೆಗೆ ರು. 50,000 ಪರಿಹಾರ ನೀಡಬೇಕು ಹಾಗೂ ರೈತನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಅಗ್ರಹಿಸಿ ಕಡಬ ನಾಡ ಕಚೇರಿಯ ಕಂದಾಯ ನಿರೀಕ್ಷಕ ಬಾಬು ನಾಯ್ಕ ಅವರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪುಲಸ್ಯಾ ರೈ, ಕಡಬ ಶಕ್ತಿ ಕೇಂದ್ರ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ತಾಪಂ ಸದಸ್ಯೆ ಸರೋಜಿನಿ ಜಯಪ್ರಕಾಶ್ ಮಾತನಾಡಿದರು.
ಉಮೇಶ್ ರೈ ಮನವಳಿಕೆ, ಡಾ. ಸುರೇಶ್ ಕುಮಾರ್ ಕೂಡೂರು, ಜಯಕರ್ನಾಟಕ ಕಡಬ ವಲಯ ಗೌರವಾಧ್ಯಕ್ಷ ಅಶೋಕ್ ರೈ ವಜ್ರಪಾಣಿ, ಬಿಜೆಪಿ ಮುಖಂಡರಾದ ಅಬ್ದುಲ್ ರಹಿಮಾನ್ ಪನ್ಯ, ಆದಂ ಕುಂಡೋಳಿ, ಸುಂದರ ಗೌಡ ಮಂಡೇಕರ, ದೇವಯ್ಯ ಗೌಡ ಪನ್ಯಾಡಿ, ವಾಡ್ಯಪ್ಪ ಗೌಡ ಎರ್ಮಾಯಿಲ್, ಕೃಷ್ಣಪ್ಪ ದೇವಾಡಿಗ, ಸತೀಶ್ ನಾಯಕ್, ನಾರಾಯಣ ಪೂಜಾರಿ, ಶಿವಪ್ರಸಾದ್ ಮೈಲೇರಿ, ದಾಮೋದರ ಗೌಡ ಡೆಪ್ಪುಣಿ, ಸುರೇಶ್ ದಂತಾರು, ಹಿಂದೂ ಮುಖಂಡರಾದ ರವಿರಾಜ್ ಶೆಟ್ಟಿ, ಸಂತೋಷ್ ಸುವರ್ಣ ಕೋಡಿಬೈಲ್, ವಿಠಲ ಶೆಟ್ಟಿ, ಪಂಚಾಯತ್ ಸದಸ್ಯರಾದ ಶೋಭಾ ಜಯಾನಂದ, ಸುದರ್ಶನ ಗೌಡ ಇದ್ದರು.
ಕ್ಯಾಂಪ್ಕೊ ನಿಯೋಗ ಮುಖ್ಯಮಂತ್ರಿ ಭೇಟಿ
ಮಂಗಳೂರು: ಅಡಕೆ ತೋಟಗಳಿಗೆ ಸಂಭವಿಸಿದ ಕೊಳೆರೋಗ ಪರಿಹಾರಕ್ಕೆ ಕಾಂಪ್ಕೊ ನೇತೃತ್ವದಲ್ಲಿ ಪ್ರಮುಖ ಸಹಕಾರಿಗಳ, ರೈತರ ಮತ್ತು ಜನಪ್ರತಿನಿಧಿಗಳ ನಿಯೋಗ ಸೆ. 6 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ.
ದ.ಕ., ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ 2013ನೇ ಸಾಲಿನಲ್ಲಿ ಶೇ. 60 ರಿಂದ 70 ಬೆಳೆಹಾನಿಯಾಗಿದೆ. ಈ ಕುರಿತು ಮುಖ್ಯಮಂತ್ರಿಯಲ್ಲಿ ಚರ್ಚಿಸಲಾಗುವುದು ಎಂದು ಕೇಂದ್ರ ಅಡಕೆ ಮತ್ತು ಕೋಕೋ ಮಾರಾಟ ಸಂಸ್ಕರಣೆ ಸಂಘದ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಸಿ.ಎನ್. ಶಾಸ್ತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

