ದಕ್ಷಿಣ ಕನ್ನಡ

ಭ್ರಷ್ಟಾಚಾರ ಮುಕ್ತ ಸಮಾಜ ಕಷ್ಟ: ಸಚಿವ

Published On :

ಕ.ಪ್ರ.ವಾರ್ತೆ   ಬೆಂಗಳೂರು   ಸೆ.10
ಜಾತ್ಯತೀತ ಸಮಾಜ ಹಾಗೂ ಭ್ರಷ್ಟಾಚಾರಮುಕ್ತ ಸಮಾಜ ಹೊಂದುವುದು ಕಷ್ಟ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅನಿಕೇತನ ಕನ್ನಡ ಬಳಗ ಏರ್ಪಡಿಸಿದ್ದ ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ಪೂರ್ಣಚಂದ್ರ ತೇಜಸ್ವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಪ್ರಶಸ್ತಿ ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಜಾತ್ಯಾತೀತತೆ ಇಂದು ನಿನ್ನೆಯದಲ್ಲ. ವಿಮರ್ಶೆಗಳು, ಚಿಂತನೆಯಿಂದ ಅವುಗಳು ನಾಳೆಯೇ ಸರಿ ಹೋಗುವುದಿಲ್ಲ. ಕ್ರಮೇಣವಾಗಿ ಅವುಗಳನ್ನು ಸರಿಪಡಿಸಬೇಕಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಸುಲಭ. ಆದರೆ, ರಾಜಕೀಯದಲ್ಲೂ ಅದನ್ನು ತಕ್ಷಣ ಸರಿಪಡಿಸಲು ಆಗದು. ಇರುವ ವ್ಯವಸ್ಥೆಯಲ್ಲಿ ನಾವೇ ಸರಿಯಾಗಿರುವುದನ್ನು ಹುಡುಕಿ ನಡೆಯಬೇಕು ಎಂದರು.
ಅಂತಹ ಪ್ರಯತ್ನವನ್ನು ನಾನು ಮಾಡುತ್ತೇನೆ. ಸಮಾಜಕ್ಕೆ ಉತ್ತಮ ಕೆಲಸ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಅದನ್ನು ಬಿಟ್ಟು ನಾವು ಸರಳವಾಗಿ ಹೋದರೆ ಅವು ಕೇವಲ ಚಿಂತನೆ, ವಿಮರ್ಶೆಗಳಾಗುತ್ತವೆ ಎಂದರು.
ಕೆಲವೊಮ್ಮೆ ಅನಿವಾರ್ಯವಾಗಿ ಸಮಾಜದ ವ್ಯವಸ್ಥೆಯನ್ನು ಒಪ್ಪಿಕೊಂಡು ಹೋಗಬೇಕಾಗುತ್ತದೆ. ಅದನ್ನು ಮೀರಿ ನಿಂತವರು ಮಹಾನ್ ವ್ಯಕ್ತಿಗಳಾಗುತ್ತಾರೆ. ಅದಕ್ಕೆ ರಾಷ್ಟ್ರಕವಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಅಂತಹವರು ಉದಾಹರಣೆ ಎಂದರು.
ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ಈಗ ಎಲ್ಲಿ ನೋಡಿದರೂ ಭ್ರಷ್ಟಾಚಾರದ ಮಾತುಗಳು ಕೇಳಿಬರುತ್ತಿವೆ. ಹಿಂದಿನ ಸರ್ಕಾರದಲ್ಲಿ ಯೋಗ್ಯ ಸಚಿವರನ್ನು ಭೂತಗನ್ನಡಿ ಹಾಕಿ ಹುಡುಕಿದರೂ ಸಿಗುತ್ತಿರಲಿಲ್ಲ.
ಆದರೆ, ಈ ಸರ್ಕಾರದಲ್ಲಿ ಕೆಲ ಉತ್ತಮ ರಾಜಕಾರಣಿಗಳಿದ್ದಾರೆ. ಅವರು ಯಾವುದೇ ಕಾರಣಕ್ಕೂ ಅಂತಹ ಅಡ್ಡದಾರಿ ಹಿಡಿಯದೆ ಜನರ ಕೆಲಸ ಮಾಡಲಿ ಎಂದರು.
ಕೆಲವರು ಸಚಿವರ ಸ್ಥಾನ ನೀಡಲಿಲ್ಲ ಎಂದು ಬೊಬ್ಬೆಯೊಡೆಯುತ್ತಾರೆ. ಶಾಸಕರ ಸ್ಥಾನವೊ ದೊಡ್ಡದು. ಆ ಅಧಿಕಾರವನ್ನು ಬಳಸಿ ತಮ್ಮ ವ್ಯಾಪ್ತಿಯ ಜನಸೇವೆ, ಅವರಿಗೆ ಅಗತ್ಯ ಸೌಲಭ್ಯ ಒದಗಿಸಲಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.