ಶೇ.2 ಬಡ್ಡಿದರ ಸಾಲ: ರಾಜೇಂದ್ರ ಕುಮಾರ್ ಆಗ್ರಹ
ಮಲ್ಪೆ: ರಾಜ್ಯ ಕಾಂಗ್ರೆಸ್ ಸರ್ಕಾರವು ಚುನಾವಣೆಗೆ ಮೊದಲು ಪ್ರಣಾಳಿಕೆಯಲ್ಲಿ ಹೇಳಿದಂತೆ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಶೇ. 2ರ ಬಡ್ಡಿದರದಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸುವಂತೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಇಲ್ಲಿನ ಕಾರ್ತಿಕ್ ಹಜ್ ಕಾಂಪ್ಲೆಕ್ಸ್ನಲ್ಲಿ ಬ್ಯಾಂಕ್ನ 63ನೇ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡವರಿಗೆ ಸಾಲ ನೀಡುವುದಿಲ್ಲ: ರಾಷ್ಟ್ರೀಕೃತ ಬ್ಯಾಂಕುಗಳು ಲಕ್ಷಾಂತರ ರು. ಆದಾಯ ತೆರಿಗೆ ಕಟ್ಟುವವರಿಗೆ ಮಾತ್ರ ಸಾಲ ನೀಡುತ್ತವೆ, ಬಡವರಿಗೆ ನೀಡುವುದಿಲ್ಲ. ಆದರೆ ಸಹಕಾರಿ ಬ್ಯಾಂಕುಗಳು ಅಂತಹ ತಾರತಮ್ಯ ಮಾಡುವುದಿಲ್ಲ, ಯಾರೇ ಸಾಲ ಕೇಳಲಿ, ಅವರವರ ಆರ್ಥಿಕ ಸಾಮರ್ಥ್ಯ ಪರಿಗಣಿಸಿ ಸಾಲ ನೀಡಲಾಗುವುದು. ಎಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸಹಕಾರಿ ಬ್ಯಾಂಕುಗಳಿರುತ್ತವೆಯೋ ಅಲ್ಲಿನ ಜನರ ಆರ್ಥಿಕ ಜೀವನ ಮಟ್ಟ ಸುಧಾರಣೆಯಾಗುತ್ತದೆ, ಇದು ಸಹಕಾರಿ ಬ್ಯಾಂಕುಗಳ ತಾಕತ್ತು ಮತ್ತು ಸಾಧನೆ ಎಂದು ಅವರು ಹೇಳಿದರು.
100 ಕೋಟಿ ಸಾಲ ನೀಡಲು ಸಿದ್ಧ: ಮಲ್ಪೆ ಪರಿಸರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣದ ವ್ಯವಹಾರ ನಡೆಯುತ್ತದೆ, ಮಲ್ಪೆಯ ಹೊಸ ಶಾಖೆಯಲ್ಲಿ ರು. 6 ಕೋಟಿ ಠೇವಣಿ ಸಂಗ್ರಹ ಮಾಡಲಾಗಿದೆ, ರು. 60 ಕೋಟಿ ಸಾಲ ಕೊಡುವ ಸಾಮರ್ಥ್ಯ ಈ ಬ್ಯಾಂಕಿಗಿದೆ, ಆದರೆ ಅಗತ್ಯ ಬಿದ್ದರೆ ರು. 100 ಕೋಟಿ ಸಾಲ ನೀಡಲೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಸಿದ್ದವಾದಿದೆ ಎಂದು ಅವರು ಈ ಸಂದರ್ಭ ಘೋಷಿಸಿದರು.
ಬ್ಯಾಂಕ್ ಉದ್ಘಾಟಿಸಿದ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಸಹಕಾರಿ ಬ್ಯಾಂಕುಗಳಿಗೆ ಜನಸಾಮಾನ್ಯರಿಗೆ ಸಾಲ ನೀಡುವ ಕರ್ತವ್ಯ ಹೇಗಿದೆಯೋ, ಪಡೆದ ಸಾಲ ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುವ ಕರ್ತವ್ಯ ಕೂಡ ಸಾಲ ಪಡೆದವರಿಗಿದೆ ಎಂಬ ಎಚ್ಚರಿಕೆ ಮಾತುಗಳನ್ನಾಡಿದರು.
ಸ್ಥಳೀಯ ಕೊಡವೂರು ಸಹಕಾರಿ ಬ್ಯಾಂಕಿನ ಅಧ್ಯಕ್ಷ ನಾರಾಯಣ ಕೆ. ಬಲ್ಲಾಳ್ ನೂತನ ಸಂಸ್ಥೆಯ ಗಣಕೀಕರಣ ವ್ಯವಸ್ಥೆ ಉದ್ಘಾಟಸಿದರು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಎಂ. ವಾದಿರಾಜ್ ಶೆಟ್ಟಿ, ರಾಜು ಪೂಜಾರಿ, ಇಲಾಖಾಧಿಕಾರಿ ಕಾಂತರಾಜ್, ಅಜೆಕಾರು ಸಹಕಾರಿ ಸಂಘದ ಅಧ್ಯಕ್ಷ ಭವಾನಿ ಶಂಕರ್, ಉಪ್ಪೂರು ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಎಂ. ಶೆಟ್ಟಿ ಇದ್ದರು.
ವಿದ್ಯಾರ್ಥಿ ವೇತನ ವಿತರಣೆ: ನವೋದಯ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಬ್ಯಾಂಕಿನ ಮೊದಲ ಗ್ರಾಹಕರಿಗೆ ಠೇವಣಿ ಪತ್ರ ಮತ್ತು ಸಂಚಯನ ನಿಧಿಪತ್ರ ವಿತರಿಸಲಾಯಿತು.
ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕಿಶನ್ ಹೆಗ್ಡೆ ಕೊಳ್ಕೆಬೈಲು ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಎಂ. ಗೋಪಾಲಕೃಷ್ಣ ಭಟ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

